Advertisement

ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 1,000 ವಿಕೆಟ್ ಪಡೆದ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್

12:01 PM Jul 06, 2021 | Team Udayavani |

ಲಂಡನ್: ಇಂಗ್ಲೆಂಡ್ ನ ಖ್ಯಾತ ವೇಗಿ ಜೇಮ್ಸ್ ಆ್ಯಂಡರ್ಸನ್ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಒಂದು ಸಾವಿರ ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ಕೌಂಟಿ ಕ್ರಿಕೆಟ್ ನಲ್ಲಿ ಲ್ಯಾಂಕ್ ಶೈರ್ ತಂಡದ ಪರವಾಗಿ  ಆಡುತ್ತಿರುವ ಜಿಮ್ಮಿ ಕೆಂಟ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದರು.

Advertisement

ಇಲ್ಲಿನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆ್ಯಂಡರ್ಸನ್ ಏಳು ವಿಕೆಟ್ ಕಿತ್ತರು. ಅಷ್ಟೇ ಅಲ್ಲದೆ ತನ್ನ ಜೀವನ ಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದ ಅವರು ಕೇವಲ 19 ರನ್ ನೀಡಿ ಏಳು ವಿಕೆಟ್ ಪಡೆದರು. ಕೆಂಟ್ ತಂಡ ಕೇವಲ 74 ರನ್ ಗೆ ಆಲೌಟ್ ಆಯಿತು.

ಸದ್ಯ ಜೇಮ್ಸ್ ಆ್ಯಂಡರ್ಸನ್ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 1002 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ಇತ್ತೀಚೆಗಷ್ಟೇ ಇಂಗ್ಲೆಂಡ್ ಪರ ಅತೀ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿಆಡಿದ ಸಾಧನೆಯನ್ನು ಆ್ಯಂಡರ್ಸನ್ ಮಾಡಿದ್ದರು. 161 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದ ಮಾಜಿ ನಾಯಕ ಅಲಿಸ್ಟರ್ ಕುಕ್ ದಾಖಲೆಯನ್ನು ಆ್ಯಂಡರ್ಸನ್ ಕಳೆದ ತಿಂಗಳು ಅಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next