Advertisement

ಜಲಜೀವನ ಮಿಷನ್‌ ಕಾಮಗಾರಿಗೆ ಚಾಲನೆ

11:04 AM May 10, 2022 | Team Udayavani |

ಆಳಂದ: ತಾಲೂಕಿನ ಕಾಮನಳ್ಳಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಮೂಲಕ ಅನುಮೋದನೆಗೊಂಡ 66 ಲಕ್ಷಗಳ 231 ಮನೆಗಳಿಗೆ ನೀರು ಸರಬರಾಜು, ನಳ ಕೂಡಿಸುವಿಕೆ ಹಾಗೂ 50000 ಲೀಟರ್‌ ಸಾಮರ್ಥ್ಯದ ನೀರಿನ ಟ್ಯಾಂಕ್‌ ನಿರ್ಮಾಣ ಕಾಮಗಾರಿಯ ಭೂಮಿಪೂಜೆಯನ್ನು ಶಾಸಕ ಸುಭಾಷ ಗುತ್ತೇದಾರ ನೆರವೇರಿಸಿದರು.

Advertisement

ನಂತರ ಮಾತನಾಡಿದ ಶಾಸಕರು, ಕಾಮನಳ್ಳಿ ಗ್ರಾಮ ಚಿಕ್ಕದಾಗಿದ್ದರೂ ಅನೇಕ ವೈವಿಧ್ಯತೆಗಳನ್ನು ಹೊಂದಿದೆ. ಇಲ್ಲಿಯ ಜನರು ಶ್ರಮಜೀವಿಗಳಾಗಿದ್ದು, ಯಾರ ಮೇಲೆಯೂ ಅವಲಂಬನೆಯಾಗದೇ ಸ್ವತಂತ್ರ ಜೀವನ ನಡೆಸುತ್ತಾರೆ. ಹೀಗಾಗಿ ಈ ಗ್ರಾಮಕ್ಕೆ ಬೇಕಾಗಿರುವ ಎಲ್ಲ ಸೌಕರ್ಯ ಒದಗಿಸಲು ಶ್ರಮಿಸುತ್ತೇನೆ ಎಂದು ಹೇಳಿದರು.

ಮುಖಂಡರಾದ ಸಿದ್ದು ಹಿರೋಳಿ, ಮಹಾಂತಪ್ಪ ಆಲೂರೆ, ಅಜಿತ ಕುಲ್ಕರ್ಣಿ, ಚಂದ್ರಕಾಂತ, ಎಇಇ ಚಂದ್ರಮೌಳಿ, ಗುತ್ತಿಗೆದಾರರಾದ ಹಣಮಂತ ಮೇಟಿ, ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next