Advertisement

ಜಲಸಿರಿ ಯೋಜನೆಯಿಂದ ನೀರು ಸರಬರಾಜು ಸರಾಗ: ಶಾಸಕ ಕಾಮತ್‌

11:11 AM Apr 18, 2022 | Team Udayavani |

ಮರೋಳಿ: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 24×7 ಕುಡಿಯುವ ನೀರು ಒದಗಿಸುವ ಜಲಸಿರಿ ಯೋಜನೆಯಡಿ 10 ಲಕ್ಷ ಲೀ. ಸಂಗ್ರಹಣಾ ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಾಗಾರ ನಿರ್ಮಾಣಕ್ಕೆ ಮರೋಳಿಯ ಹೋಲಿಹಿಲ್‌ ಬಳಿ ಶಾಸಕ ವೇದವ್ಯಾಸ ಕಾಮತ್‌ ಭೂಮಿಪೂಜೆ ನೆರವೇರಿಸಿದರು.

Advertisement

ಬಳಿಕ ಅವರು ಮಾತನಾಡಿ, ಹೋಲಿಹಿಲ್‌ ಬಳಿ 2.30 ಕೋ.ರೂ. ವೆಚ್ಚದಲ್ಲಿ ನಿರ್ಮಾಣ ವಾಗುವ ಜಲಸಂಗ್ರಹಾಗಾರ ದಿಂದ ಮರೋಳಿ, ವೆಲೆನ್ಸಿಯಾ, ಅಳಪೆ ಉತ್ತರ ವಾರ್ಡ್‌ನ 1723 ಮನೆಗಳಿಗೆ ನೀರು ಪೂರೈಸಲಾಗುತ್ತದೆ. ಪಾಲಿಕೆ ವ್ಯಾಪ್ತಿಯ 3 ವಾರ್ಡ್‌ನ ಪ್ರತಿ ಮನೆಗೂ ನೀರು ಪೂರೈಸಲು ಮೇಲ್ಮಟ್ಟದ ಜಲಸಂಗ್ರಹಾಗಾರ ನಿರ್ಮಾಣ ಮಾಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ನೀರಿನ ಸರಬರಾಜು ಸುಲಭಗೊಳಿಸಲು ಇದು ಪೂರಕವಾಗಲಿದೆ ಎಂದರು.

ಮಹಾನಗರ ಪಾಲಿಕೆಯ ಮೇಯರ್‌ ಪ್ರೇಮಾನಂದ ಶೆಟ್ಟಿ, ಪಾಲಿಕೆ ಉಪಮಹಾಪೌರರಾದ ಸುಮಂಗಲಾ ರಾವ್‌, ಪಾಲಿಕೆ ಸ್ಥಾಯೀ ಸಮಿತಿಯ ಅಧ್ಯಕ್ಷ ಸಂದೀಪ್‌ ಗರೋಡಿ, ಪಾಲಿಕೆ ಸದಸ್ಯರಾದ ಕೇಶವ ಮರೋಳಿ, ರೂಪಶ್ರೀ ಪೂಜಾರಿ, ಮುಖಂಡರಾದ ಕಿರಣ್‌ ಮರೋಳಿ, ಕೃಷ್ಣ ಎಸ್.ಆರ್., ಜಗದೀಶ್‌ ಶೆಣೈ, ವಸಂತ್‌ ಜೆ.ಪೂಜಾರಿ, ಜಗನ್ನಾಥ್‌ ಆಡುಮನೆ, ಪ್ರಶಾಂತ್‌ ಮರೋಳಿ, ರಾಘು, ಅರುಣ್‌ ಶೆಟ್ಟಿ, ರವಿ ಸತೀಶ್‌, ತೇಜಾಕ್ಷ ಸುವರ್ಣ, ಹರಿಣಾಕ್ಷ, ನಾಗೇಶ್‌ ದೇವಾಡಿಗ, ಅಂಬುಜಾಕ್ಷ ಆಚಾರ್ಯ, ಜನಾರ್ದನ, ಅನುಪಮಾ, ಫ್ರಾನ್ಸಿಸ್‌, ಶಿವಪ್ಪ ಅಮೀನ್‌, ಭೋಜ ಅಮೀನ್‌, ಜೆರೋಮ್‌ ಫೆರ್ನಾಂಡಿಸ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next