ಕಳೆದ ವಾರವಷ್ಟೇ ಪುನೀತ್ ರಾಜ್‌ಕುಮಾರ್ ನಟನೆಯ “ಜೇಮ್ಸ್’ ತೆರೆಕಂಡಿದೆ. ಈ ವಾರ “ಆರ್‌ಆರ್‌ಆರ್’ ಕೂಡ ಬಿಡುಗಡೆಯಾಗಿದೆ. ಇದಾದ ಬಳಿಕ ಅತಿ ಹೆಚ್ಚು ಬೇಡಿಕೆಯಿರುವ ಸಿನಿಮಾ “ತೋತಾಪುರಿ’. ಕರ್ನಾಟಕ ಮಾತ್ರವಲ್ಲದೇ ವಿದೇಶಗಳಲ್ಲೂ “ತೋತಾಪುರಿ’ಗೆ ಸಖತ್ ಹೈಪ್ ಕ್ರಿಯೇಟ್ ಆಗಿದೆ.
ಈಗಾಗಲೇ ಈ ಸಿನಿಮಾದ “ಬಾಗ್ಲು ತೆಗಿ ಮೇರಿ ಜಾನ್’ ಬರೋಬ್ಬರಿ 125 ಮಿಲಿಯನ್‌ಗೂ ಅಧಿಕ ಹಿಟ್ಸ್ ದಾಖಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಇಷ್ಟೆಲ್ಲಾ ಬೇಡಿಕೆ ಸೃಷ್ಟಿಯಾಗಲು ಹಲವಾರು ಮೊದಲುಗಳಿಗೆ “ತೋತಾಪುರಿ’ ಸಾಕ್ಷಿಯಾಗಿದೆ.
ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯಪ್ರಸಾದ್ “ನೀರ್‌ದೋಸೆ’ ಬಳಿಕ ಮತ್ತೂಮ್ಮೆ “ತೋತಾಪುರಿ’ ಮೂಲಕ ಕಮಾಲ್ ಮಾಡಲು ಬರುತ್ತಿದ್ದಾರೆ. ಇದೇ ಮೊದಲ ಬಾರಿಗೆ ಎರಡು ಭಾಗಗಳಲ್ಲಿ ಜಗ್ಗೇಶ್ ಅವರ ಸಿನಿಮಾ ಮೂಡಿಬರುತ್ತಿದ್ದು, ಎರಡೂ ಭಾಗದ ಚಿತ್ರೀಕರಣ ರಿಲೀಸ್‌ಗೂ ಮೊದಲೇ ಶೂಟಿಂಗ್ ಆಗಿರುವುದು ಈ ತಂಡದ ಹೆಚ್ಚುಗಾರಿಕೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂನಲ್ಲಿ ಮೂಡಿಬರುತ್ತಿರುವ ಮೊದಲ ಪ್ಯಾನ್ ಇಂಡಿಯಾ ಕಾಮಿಡಿ ಸಿನಿಮಾ ಇದಾಗಿದೆ.
ಇದನ್ನೂ ಓದಿ:“ದ ಕಾಶ್ಮೀರ್ ಫೈಲ್ಸ್’ ಸಿನೆಮಾ ಯು ಟ್ಯೂಬ್ ಗೆ ಹಾಕಿ ಎಲ್ಲರೂ ನೋಡಲಿ : ಕೇಜ್ರಿವಾಲ್
ಜಗ್ಗೇಶ್ ಮಾತ್ರವಲ್ಲದೇ “ಡಾಲಿ’ ಧನಂಜಯ್ ಸಹ ಚಿತ್ರದ ಪ್ರಮುಖ ಪಾತ್ರದಲ್ಲಿರುವುದು “ತೋತಾಪುರಿ’ ವಿಶೇಷ. ಅದಿತಿ ಪ್ರಭುದೇವ, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್ ಸೇರಿದಂತೆ ಅನೇಕರು ಚಿತ್ರದಲ್ಲಿದ್ದಾರೆ. ಅತಿಹೆಚ್ಚು ದಿನಗಳ ಚಿತ್ರೀಕರಣ, ಬಹುತಾರಾಗಣವಿರುವ ಈ ಚಿತ್ರಕ್ಕೆ ವಿದೇಶದಿಂದ ಈಗಾಗಲೇ ಬೇಡಿಕೆಯಿದೆ.
ಸುಮಾರು 40 ದೇಶಗಳಿಂದ “ತೋತಾಪುರಿ’ ಬಿಡುಗಡೆ ಬಗ್ಗೆ ಮಾತುಕತೆ ನಡೆಯುತ್ತಿದೆ. ಕರ್ನಾಟಕದಲ್ಲೂ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುವ ಯೋಜನೆ ಚಿತ್ರತಂಡಕ್ಕಿದೆ. “ಮೋನಿಫಿಕ್ಸ್ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾವಾಗಿರುವ ಈ ಸಿನಿಮಾವನ್ನು ಕೆ.ಎ. ಸುರೇಶ್ ನಿರ್ಮಿಸಿದ್ದಾರೆ. ಅನೂಪ್ ಸೀಳಿನ್ ಸಂಗೀತದ ಈ ಚಿತ್ರಕ್ಕೆ ನಿರಂಜನ್ ಬಾಬು ಛಾಯಾಗ್ರಹಣವಿದೆ. “ಮೋನಿಫಿಕ್ಸ್ ಆಡಿಯೋಸ್’ ಯೂ ಟ್ಯೂಬ್ ಚಾನೆಲ್‌ನಲ್ಲಿ “ತೋತಾಪುರಿ’ ಹಾಡು ಬಿಡುಗಡೆಯಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಬೇಸಿಗೆಯಲ್ಲಿ “ತೋತಾಪುರಿ’ ಮನತಣಿಸಲಿದೆ.