Advertisement
ಕಡಿಮೆ ದರದಲ್ಲಿ ಪ್ರಯಾಣಿಸುವ ಯೋಜನೆಯನ್ನು ಪ್ರಾಯೋಗಿಕವಾಗಿ ಮೈಸೂರು – ಬೆಂಗಳೂರು, ಜೈಪುರ್- ಅಜ್ಮೀರ್ ಮಾರ್ಗಗಳಲ್ಲಿ ಕಳೆದ ವರ್ಷ ಜಾರಿಗೊಳಿಸಲಾಗಿತ್ತು. ಇದರಿಂದ ಆದಾಯದಲ್ಲಿ ಶೇ.17ರಷ್ಟು ಏರಿಕೆಯಾಗಿತ್ತು. ಅಲ್ಲದೆ, ಪ್ರಯಾಣಿಕರ ಬುಕಿಂಗ್ ಪ್ರಮಾಣ ಕೂಡ ಶೇ.63ರಷ್ಟು ಹೆಚ್ಚಳವಾಗಿತ್ತು. ಚೆನ್ನೈ- ಮೈಸೂರು ರೈಲಲ್ಲೂ ಇದೇ ಮಾದರಿಯನ್ನು ಅನುಸರಿಸಲಾಗಿದ್ದು, ಪರಿಣಾಮ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬುಕಿಂಗ್ ಪ್ರಮಾಣ ಶೇ.63ರಷ್ಟು ಹೆಚ್ಚಳವಾಗಿತ್ತು. ಇದರ ಯಶಸ್ಸಿನಿಂದ ಪ್ರೇರಣೆಗೊಂಡಿರುವ ಭಾರತೀಯ ರೈಲ್ವೇ ಈ ಯೋಜನೆಯನ್ನು ಕಡಿಮೆ ಪ್ರಯಾಣಿಕರನ್ನು ಹೊಂದಿರುವ ಶತಾಬ್ದಿ ರೈಲುಗಳ ಮಾರ್ಗಗಳಲ್ಲಿ ವಿಸ್ತರಿಸಲು ಮುಂದಾಗಿದೆ. ಖಾಸಗಿ ಬಸ್‌ಗಳಲ್ಲಿ ಕಡಿಮೆ ದರ ಇದ್ದ ಕಾರಣ ಅಜ್ಮೀರ್ – ಜೈಪುರ ಶತಾಬ್ದಿ ರೈಲಿನಲ್ಲಿ ಹೆಚ್ಚು ಜನ ಪ್ರಯಾಣಿಸುತ್ತಿರಲಿಲ್ಲ. ಹೀಗಾಗಿ ಪ್ರಯಾಣಿಕರನ್ನು ಮತ್ತೆ ಆಕರ್ಷಿಸಲು ಸುಮಾರು 300 ರೂ. ವರೆಗೂ ಟಿಕೆಟ್ ದರವನ್ನು ಇಳಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಅಷ್ಟೇ ಅಲ್ಲದೆ, ರೈಲು ಸೇವೆಯನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿ ರುವ ರೈಲ್ವೇ ಸಚಿವಾಲಯ, ಹೊಸದಾಗಿ 100 ಹೊಸ ರೈಲುಗಳನ್ನು ಓಡಿಸಲು ಮುಂದಾಗಿದೆ. ಈಗಾಗಲೇ 25 ಹೊಸ ರೈಲುಗಳನ್ನು ಪರಿಚಯಿಸಲಾಗಿದ್ದು, ಉಳಿದವುಗಳನ್ನು ಈ ವರ್ಷವೇ ಓಡಿಸಲು ನಿರ್ಧರಿಸಿದೆ. Advertisement
ಶತಾಬ್ಧಿ ಪ್ರಯಾಣ ಇನ್ನು ಅಗ್ಗ?
10:00 AM Mar 26, 2018 | Karthik A |
Advertisement
Udayavani is now on Telegram. Click here to join our channel and stay updated with the latest news.