Advertisement

ಜೊಹ್ರಿ ತನಿಖೆ: ಬಿಸಿಸಿಐ ಉದ್ಯೋಗಿ ಹೇಳಿಕೆ ಆಗತ್ಯ

06:15 AM Nov 11, 2018 | Team Udayavani |

ಮುಂಬಯಿ: ಮಿ ಟೂ ಪ್ರಕರಣದಲ್ಲಿ ಬಿಸಿಸಿಐ ಸಿಇಒ ರಾಹುಲ್‌ ಜೊಹ್ರಿ ಅವರ ವಿಚಾರಣೆ ನಡೆಸುತ್ತಿರುವ ಸ್ವತಂತ್ರ ಸಮಿತಿ, ಬಿಸಿಸಿಐ ಉದ್ಯೋಗಿಯೊಬ್ಬರ ವಿಚಾರಣೆಯನ್ನೂ ನಡೆಸಬೇಕೆಂದು ಖಜಾಂಚಿ ಅನಿರುದ್ಧ ಚೌಧರಿ ಒತ್ತಾಯಿಸಿದ್ದಾರೆ.

Advertisement

ಟ್ವಿಟರ್‌ ಖಾತೆಯೊಂದರಲ್ಲಿ ಅನಾಮಿಕ ವ್ಯಕ್ತಿಯೊಬ್ಬರು ಜೊಹ್ರಿ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದರು. ಅನಂತರ ಅವರ ವಿರುದ್ಧ ತನಿಖೆ ಶುರುವಾಗಿದೆ. ಇದರ ಬೆನ್ನಲ್ಲೇ ಮುಂಬಯಿ ಕ್ರಿಕೆಟ್‌ ತಂಡದ ಮಾಜಿ ನಾಯಕ ಶಿಶಿರ್‌ ಹಟ್ಟಂಗಡಿ ಕೂಡ ಜೊಹ್ರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಬಿಸಿಸಿಐನ ಉದ್ಯೋಗಿಯೊಬ್ಬರಿಗೇ ಜೊಹ್ರಿ ತೊಂದರೆ ನೀಡಿದ್ದಾರೆ, ಅದರ ವಿರುದ್ಧ ಮಾಹಿತಿ ನೀಡಲು ಸಿದ್ಧ ಎಂದಿದ್ದರು. ಈಗ ಇದೇ ಬಿಸಿಸಿಐ ಉದ್ಯೋಗಿಯ ಹೇಳಿಕೆಯನ್ನೂ ಪಡೆಯಿರಿ ಎನ್ನುವುದು ಅನಿರುದ್ಧ್ ಚೌಧರಿ ಒತ್ತಾಯ. ಒಂದು ವೇಳೆ ಈ ಬೆಳವಣಿಗೆ ನಡೆದರೆ ಜೊಹ್ರಿ ಪರಿಸ್ಥಿತಿ ಇಕ್ಕಟ್ಟಿಗೆ ಸಿಲುಕಲಿದೆ ಎಂದು ವಿಶ್ಲೇಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next