Advertisement
“ಒಪ್ಪಿಗೆ’ಯಿಂದ ಸೌದಿ ವಿಮಾನಗಳಿಗೆಅಮೆರಿಕ ಇಂಧನ ಪೂರೈಕೆಯಿಲ್ಲ: ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆ ಬಳಿಕದ ಪ್ರಮುಖ ಬೆಳವಣಿಗೆಯಲ್ಲಿ ಯೆಮೆನ್ ವಿರುದ್ಧ ಸೌದಿ ಅರೇಬಿಯಾ ನೇತೃತ್ವದ ಕಾಳಗಕ್ಕೆ ಬೆಂಬಲ ನೀಡಲು ಅಮೆರಿಕ ನಿರಾಕರಿಸಿದೆ. ಅದಕ್ಕೆ ಪೂರಕವಾಗಿ ಸೌದಿ ಅರೇಬಿಯಾದ ವಿಮಾನಗಳಿಗೆ ಇಂಧನ ಪೂರೈಕೆ ಮಾಡುವುದನ್ನು ನಿಲ್ಲಿಸುವುದಾಗಿ ಹೇಳಿಕೊಂಡಿದೆ. ಕುತೂಹಲಕಾರಿ ವಿಚಾರವೆಂದರೆ 2 ರಾಷ್ಟ್ರಗಳೂ ಪರಸ್ಪರ ಒಪ್ಪಿಗೆಯಿಂದಲೇ ಈ ನಿರ್ಧಾರಕ್ಕೆ ಬಂದಿವೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ “ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯಲ್ಲಿ ವರದಿಯೂ ಪ್ರಕಟವಾಗಿತ್ತು. ಯಮೆನ್‌ನಲ್ಲಿ ರಿಯಾದ್ ಕೈಗೊಂಡಿರುವ ಮಿಲಿಟರಿ ಕಾರ್ಯಾಚರಣೆ ಬಗ್ಗೆ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಬಲ ಆಕ್ಷೇಪ ವ್ಯಕ್ತವಾಗಿದೆ. ಇದೇ ವೇಳೆ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಮಾರ್ಟಿನ್ ಗ್ರಿಫ್ ಮುಗ್ಧರ ಹತ್ಯೆ ತಪ್ಪಿಸಲು ಎಲ್ಲರೂ ಕೈಜೋಡಿಸಬೇಕಾಗಿದೆ ಎಂದಿದ್ದಾರೆ.