Advertisement

ಇಂಗ್ಲೆಂಡ್‌ ತಂಡಕ್ಕೆ ಮರಳಿದ ಜೇಮ್ಸ್‌ ಆ್ಯಂಡರ್ಸನ್‌,ಸ್ಟುವರ್ಟ್‌ ಬ್ರಾಡ್‌

02:02 AM May 19, 2022 | Team Udayavani |

ಲಂಡನ್‌: ವೇಗಿಗಳಾದ ಜೇಮ್ಸ್‌ ಆ್ಯಂಡರ್ಸನ್‌ ಮತ್ತು ಸ್ಟುವರ್ಟ್‌ ಬ್ರಾಡ್‌ ಇಂಗ್ಲೆಂಡ್‌‌ ಟೆಸ್ಟ್‌ ತಂಡಕ್ಕೆ ಮರಳಿದ್ದಾರೆ.

Advertisement

ಪ್ರವಾಸಿ ನ್ಯೂಜಿಲ್ಯಾಂಡ್‌ ಎದುರಿನ ಮೊದಲೆರಡು ಪಂದ್ಯಗಳಿಗಾಗಿ ಇವರನ್ನು ಸೇರಿಸಿಕೊಳ್ಳಲಾಗಿದೆ.

ಆ್ಯಶಸ್‌ನಲ್ಲಿ ತೋರ್ಪಡಿಸಿದ ಕಳಪೆ ಪ್ರದರ್ಶನದ ಬಳಿಕ ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಗಾಗಿ ಆ್ಯಂಡರ್ಸನ್‌ ಮತ್ತು ಬ್ರಾಡ್‌ ಅವರನ್ನು ಕೈಬಿಡಲಾಗಿತ್ತು.

ಆದರೆ ಅನಂತರ ಇಂಗ್ಲೆಂಡ್‌ ಟೆಸ್ಟ್‌ ತಂಡದಲ್ಲಿ ಬಹಳಷ್ಟು ಬದಲಾವಣೆ ಸಂಭವಿಸಿತು. ಜೋ ರೂಟ್‌ ನಾಯಕತ್ವದಿಂದ ಕೆಳಗಿಳಿದರು, ಇವರ ಸ್ಥಾನಕ್ಕೆ ಬೆನ್‌ ಸ್ಟೋಕ್ಸ್‌ ಬಂದರು, ಬ್ರೆಂಡನ್‌ ಮೆಕಲಮ್‌ ಕೋಚ್‌ ಆಗಿ ನೇಮಕಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next