ಬೆಂಗಳೂರು: ಪರಿವರ್ತನಾ ಯಾತ್ರೆ ಸಮಾರೋಪದ ಬೆನ್ನಲ್ಲೇ ನವರಸ ನಾಯಕ , ಬಿಜೆಪಿ ನಾಯಕ ಜಗ್ಗೇಶ್ ಮಾಡಿರುವ 2 ಟ್ವೀಟ್‌ಗಳು ಭಾರೀ ಸುದ್ದಿಯಾಗಿದ್ದು ವಿವಾದಕ್ಕೂ ಕಾರಣವಾಗಿದೆ.
ಜಗ್ಗೇಶ್ ಟ್ವೀಟ್‌ನಲ್ಲಿ ಬರೆದಿದ್ದೇನು?
ಸ್ಟಾರ್ ಹೋಟಲಲ್ಲಿ ಕೂತು ಅಪ್ಪನ ದುಡ್ಡಲ್ಲಿ ಪಾರ್ಟಿಕೊಟ್ಟು ಪಾರ್ಟು ಗಿಟ್ಟಿಸಿ! ಪ್ರತಿಚಿತ್ರದ ಕ್ಯಾಚ್ಗೆ ಅದೆ ಸ್ಟಾರ್ ಹೋಟಲ್ ಪಾರ್ಟಿ! ದೊಡ್ಡವರ ನೆರಳಲ್ಲಿ ರಾಜಕೀಯ ಕ್ಯಾಚ್! ಆಮೇಲೆ ಮೆಟ್ಲೇರಕ್ಕೆ ಹೆಡ್ಡಾಫೀಸ್ ಕ್ಯಾಚ್ ಹಾಕ್ದೋರ್ಗೆ ಮೋದಿ ಆದರೇನು ಗಾಂಧಿ ಆದರೇನು ಯಾರಿಗೆ ಬೇಕಾದರು ಹಂಗಿಸುತ್ತಾರೆ! ಕಾರಣ ಶ್ರಮವಿಲ್ಲದೆ ಪಲ್ಲಂಗ ಎರ್ದೋರಲ್ಲವೆ!
ದೊಡ್ಡವರ ಬಗ್ಗೆ ಮಾತಾಡ ಬೇಕಾದರೆ ಮಾತಾಡುವ ಮಂದಿಗೆ ವಯಸ್ಸು ಅನುಭವ ಸಾಧನೆ ಮಾಡಿ ಪಕ್ವವಾದಾಗ ಅಪಭ್ರಂಷ ಇಲ್ಲದೆ ಚರ್ಚೆ ಮಾಡಿದರೆ ಅದನ್ನ ತರ್ಕ ಎಂದು ಒಪ್ಪಿ ವಿಮರ್ಷೆಮಾಡಿ ನಿರ್ಣಯಸುತ್ತಾರೆ ಜನ..
ವಿಶ್ವದ ಬಲಿಷ್ಟರಾಷ್ಠ್ರದ ನಾಯಕರೆ ರವರ ಒಪ್ಪಿ ಮೆಚ್ಚಿದ್ದಾರೆ..ಈಕೆ ಯಾರು?ಸಾಧನೆ ಏನು?ನೆಟ್ಟಗೆ ಕನ್ನಡ ಮಾತಾಡಲು ಬರದ ಕಾಡು ಪಾಪದಂತೆ ಈಕೆ!
ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದ ಕಾಂಗ್ರೆಸ್ ನಾಯಕಿ, ನಟಿ ರಮ್ಯಾ ಅವರನ್ನುದ್ದೇಶಿಸಿ ಜಗ್ಗೇಶ್ ಈ ಟ್ವೀಟ್ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.
ನೀರ್‌ದೊಸೆ ಚಿತ್ರದಿಂದ ರಮ್ಯಾ ಹೊರ ನಡೆದ ಬಳಿಕ ಜಗ್ಗೇಶ್ ಮತ್ತು ರಮ್ಯಾ ಹಾವು ಮುಂಗುಸಿಯಂತೆ ಬದ್ಧ ವೈರಿಗಳಾಗಿದ್ದಾರೆ.