Advertisement

ಉಂಡೆನಾಮ ಟ್ರೇಲರ್ ಗೆ ಜಗ್ಗೇಶ್ ಸಾಥ್

03:58 PM Apr 08, 2023 | Team Udayavani |

ನಟ ಕೋಮಲ್‌ ಅಭಿನಯದ “ಉಂಡೆನಾಮ’ ಸಿನಿಮಾ ಇದೇ ಏ. 14ಕ್ಕೆ ತೆರೆಗೆ ಬರುತ್ತಿದೆ. ಸದ್ಯ ಭರದಿಂದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ “ಉಂಡೆನಾಮ’ ಸಿನಿಮಾದ ಮೊದಲ ಟ್ರೇಲರ್‌ ಹೊರತಂದಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಟ ಜಗ್ಗೇಶ್‌, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದು, “ಉಂಡೆನಾಮ’ ಸಿನಿಮಾದ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

Advertisement

ಇದೇ ವೇಳೆ ಮಾತನಾಡಿದ ನಾಯಕ ನಟ ಕೋಮಲ್‌, “ತುಂಬಾ ವರ್ಷಗಳ ನಂತರ ಮತ್ತೂಂದು ಕಂಪ್ಲೀಟ್‌ ಕಾಮಿಡಿ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಕಾಮಿಡಿ ಬಯಸುವ ಪ್ರೇಕ್ಷಕರಿಗೆ “ಉಂಡೆನಾಮ’ ಖಂಡಿತವಾಗಿಯೂ ಖುಷಿಕೊಡುತ್ತದೆ. ಎಲ್ಲ ವರ್ಗದ ಮತ್ತು ಎಲ್ಲ ವಯೋಮಾನದ ಪ್ರೇಕ್ಷಕರು ಒಟ್ಟಾಗಿ ಕುಳಿತು ನೋಡುವಂಥ ಸಿನಿಮಾ ಮಾಡಿದ್ದೇವೆ. ಆಡಿಯನ್ಸ್‌ ನಮ್ಮ ಸಿನಿಮಾ ಮೆಚ್ಚಿಕೊಂಡರೆ, ನಮ್ಮ ಪ್ರಯತ್ನ ಸಾರ್ಥಕ’ ಎಂದು ಸಿನಿಮಾದ ಬಗ್ಗೆ ಭರವಸೆಯ ಮಾತುಗಳನ್ನಾಡಿದರು.

ನಿರ್ದೇಶಕ ರಾಜಶೇಖರ್‌ ಮಾತನಾಡಿ, “ಇಡೀ ಚಿತ್ರತಂಡ ಸಹಕಾರದಿಂದ ಇಂಥದ್ದೊಂದು ಒಳ್ಳೆಯ ಸಿನಿಮಾ ಮಾಡಲು ಸಾಧ್ಯವಾಯಿತು. ಕೋಮಲ್‌ ಅವರ

ಕಾಮಿಡಿಯನ್ನು ಇಷ್ಟುದಿನ ಮಿಸ್‌ ಮಾಡಿಕೊಳ್ಳುತ್ತಿದ್ದವರಿಗೆ ಕೋಮಲ್‌ ಮತ್ತೆ ಮನರಂಜಿಸಲಿದ್ದಾರೆ. ನಮ್ಮ ನಡುವಿನ ಹಾಸ್ಯದ ಕಥೆಯೊಂದನ್ನು ಈ ಸಿನಿಮಾದಲ್ಲಿ ತೆರೆಮೇಲೆ ಹೇಳಿದ್ದೇವೆ. ಈಗಾಗಲೇ ಎಲ್ಲ ಕಡೆಗಳಿಂದಲೂ “ಉಂಡೆನಾಮ’ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಥಿಯೇಟರ್‌ನಲ್ಲೂ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂದರು.

ನಿರ್ಮಾಪಕರಾದ ನಂದಕಿಶೋರ್‌ ಸಿ., ನಟರಾದ ಹರೀಶ್‌ ರಾಜ್‌, ತಬಲ ನಾಣಿ, ನಟಿಯರಾದ ಅಪೂರ್ವಾ, ವೈಷ್ಣವಿ, ಸಂಗೀತ ನಿರ್ದೇಶಕ ಶ್ರೀಧರ್‌ ವಿ. ಸಂಭ್ರಮ್‌ ಸೇರಿದಂತೆ ಚಿತ್ರತಂಡದ ಅನೇಕ ಕಲಾವಿದರು ಮತ್ತು ತಂತ್ರಜ್ಞರು “ಉಂಡೆನಾಮ’ ಟ್ರೇಲರ್‌ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದು, ಸಿನಿಮಾದ ಬಗ್ಗೆ ಮಾತನಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next