Advertisement

ಬುಲೆಟ್ ಸೌಂಡ್ ಮೆಚ್ಚಿದ ಜನರಿಗೆ ಜಗ್ಗೇಶ್ ಥ್ಯಾಂಕ್ಸ್

04:36 PM Nov 17, 2018 | Team Udayavani |

ನವರಸನಾಯಕ ಜಗ್ಗೇಶ್ ಅಭಿನಯದ ಬಹು ನಿರೀಕ್ಷಿತ “8 ಎಂಎಂ’ ಚಿತ್ರ ರಾಜ್ಯಾದ್ಯಂದ ತೆರೆಕಂಡಿದ್ದು, ಸಿನಿಪ್ರಿಯರಿಂದ ಬೊಂಬಾಟ್ ರೆಸ್ಪಾನ್ಸ್​​​ ಸಿಕ್ಕಿದೆ. ಅಲ್ಲದೇ ಚಿತ್ರಕ್ಕೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ನವರಸನಾಯಕ ಜಗ್ಗೇಶ್​​ ಟ್ವೀಟರ್​​ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

Advertisement

“ಚಿತ್ರ ವೀಕ್ಷಿಸಿ ಹರಸಿದ್ದಕ್ಕೆ ಹೃದಯತುಂಬಿ ಬಂತು. ನಿಮ್ಮೆಲ್ಲರ ಹಾರೈಕೆಯಿಂದ #8mm ಚಿತ್ರಕ್ಕೆ ಆನೆಬಲ ಬಂದಿದೆ. ನಿಮಗೆ ಧನ್ಯವಾದಗಳು. ನಿಮ್ಮ ಹಾರೈಕೆಯಿಂದ ಹೃದಯ ಉಬ್ಬಿತು. ಸಾರ್ಥಕ ಅನ್ನಿಸಿತು ಕಲಾಕಾಯಕ ಎಂದು’ ಟ್ವೀಟ್​​ ಮಾಡಿದ್ದಾರೆ.


ಒಬ್ಬ ಕ್ರಿಮಿನಲ್ ಮತ್ತು ಪೋಲಿಸ್ ನಡುವೆ ನಡೆಯುವ ಒಂದು ಹೊಸ ರೀತಿಯ ಸಸ್ಪೆನ್ಸ್ ಕಥೆ “8 ಎಂಎಂ’ ಚಿತ್ರದಲ್ಲಿದ್ದು, “ನೀರ್‌ ದೋಸೆ’ ನಂತರ ನವರಸ ನಾಯಕ ಜಗ್ಗೇಶ್‌ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರವನ್ನು ಹರಿಕೃಷ್ಣ ನಿರ್ದೇಶಿಸಿದ್ದು, ನಾರಾಯಣ ಸ್ವಾಮಿ ಇನ್ಪೆಂಟ್ ಪ್ರದೀಪ್‌, ಸಲೀಮ್‌ ಶಾ ನಿರ್ಮಾಪಕರು. ಚಿತ್ರಕ್ಕೆ ವಿನ್ಸೆಂಟ್‌ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತವಿದ್ದು, ವಸಿಷ್ಠ ಸಿಂಹ, ರಾಕ್‍ಲೈನ್ ವೆಂಕಟೇಶ್, ಮಯೂರಿ ಸೇರಿದಂತೆ ಬಹುದೊಡ್ಡ ತಾರಾಬಳಗವಿದೆ. 

Advertisement

Udayavani is now on Telegram. Click here to join our channel and stay updated with the latest news.

Next