Advertisement

ಜಲ ಅಭಿಯಾನಕ್ಕೆ ಪ್ರಧಾನಿ ಇಂದು ಚಾಲನೆ 

11:45 PM Mar 21, 2021 | Team Udayavani |

ಹೊಸದಿಲ್ಲಿ: “ಜಲ ಶಕ್ತಿ ಅಭಿಯಾನ: ಕ್ಯಾಚ್‌ ದ ರೈನ್‌’ ಅಭಿಯಾನವನ್ನು  ಸೋಮವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿ­ದ್ದಾರೆ. ಮಾ.22 ರಂದು “ವಿಶ್ವಜಲ ದಿನ’ವೂ ಆಗಿರುವುದರಿಂದ ಈ ಕಾರ್ಯ­ಕ್ರಮ ಮಹತ್ವ ಪಡೆದಿದೆ. ಇದರ ಜತೆಗೆ, ದೇಶದಲ್ಲಿ ನದಿಗಳ ಜೋಡಣೆಗೆ ಸಂಬಂಧಿಸಿ­ದಂತೆ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿಗಳು ಕೆನ್‌ ಬೆಟ್ವಾ ಲಿಂಕ್‌ ಯೋಜನೆ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.

Advertisement

ಸೋಮವಾರದಿಂದ ನ.30ರ ವರೆಗೆ ದೇಶದ ಗ್ರಾಮೀಣ ಮತ್ತು ನಗರ, ಪಟ್ಟಣ ಪ್ರದೇಶದಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ. ಅದನ್ನು ಜನರ ಆಂದೋಲನವನ್ನಾಗಿ ಮಾಡಲಾಗುತ್ತದೆ. ಈ ಮೂಲಕ ನೀರಿನ ಮಹತ್ವದ ಬಗ್ಗೆ ತಳಮಟ್ಟದ ವ್ಯಕ್ತಿಗೂ ತಲುಪಿಸುವ ರೀತಿಯಲ್ಲಿ ನಡೆಸಲಾಗುತ್ತದೆ ಎಂದು ಪ್ರಧಾನಮಂತ್ರಿಗಳ ಕಚೇರಿ ತಿಳಿಸಿದೆ.

ಕೆನ್‌ ಬೆಟ್ವಾ ಲಿಂಕ್‌ ಯೋಜನೆ :

ದೇಶಾದ್ಯಂತ ನದಿಗಳ ಜೋಡಣೆಗಾಗಿನ ಯೋಜನೆ. ಈ ಪೈಕಿ ಮೊದಲ ಯೋಜನೆ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲಿ ಅನುಷ್ಠಾನ. ಉ.ಪ್ರ.ದ ಕೆನ್‌ ನದಿಯಿಂದ ಮಧ್ಯ ಪ್ರದೇಶದ ಬೆಟ್ವಾ ನದಿಗೆ ನೀರನ್ನು ಈ ಒಪ್ಪಂದದ ಅನ್ವಯ ಪೂರೈಸಲಾಗುತ್ತದೆ. ಮಾಜಿ ಪ್ರಧಾನಿ ದಿ| ಅಟಲ್‌ ಬಿಹಾರಿ ವಾಜಪೇಯಿ ಅವರ ಕನಸಿನ ಯೋಜನೆಯಂತೆ ಜಾರಿ.

10.62 ಲಕ್ಷ ಹೆಕ್ಟೇರ್‌- ಇಷ್ಟು ಪ್ರದೇಶಕ್ಕೆ ನೀರಾವರಿ

Advertisement

103 ಮೆ.ವ್ಯಾ- ಇಷ್ಟು ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆ

9 ಮಧ್ಯ ಪ್ರದೇಶದ ಜಿಲ್ಲೆಗಳು

4 ಉತ್ತರ ಪ್ರದೇಶದ ಜಿಲ್ಲೆಗಳು

90% ಕೇಂದ್ರದ ವಿತ್ತೀಯ ನೆರವು

18,057 ಕೋಟಿ ರೂ. ಒಟ್ಟು ವೆಚ್ಚ

ಏನು ಮಾಡಲಾಗುತ್ತದೆ? :

ಚುನಾವಣೆ  ರಾಜ್ಯಗಳನ್ನು ಬಿಟ್ಟು ಉಳಿದೆಡೆ ಗ್ರಾ.ಪಂ. ಮಟ್ಟದಲ್ಲಿ ನೀರು ಮತ್ತು ಅದರ ಸಂರಕ್ಷಣೆ ಬಗ್ಗೆ ಜಲ ಪ್ರತಿಜ್ಞೆ ಸ್ವೀಕಾರ

ಸ್ಥಳೀಯ ಮಟ್ಟದಲ್ಲಿ ನೀರಿನ ಸಂರಕ್ಷಣೆ ಬಗ್ಗೆ ಅರಿವು, ಆಯಾ ಸ್ಥಳದ ಹವಾಮಾನ ಮತ್ತು ಮಣ್ಣಿನ ಗುಣಕ್ಕೆ ಅನುಗುಣವಾಗಿ ಜಲ ಸಂರಕ್ಷಣೆಗೆ ಕ್ರಮ

Advertisement

Udayavani is now on Telegram. Click here to join our channel and stay updated with the latest news.

Next