Advertisement

ಪಾಕ್‌ ವಿರುದ್ಧ ದೇಶೀಯ ಮಟ್ಟದಲ್ಲಿ ರಕ್ಷಣಾ ಸಿದ್ಧತೆ: ಜೇಟ್ಲಿ

02:37 PM May 29, 2017 | Team Udayavani |

ಚಿತ್ರದುರ್ಗ: ಭಾರತಕ್ಕೆ ನೆರೆಯ ಪಾಕಿಸ್ತಾನ “ಹೊರೆ’ಯಾಗಿದ್ದು, ಕಳೆದ 70 ವರ್ಷಗಳಿಂದಲೂ ಭದ್ರತಾ ಅಪಾಯ ಎದುರಿಸುತ್ತಲೇ ಇದ್ದೇವೆ. ಆದರೂ, ನಾವು ರಕ್ಷಣಾ ಸಿದ್ಧತೆಯನ್ನು ಮಾಡಿಕೊಳ್ಳುವಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ ಎಂದು ರಕ್ಷಣಾ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

Advertisement

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಬಳಿಯ ನಾಯಕನಹಟ್ಟಿ ಸಮೀಪದ ಕುದಾಪುರದಲ್ಲಿ 4000 ಎಕರೆ ಪ್ರದೇಶದಲ್ಲಿ
ಸ್ಥಾಪಿಸಲಾಗಿರುವ ದೇಶದ ಮೊದಲ ವೈಮಾನಿಕ ಪರೀಕ್ಷಾ ವಲಯ(ಎಟಿಆರ್‌)ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ವಲಯದಲ್ಲಿ ಮಾನವ ಸಹಿತ ಮತ್ತು ಮಾನವ ರಹಿತ ಯುದ್ದ ವಿಮಾನಗಳನ್ನು ಪರೀಕ್ಷೆ ನಡೆಸಬಹುದಾಗಿದೆ.
ಪಾಕಿಸ್ತಾನದ ಬೆದರಿಕೆಯನ್ನು ತಡೆಯಬೇಕಾದರೆ, ನಾವು ರಕ್ಷಣಾ ಸಿದ್ಧತೆಗಳನ್ನು ಮಾಡಿಕೊಳ್ಳಲೇಬೇಕು. ಈ ನಿಟ್ಟಿನಲ್ಲಿ ನಮ್ಮ ಕೆಲಸ ಸೂಕ್ತವಾಗಿಯೇ ಇದೆ. ಅಲ್ಲದೆ ಇಂಥ ಸಿದ್ಧತೆಗಳನ್ನು ನಾವು ದೇಶೀಯ ಮಟ್ಟದಲ್ಲೇ ಮಾಡಿಕೊಳ್ಳಬೇಕು ಎಂದು ಜೇಟ್ಲಿ ಅಭಿಪ್ರಾಯಪಟ್ಟರು.

ಡಿಆರ್‌ಡಿಒದಿಂದ ದೇಶದ ರಕ್ಷಣಾ ವ್ಯವಸ್ಥೆಗೂ ಮುನ್ನಡೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯವಸ್ಥೆ ಸುಧಾರಣೆಯಾಗಲಿದೆ. ನೆರೆಯ ದೇಶ ಹತ್ತಾರು ವರ್ಷಗಳಿಂದ ರಕ್ಷಣಾ ವ್ಯವಸ್ಥೆಗೆ ಧಕ್ಕೆ ನೀಡಿದೆ.

ಹೀಗಾಗಿ, ರಕ್ಷಣಾ ವ್ಯವಸ್ಥೆ ಮತ್ತಷ್ಟು ಶಕ್ತಿಯುತವಾಗಬೇಕಿದೆ ಎಂದು ಹೇಳಿದರು. ಚಿತ್ರದುರ್ಗದ ಡಿಆರ್‌ಡಿಒ ಕೇಂದ್ರ ದೇಶೀಯ ರಕ್ಷಣೆಗೆ ಅಗತ್ಯವಾದ ಉಪಕರಣಗಳನ್ನು ಉತ್ಪಾದಿಸಲು ಅಣಿಯಾಗಿರುವ ದೇಶದ ಮೊದಲ ರಕ್ಷಣಾ ಕೇಂದ್ರವಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರದೇಶಲ್ಲಿ ತಲೆಯೆತ್ತಿರುವ ಐಐಎಸ್‌ಸಿ, ಬಾರ್ಕ್‌ ಸೇರಿ ಇನ್ನಿತರೆ ಸಂಶೋಧನಾ ಕೇಂದ್ರಗಳು ಜಾಗತಿಕ ನೆಲೆಗಟ್ಟಿನಲ್ಲಿ ತೀವ್ರ ಸ್ಪರ್ಧೆಯಿಂದ ಕೆಲಸ ಮಾಡಲಿವೆ. ಇಲ್ಲಿ ಆರಂಭವಾಗಿರುವ ವೈಮಾನಿಕ ಪರೀûಾ ವಲಯ ದೇಶದಲ್ಲೇ ಮೊದಲನೆಯದಾಗಿದ್ದು,ರಕ್ಷಣಾ ಸಿದ್ಧತೆಯ ಎಲ್ಲ ತಾಲೀಮು ಇಲ್ಲಿ ನಡೆಯಲಿದೆ ಎಂದರು.

Advertisement

ಮುಂದಿನ ದಿನಗಳಲ್ಲಿ ಇದೇ ಸ್ಥಳದಲ್ಲಿ ಬಾಬಾ ಅಟಾಮಿಕ್‌ ರಿಸರ್ಚ್‌ ಸೆಂಟರ್‌, ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಸೆ„ನ್ಸ್‌, ಇತರೆ ವಿಜ್ಞಾನ ಕೇಂದ್ರಗಳು ಸೇರಿ ಭಾರತದ ರಕ್ಷಣಾ ಇಲಾಖೆಗೆ ಸಂಬಂಧಿಧಿಸಿದ ಕೆಲಸ ಕಾರ್ಯಗಳು ಇಲ್ಲೇ ನಡೆಯಲಿವೆ. ಡಿಆರ್‌ಡಿಒ 20 ವರ್ಷದ ಗುರಿಯನ್ನು 5ವರ್ಷದಲ್ಲಿ ಪೂರ್ಣಗೊಳಿಸಿ ಮುನ್ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಡಿಆರ್‌ಡಿಒ ಡೈರೆಕ್ಟರ್‌ ಆಫ್‌ ಜನರಲ್‌ ಸಿ.ಪಿ. ರಾಮ ನಾರಾಯಣ್‌ ಮಾತನಾಡಿದರು. ಡಿಆರ್‌ ಡಿಒ ಅಧ್ಯಕ್ಷ ಡಾ.ಕ್ರಿಸ್ಟೋಫರ್‌, ಕೇಂದ್ರ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಡಾ.ಸತೀಶ್‌ರೆಡ್ಡಿ, ಮಾಜಿ ಲೋಕಸಭಾ ಸದಸ್ಯ ಜನಾರ್ಧನಸ್ವಾಮಿ, ಶಾಸಕ ಎಸ್‌.ತಿಪ್ಪೇಸ್ವಾಮಿ, ಡಿಆರ್‌ಡಿಒ ಮುಖ್ಯ ಕಾರ್ಯನಿರ್ವಹಣಾಧಿಧಿಕಾರಿ ಅಜಯ್‌ ಸಿಂಗ್‌, ಡಿಆರ್‌ಡಿಒ ಡಿ.ಜಿ ಮಂಜುಳ, ಡಾ.ಸಿ.ಬಿ.ರಾಮನ್‌ ಮತ್ತಿತರರು ವೇದಿಕೆಯಲ್ಲಿದ್ದರು.

4290 ಎಕರೆ ಪ್ರದೇಶವನ್ನು ಕರ್ನಾಟಕ ಸರ್ಕಾರ ನೀಡಿದ್ದು ಈ ಜಾಗದಲ್ಲಿ ಮಹತ್ವದ ಕೆಲಸ ಮಾಡಲಾಗುತ್ತದೆ. ಸ್ವದೇಶಿ
ತಂತ್ರಜ್ಞಾನ ಬಳಸಿಕೊಂಡು ಯುದ್ಧ ಹಾಗೂ ರಕ್ಷಣಾ ಕಾರ್ಯಗಳಲ್ಲಿ ಸಹಕಾರಿಯಾಗಬಲ್ಲ ಮಾನವ ರಹಿತ ವೈಮಾನಿಕ ಸಾಧನ ಅಭಿವೃದ್ಧಿಪಡಿಸಲು ಅತ್ಯಾಧುನಿಕ ಮಲ್ಟಿ ರೋಲ್‌ ಕಾಂಬ್ಯಾಕ್ಟ್ ಏರ್‌ ಕ್ರಾಫ್ಟ್‌ ಸಿದ್ಧಪಡಿಸಲಾಗುತ್ತಿದೆ.

– ಅರುಣ್‌ ಜೇಟ್ಲಿ
ಕೇಂದ್ರ ರಕ್ಷಣಾ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next