Advertisement

ಜಲಜೀವನ್‌ ಮಿಷನ್‌ ಅನುಷ್ಠಾನ

05:08 PM May 03, 2020 | Suhan S |

ಗೌರಿಬಿದನೂರು: ತಾಲೂಕಿನಲ್ಲಿ ಜಲಜೀವನ್‌ ಮಿಷನ್‌ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಬಿ.ಫೌಝೀಯಾ ತರುನ್ನುಮ್‌ ಶನಿವಾರ ವಿವಿಧ ಗ್ರಾಮ ಪಂಚಾಯಿತಿ ಗಳಿಗೆ ಭೇಟಿ ನೀಡಿ ಲಭ್ಯವಿರುವ ನೀರಿನ ಪ್ರಮಾಣ ಪರಿಶೀಲಿಸಿದರು.

Advertisement

ಬಳಿಕ ಮಾತನಾಡಿ, ಬರಗಾಲದ ಭೀಕರತೆಯಿಂದ ಎಲ್ಲೆಡೆ ನೀರಿನ ಅಭಾವ ತಲೆದೋರಿದೆ. ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದೆ. ಕೇಂದ್ರ ಸರ್ಕಾರದ ಜಲಜೀವನ್‌ ಮಿಷನ್‌ಅಡಿ ಪ್ರತಿ ಮನೆಗೂ ನಲ್ಲಿಯ ಮೂಲಕ ಪ್ರತಿ ವ್ಯಕ್ತಿಗೆ ನಿತ್ಯ 52 ಲೀ. ನೀರು ಪೂರೈಸಲು ಕ್ರಿಯಾ ಯೋಜನೆ ರೂಪಿಸಿದೆ. ಆರಂಭದಲ್ಲಿ ಕೆಲವು ಆಯ್ದ ಗ್ರಾಪಂಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.

ತಾಪಂ ಇಒ ಎನ್‌.ಮುನಿ ರಾಜು, ಸಿಇಒ ಹಾಗೂ ಇತರ ಅಧಿಕಾರಿಗಳು ತಾಲೂಕಿನ ದಂಡಿ ಗಾನಹಳ್ಳಿ, ವರವಣಿ, ಬೇವಿನಹಳ್ಳಿ, ಇಂದಿ ರಾನಗರ, ಅಲಕಾಪುರ, ಪೋತೇನಹಳ್ಳಿ ಗ್ರಾಮಗಳಿಗೆ ಭೇಟಿ ನೀ ಡಿ ಪರಿಶೀಲಿಸಿದರು.

ಜಿಪಂ ಉಪ ಕಾರ್ಯದರ್ಶಿ ನೋಮೇಶ್‌ ಕುಮಾರ್‌, ಕಾರ್ಯಪಾಲಕ ಎಂಜಿನಿಯರ್‌ ಶಿವಕುಮಾರ್‌ ಲೋಕೂರ್‌, ಎಇಇ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಆದಿನಾರಾಯಣಪ್ಪ, ಅಂಜನ ಮೂರ್ತಿ, ನರೇಗಾ ಸಹಾಯಕ ನಿರ್ದೇ ಶಕ ಪಿ.ಚಿನ್ನಪ್ಪ, ಪಿಡಿಒ ಆರ್‌.ಅಶ್ವತ್ಥ ನಾರಾ ಯಣ ಸ್ವಾಮಿ, ಜೆ. ಮುನಿಯೋಜಿರಾವ್‌, ಎ.ಶೈಲಾ, ಗ್ರಾಪಂ ಅಧ್ಯಕ್ಷ ಕೃಷ್ಣಪ್ಪ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next