Advertisement

ದೆಹಲಿ ಜಾಮಾ ಮಸೀದಿಗೆ ಮಹಿಳೆಯರ ಪ್ರವೇಶ ನಿಷೇಧ; ಮಹಿಳಾ ಆಯೋಗ ನೋಟಿಸ್

03:41 PM Nov 24, 2022 | Team Udayavani |

ನವದೆಹಲಿ : ಜಾಮಾ ಮಸೀದಿ ಆಡಳಿತವು ಮಸೀದಿಯ ಹೊರಗೆ ಎಚ್ಚರಿಕೆ ಫಲಕಗಳನ್ನು ಹಾಕಿದ್ದು, ಮಹಿಳೆಯರಿಗೆ ಒಳಗೆ ಪ್ರವೇಶವಿಲ್ಲ ಎಂದು ಬರೆಯಲಾಗಿದೆ. ಮಸೀದಿಯ ಮೂರು ಪ್ರವೇಶದ್ವಾರಗಳ ಹೊರಗೆ ಫಲಕಗಳನ್ನು ಹಾಕಲಾಗಿದೆ.

Advertisement

“ಹೆಣ್ಣುಮಕ್ಕಳು ಮತ್ತು ಮಹಿಳೆಯರು ಜಮಾ ಮಸೀದಿಯನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ” ಎಂದು ಫಲಕಗಳನ್ನು ಹಾಕಲಾಗಿದೆ. ಈ ಕ್ರಮವು ಹಲವಾರು ಭಾಗಗಳಿಂದ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ಹುಟ್ಟುಹಾಕಿದೆ. ಇದನ್ನು “ಮೂಲಭೂತವಾದಿ ಮನಸ್ಥಿತಿ” ಎಂದು ಕರೆಯಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್, ಜಾಮಾ ಮಸೀದಿಯ ಇಮಾಮ್‌ಗೆ ನೋಟಿಸ್ ಜಾರಿ ಮಾಡಲಾಗಿದ್ದು, “ಈ ರೀತಿಯ ಮಹಿಳೆಯರ ಪ್ರವೇಶವನ್ನು ನಿಷೇಧಿಸುವ ಹಕ್ಕು ಯಾರಿಗೂ ಇಲ್ಲ” ಎಂದು ಹೇಳಿದ್ದಾರೆ.

“ಜಾಮಾ ಮಸೀದಿಗೆ ಮಹಿಳೆಯರ ಪ್ರವೇಶವನ್ನು ನಿಲ್ಲಿಸುವ ನಿರ್ಧಾರವು ಸಂಪೂರ್ಣವಾಗಿ ತಪ್ಪು, ಪುರುಷನಿಗೆ ಪೂಜೆ ಮಾಡುವ ಹಕ್ಕಿದೆ, ಮಹಿಳೆಗೂ ಇದೆ, ನಾನು ಜಾಮಾ ಮಸೀದಿಯ ಇಮಾಮ್‌ಗೆ ನೋಟಿಸ್ ನೀಡುತ್ತಿದ್ದೇನೆ”ಎಂದು ಡಿಸಿಡಬ್ಲ್ಯು ಮುಖ್ಯಸ್ಥರು ಟ್ವೀಟ್ ಮಾಡಿದ್ದಾರೆ.

ವಿಶ್ವ ಹಿಂದೂ ಪರಿಷತ್ ಕೂಡ ಈ ನಿರ್ಧಾರವನ್ನು ಟೀಕಿಸಿದ್ದು, ಇದನ್ನು “ಮಹಿಳಾ ವಿರೋಧಿ” ಎಂದು ಕರೆದಿದೆ. ಈ ಪ್ರಕರಣದಲ್ಲಿ ಕಾರ್ಯನಿರ್ವಹಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕೇಳಿಕೊಂಡಿದೆ.

ಒಂಟಿಯಾಗಿ ಬರುವ ಮಹಿಳೆಗೆ ನಿಷೇಧ

Advertisement

”ಮಹಿಳೆಯರ ಪ್ರವೇಶವನ್ನು ನಿಷೇಧಿಸಿಲ್ಲ. ಮಹಿಳೆಯರು ಒಂಟಿಯಾಗಿ ಬಂದಾಗ-ಅನುಚಿತ ಕೃತ್ಯಗಳು ನಡೆಯಬಾರದು, ವಿಡಿಯೋ ಚಿತ್ರೀಕರಣ ನಿಷೇಧವಿದೆ. ಇದನ್ನು ತಡೆಯಲು ಕುಟುಂಬದವರೊಂದಿಗೆ ಬರುವ, ವಿವಾಹಿತ ದಂಪತಿಗಳ ಮೇಲೆ ಯಾವುದೇ ನಿರ್ಬಂಧಗಳಿಲ್ಲ. ಧಾರ್ಮಿಕ ಸ್ಥಳಗಳವನ್ನು ಸಭೆಯ ಸ್ಥಳವನ್ನಾಗಿ ಮಾಡುವುದು ಸೂಕ್ತವಲ್ಲ” ಎಂದು ಜಾಮಾ ಮಸೀದಿಯ ಪಿಆರ್ ಓ ಸಬೀವುಲ್ಲಾ ಖಾನ್ ಹೇಳಿದ್ದಾರೆ. ಮಸೀದಿ ಆಡಳಿತದ ಪ್ರಕಾರ ಮಹಿಳೆಯರಿಗೆ ತಮ್ಮ ಪತಿ ಅಥವಾ ಕುಟುಂಬದೊಂದಿಗೆ ಮಸೀದಿಯನ್ನು ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next