Advertisement

Jallikattu: ಗಡಿದಾಟಿದ ಜಲ್ಲಿಕಟ್ಟು ಕ್ರೀಡೆ; ಇದೇ ಮೊದಲ ಬಾರಿಗೆ ಶ್ರೀಲಂಕಾದಲ್ಲಿ ಆಯೋಜನೆ

06:58 PM Jan 06, 2024 | Team Udayavani |

ಕೊಲಂಬೊ: ತಮಿಳುನಾಡಿನ ಜನಪ್ರಿಯ ಸಾಂಪ್ರದಾಯಿಕ  ಜಲ್ಲಿಕಟ್ಟು ಕ್ರೀಡೆ ಇದೇ ಮೊದಲ ಬಾರಿಗೆ ನೆರೆಯ ಶ್ರೀಲಂಕಾದಲ್ಲಿ ಆಯೋಜನೆಗೊಂಡಿದೆ.

Advertisement

ಶತಮಾನಗಳ ಇತಿಹಾಸವುಳ್ಳ ಜಲ್ಲಿಕಟ್ಟು ಕ್ರೀಡೆಯನ್ನು ಸಂಕ್ರಾಂತಿಯ ಸಂದರ್ಭದಲ್ಲಿ ಅದ್ಧೂರಿಯಾಗಿಯೇ ಆಯೋಜಿಸುತ್ತಾರೆ. ತಮಿಳರು ಇದನ್ನು ಆಚರಣೆಯಾಗಿ ಪರಿಗಣಿಸುತ್ತಾರೆ.  ಪೊಂಗಲ್ ಹಬ್ಬದ ಹಬ್ಬದ ಸಂದರ್ಭದಲ್ಲಿ ತಮಿಳುನಾಡಿನ ಕೆಲವು ಭಾಗಗಳಲ್ಲಿ ಸಾಂಪ್ರದಾಯಿಕವಾಗಿ ಆಡಲಾಗುವ ಜಲ್ಲಿಕಟ್ಟು ಕ್ರೀಡೆ ಇದೇ ಮೊದಲ ಬಾರಿಗೆ ಗಡಿದಾಟಿದೆ.

ಶ್ರೀಲಂಕಾದ ಟ್ರಿಂಕೋಮಲಿ ಶನಿವಾರ (ಜ.6 ರಂದು) ಲಂಕಾದ ಪೂರ್ವ ಪ್ರಾಂತ್ಯದ ಗವರ್ನರ್ ಸೆಂಥಿಲ್ ತೊಂಡಮನ್ ಮತ್ತು ಮಲೇಷ್ಯಾ ಸಂಸದ ಸರವಣನ್ ಮುರುಗನ್ ಅವರು ಶ್ರೀಲಂಕಾದಲ್ಲಿ ಜಲ್ಲಿಕಟ್ಟು ಸ್ಪರ್ಧೆಗೆ ಚಾಲನೆ ನೀಡಿದರು.

ಲಂಕಾದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಸುಮಾರು 200 ಹೋರಿಗಳು ಭಾಗವಹಿಸುವ ನಿರೀಕ್ಷೆಯಿದ್ದು, 100 ಗೂಳಿ ಪಳಗಿಸುವವರು ಟ್ರಿಂಕೋಮಲಿಯಲ್ಲಿ ಕ್ರೀಡೆಯನ್ನು ಆಡಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಭಾಗವಹಿಸುವವರು ಮತ್ತು ವೀಕ್ಷಕರ ಸುರಕ್ಷತೆ ಮತ್ತು ಭದ್ರತೆಗಾಗಿ 100 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ತಮಿಳುನಾಡಿನ ಶಿವಗಂಗೈ ಜಿಲ್ಲೆಯವರಾದ ತೊಂಡಮಾನ್ ಅವರನ್ನು ಜಲ್ಲಿಕಟ್ಟು ಕಾರ್ಯಕ್ರಮದ ಆಯೋಜನೆಯ ಉಸ್ತುವಾರಿಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

Advertisement

“ನಾವು ಜಲ್ಲಿಕಟ್ಟು, ರೇಕ್ಲಾ ರೇಸ್, ಸಿಲಂಬಂ ಕಾಳಗ, ದೋಣಿ ಓಟಗಳನ್ನು ನಡೆಸುತ್ತೇವೆ ಮತ್ತು ಇಲ್ಲಿ ನಡೆಯುತ್ತಿರುವ ಪೊಂಗಲ್‌ಗೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ನಾವು ನಡೆಸುತ್ತೇವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಮಗೆ ಹೆಮ್ಮೆ ತಂದಿವೆ. ತಮಿಳು ಸಮುದಾಯದೊಂದಿಗೆ ಇದನ್ನು ಇಲ್ಲಿ ಪುನಃಸ್ಥಾಪಿಸಿರುವುದು ಎಂದು ಎಎನ್‌ಐಗೆ ತೊಂಡಮಾನ್ ಹೇಳಿದರು.

ಇತ್ತ ತಮಿಳುನಾಡಿನಲ್ಲೂ ಶನಿವಾರ ಜಲ್ಲಿಕಟ್ಟು ಶುರುವಾಗಿದ್ದು, ಮೊದಲ ದಿನವೇ ಸ್ಪರ್ಧೆಯಲ್ಲಿ 29 ಮಂದಿಗೆ ಗಾಯಗಳಾಗಿವೆ.  ಉದ್ಘಾಟನಾ ದಿನದಂದು ಸುಮಾರು 500 ಹೋರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next