Advertisement
ಹೆಮ್ಮಾಡಿ – ಕಟ್‌ಬೆಲೂ¤ರು ಪಂಚಾಯತ್ ವ್ಯಾಪ್ತಿಯ ಜಾಲಾಡಿ, ಹೊಸ್ಕಳಿ ಭಾಗದ 70ಕ್ಕೂ ಹೆಚ್ಚು ಮಂದಿ ರೈತರ 100 ಎಕರೆಗಳಿಗೂ ಮಿಕ್ಕಿ ಪ್ರದೇಶದ ಗದ್ದೆಗಳಿಗೆ ಉಪ್ಪು ನೀರು ನುಗ್ಗುತ್ತಿದೆ. ರಾಜಾಡಿ ವ್ಯಾಪ್ತಿಗೆ ಅನುಕೂಲವಾಗುವಂತೆ 4.44 ಕೋ. ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾದ ಬಳಿಕ ಈ ಜಾಲಾಡಿ ಪರಿಸರದ ಗದ್ದೆಗಳಿಗೆ ಉಪ್ಪು ನೀರಿನ ಹಾವಳಿ ಹೆಚ್ಚಾಗಿದೆ. ಇದಷ್ಟೇ ಅಲ್ಲದೆ ಈ ಭಾಗದ ಬಾವಿಗಳ ನೀರಲ್ಲೂ ಉಪ್ಪಿನಂಶ ಹೆಚ್ಚಾ ಗಿದೆ.
Related Articles
Advertisement
ಇನ್ನೀಗ ಕೆಲವು ತಿಂಗಳಲ್ಲಿಯೇ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಆರಂಭ ಗೊಳ್ಳಲಿದ್ದು, ಇಷ್ಟರೊಳಗೆ ಜಾಲಾಡಿಯಲ್ಲಿ ನದಿ ದಂಡೆ ನಿರ್ಮಾಣವಾಗಿದ್ದರೆ, ಈ ಭಾಗದ ರೈತರು ನಿರಾತಂಕವಾಗಿ ಕೃಷಿಯಲ್ಲಿ ತೊಡಗಿಸಿ ಕೊಳ್ಳಬಹುದಿತ್ತು. ಆದರೆ ಈ ಬಾರಿ ಬೇಸಾಯ ಮಾಡಿದರೂ ಯಾವಾಗ ಗದ್ದೆಗಳಿಗೆ ಉಪ್ಪು ನೀರು ನುಗ್ಗುತ್ತದೋ ಎನ್ನುವ ಆತಂಕದಲ್ಲಿಯೇ ದಿನ ಕಳೆಯಬೇಕಾಗಿದ್ದು, ಆದಷ್ಟು ಬೇಗ, ಮೇಯೊಳಗೆ ನದಿ ದಂಡೆ ನಿರ್ಮಿಸಿಕೊಡಿ ಎನ್ನುವುದಾಗಿ ಇಲ್ಲಿನ ರೈತರು ಮನವಿ ಮಾಡಿಕೊಂಡಿದ್ದಾರೆ.
ನದಿ ದಂಡೆ ಯಾವಾಗ? :
ಜಾಲಾಡಿಯಲ್ಲಿ ಹಿಂದೆ ಇದ್ದ ಕಿಂಡಿ ಅಣೆಕಟ್ಟು ಕುಸಿದು ಬಿದ್ದು ವರ್ಷಗಳೇ ಕಳೆದಿದ್ದು, ಆ ವೇಳೆ ಶಾಸಕರೇ ಇಲ್ಲಿಗೆ ಭೇಟಿ ನೀಡಿ, ಇಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನದಿ ದಂಡೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದರು. ಈ ಬಗ್ಗೆ ಹಲವಾರು ಬಾರಿ ರೈತರು ಮನವಿ ಸಲ್ಲಿಸಿದ್ದರೂ ನದಿ ದಂಡೆ ಮಾತ್ರ ನಿರ್ಮಾಣವಾಗಿಲ್ಲ. ಕಳೆದ ಕೆಲವು ದಿನಗಳಿಂದ ಇಲ್ಲಿನ ಎಲ್ಲ ಗದ್ದೆಗಳಿಗೆ ನೀರು ನುಗ್ಗುತ್ತಿದ್ದು, ಇದು ಹೀಗೇ ಮುಂದುವರಿದರೆ ಮುಂದಿನ ಹಂಗಾಮಿನಲ್ಲಿ ಬೆಳೆ ಬೆಳೆಯುವುದು ಸಹ ಕಷ್ಟ ಎನ್ನುವುದು ರೈತರ ಆತಂಕವಾಗಿದೆ. ಹಿಂಗಾರಿನಲ್ಲಿ ಬೆಳೆಯಲಾದ ಉದ್ದು, ಕಲ್ಲಂಗಡಿ, ನೆಲಗಡಲೆ ಕೃಷಿಗೂ ಉಪ್ಪು ನೀರಿನಿಂದಾಗಿ ಹಾನಿಯಾಗಿತ್ತು.
ಜಾಲಾಡಿಯಲ್ಲಿ ಗದ್ದೆಗಳಿಗೆ ಉಪ್ಪು ನೀರು ನುಗ್ಗಿ ಹಾನಿಯಾಗುತ್ತಿರುವುದರ ಬಗ್ಗೆ ಗಮನದಲ್ಲಿದ್ದು, ಈ ಹಿಂದೆ ಹೇಳಿದಂತೆಯೇ ನದಿ ದಂಡೆ ನಿರ್ಮಾಣ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಬೈಂದೂರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡುತ್ತಿದ್ದು ಕ್ಷೇತ್ರದ ಎಲ್ಲ ಸಮಸ್ಯೆಗಳನ್ನು ಹಂತ-ಹಂತವಾಗಿ ಬಗೆಹರಿಸಲು ಬದ್ಧನಾಗಿದ್ದೇನೆ. – ಬಿ.ಎಂ. ಸುಕುಮಾರ್ ಶೆಟ್ಟಿ, ಬೈಂದೂರು ಶಾಸಕರು
– ಪ್ರಶಾಂತ್ ಪಾದೆ