Advertisement

ಆಸ್ಪತ್ರೆಗೆ ದಾಖಲಾದ 2-3 ದಿನಕ್ಕೆ ಸಾಯುತ್ತಿದ್ದಾರೆ, ಏನಾಗ್ತಿದೆ ಗೊತ್ತಾಗ್ತಿಲ್ಲ : ಜಗ್ಗೇಶ್

01:50 PM Apr 27, 2021 | Team Udayavani |

ಬೆಂಗಳೂರು :  ರಾಜ್ಯದಲ್ಲಿ ಕೋವಿಡ್ ನಿಂದ ದಿನಕ್ಕೆ ನೂರಾರು ಜನ ಸಾಯುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಹಿರಿಯ ನಟ ಜಗ್ಗೇಶ್ ಮುಖ್ಯ ಮಂತ್ರಿ ಯಡಿಯೂರಪ್ಪ ಅವರಿಗೆ ಟ್ವೀಟ್ ಮೂಲಕ ಪ್ರಶ್ನೆ ಮಾಡಿ, ಆಸ್ಪತ್ರೆಗಳಲ್ಲಿ ಪಾರದರ್ಶಕತೆ ಇರಲಿ ಎಂದು ಹೇಳಿದ್ದಾರೆ.

Advertisement

ಆಸ್ಪತ್ರೆಗೆ ದಾಖಲಾದ ಸೋಂಕಿತರು 2 ರಿಂದ 3 ದಿನಕ್ಕೆ ಸಾಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಏನಾಗುತ್ತಿದೆ ಎಂಬುದು ಸತ್ತವರ ಕುಟುಂಬದವರಿಗೆ ತಿಳಿಯುತ್ತಿಲ್ಲ ಎಂದು ಆಸ್ಪತ್ರೆಗಳ ಬಗ್ಗೆ ಅಸಮಧಾನ ಹೊರ ಹಾಕಿದ್ದಾರೆ.

ಈ ಬಗ್ಗೆ ಟ್ವೀಟ್ ನಲ್ಲಿ ಬರೆದುಕೊಂಡಿರುವ ನವರಸ ನಾಯಕ ಜಗ್ಗೇಶ್, ಮಾನ್ಯ ಮುಖ್ಯ ಮಂತ್ರಿಗಳ ಗಮನಕ್ಕೆ, ಸಾರ್ ಯಾವು ಕೊರೋನ ರೋಗಿ ಅಡ್ಮಿಟ್ ಆದ 2 ರಿಂದ  3 ದಿನಕ್ಕೆ ಸಾವು ಸಂಭವಿಸುತ್ತಿದೆ (ಸ್ವಂತ ಅನುಭವ). ಯಾವ ಚಿಕಿತ್ಸೆ ನೀಡುತ್ತಾರೆ ಎಂಬುದು ಬಂಧುಗಳಿಗೆ ತಿಳಿಯದು. ಸಾವಾಗಿದೆ ಎಂದು ತಿಳಿಸುತ್ತಾರೆ. ಆದ್ರೆ ಸತ್ತವರ ಮುಖಸಹಿತ ನೋಡಲಾಗದು. ಬೆರಳೆಣಿಕೆಯಷ್ಟು ಕೆಲ ಸಿಬ್ಬಂದಿ ಹೊರತುಪಡಿಸಿ ತಜ್ನರು ರೋಗಿಯ ಬಗ್ಗೆ ಮಾಹಿತಿ ಪಡೆಯಲು ಸಿಗುವುದಿಲ್ಲ .  ಪ್ರತಿ ರೋಗಿಯ ಮನೆಯವರಿಗೆ ದೂರದಿಂದ ನೋಡಲು ಅವಕಾಶ ಮಾಡಕೊಡಬೇಕು. ಇಲ್ಲದಿದ್ದರೆ ಒಳಗೆ ನಡೆಯುವ ವಿಷಯ ಹೊರಗೆ ಅರಿವಾಗುವುದಿಲ್ಲ.

ಸೋಂಕಿತರನ್ನು ದಾಖಲು ಮಾಡಿಕೊಂಡ ನಂತರ ಯಾವ ವಿಷಯ ಹೊರಗೆ ತಿಳಿಸದೆ ರೋಗಿಯ ಸಾವಿನ ಜೊತೆ ಮನೆಯವರು ಸಾಯುವಂತೆ ಭಯ ನೀಡುತ್ತಾರೆ. ಈ ಬಗ್ಗೆ ಅರಿವಿರದವರು ಸರ್ಕಾರದ ಕಾರ್ಯ ಶ್ರಮವನ್ನು ದೂಷಣೆ ಮಾಡಿ ಸತ್ಯ ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ. ದಯಮಾಡಿ ಆಸ್ಪತ್ರೆಗಳಲ್ಲಿ ಪಾರದರ್ಶಕ ವ್ಯವಸ್ಥೆ ಆಗಲಿ ಎಂದು ಯಡಿಯೂರಪ್ಪ ಅವರಿಗೆ ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next