Advertisement

ಕುಂಡಲಿಗೆ ಹೆದರಿ ಕಂಬಿ ಎಣಿಸುವವರ ಸಂಖ್ಯೆ ಹೆಚ್ಚಳ!!

12:20 PM Sep 03, 2018 | |

ಲಕ್ನೋ: ತಪ್ಪು ಮಾಡಿದವರು ಅಥವಾ ವಿಚಾ ರಣಾಧೀನ ಕೈದಿಗಳು ಲಾಕಪ್‌ನಲ್ಲಿ ರಾತ್ರಿ ಕಳೆಯುವುದೇನೋ ಸರಿ. ಯಾವ ತಪ್ಪೂ ಮಾಡದೇ, ಸ್ವಇಚ್ಛೆಯಿಂದಲೇ ಲಾಕಪ್‌ನಲ್ಲಿ ದಿನ ಕಳೆಯುವವರಿಗೆ ಏನೆನ್ನಬೇಕು? ಅದು ಅವರ ತಪ್ಪಲ್ಲ, ಅವರ “ಕುಂಡಲಿ’ ಯ ಫ‌ಲ! “ಕುಂಡಲಿ’ಯಲ್ಲಿ “ಜೈಲು ಯೋಗ’ ವಿದೆ ಎಂದು ಬರೆದಿದ್ದರೆ, ಪಾಪ ಅವರೇನು ಮಾಡಲು ಸಾಧ್ಯ? ಉತ್ತರಪ್ರದೇಶದಲ್ಲಂತೂ ಉದ್ಯಮಿಗಳು, ವಿದ್ಯಾರ್ಥಿಗಳು, ಬಡವ- ಶ್ರೀಮಂತ ಎಂಬ ಭೇದ ವಿಲ್ಲದೆ ಸಾಕಷ್ಟು ಮಂದಿ ಹೀಗೆ ಜೈಲು ಪಾಲಾಗಿ ವಾಪಸ್‌ ಬಂದಿದ್ದಾರಂತೆ. ಹಾಗಂತ, ಇದು ಶಿಕ್ಷೆಯಲ್ಲ. “ಜೈಲು ಯೋಗ’ಕ್ಕೆ ನೀಡಲಾಗುವ “ಲಾಕಪ್‌’ ಟ್ರೀಟ್‌ಮೆಂಟ್‌!

Advertisement

ಇತ್ತೀಚೆಗೆ 33 ವರ್ಷದ ಉದ್ಯಮಿ ರಮೇಶ್‌ ಸಿಂಗ್‌ 24 ಗಂಟೆ ಜೈಲು ವಾಸ ಮಾಡಿ ವಾಪಸಾಗಿದ್ದಾರೆ. “ನನ್ನ ಕುಂಡಲಿ ಯನ್ನು ಕುಟುಂಬದ ಜ್ಯೋತಿಷಿಗೆ ತೋರಿಸಿ ದಾಗ ಅವರು, “ನಿನಗೆ ಜೈಲು ಯೋಗವಿದೆ. ಮುಂದೆ ನಿನ್ನನ್ನು ಅದು ಸಂಕಷ್ಟಕ್ಕೀಡು ಮಾಡಲಿದೆ’ ಎಂದರು. ನಾವೆಲ್ಲರೂ ಭಯ ಭೀತರಾದೆವು. ಆಗ ಅವರು, ಸ್ವಲ್ಪ ಹೊತ್ತು ಜೈಲಲ್ಲಿ ಕಂಬಿ ಎಣಿಸಿದರೆ ಜೈಲು ಯೋಗದ ತೊಂದರೆಯಿಂದ ಮುಕ್ತಿ ಪಡೆಯಬಹುದು ಎಂದು ಸಲಹೆ ನೀಡಿದರು. ಅದರಂತೆ, ನಾನು ಕುಂಡಲಿಯ ಪ್ರತಿಯೊಂದಿಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ಒಂದು ದಿನ ಜೈಲಲ್ಲಿ ರಲು ಅವಕಾಶ ಕಲ್ಪಿಸಿಕೊಡು ವಂತೆ ಕೋರಿದೆ. ಅದರಂತೆ, 24 ಗಂಟೆ ಕಾಲ ಲಾಕಪ್‌ನಲ್ಲಿ ಕಳೆದೆ. ಜೈಲಿನ ಆಹಾರವನ್ನೇ ಸೇವಿಸಿದೆ’ ಎಂದಿದ್ದಾರೆ ಸಿಂಗ್‌.

ಇದೇ ರೀತಿ, ವರ್ಷಕ್ಕೆ 24ಕ್ಕೂ ಹೆಚ್ಚು ಮಂದಿ ಲಾಕಪ್‌ಗೆ ಹಾಕುವಂತೆ ಮನವಿ ಸಲ್ಲಿಸುತ್ತಾರೆ. ಅವರ ಕುಂಡಲಿಯನ್ನು ದೃಢ ಪಡಿಸಿಕೊಂಡು ಧಾರ್ಮಿಕತೆಯ ಆಧಾರದಲ್ಲಿ ಅವಕಾಶ ಕಲ್ಪಿಸುತ್ತಿದ್ದೇವೆ. ಕಾನೂನಾತ್ಮಕವಾಗಿ ಕ್ರಿಮಿನಲ್‌ ಹಿನ್ನೆಲೆ ಇಲ್ಲದೇ ಯಾರನ್ನೂ ಲಾಕಪ್‌ಗೆ ಹಾಕುವಂತಿಲ್ಲ ಎಂದು ಅಧಿ ಕಾರಿಗಳು ತಿಳಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next