Advertisement

ಸಾಮಾನ್ಯನೊಬ್ಬನ ಅಸಾಮಾನ್ಯ ಕಥೆ…ತೋತಾಪುರಿ ಸಿಕ್ಕಿದ್ದು ನನ್ನ ಪುಣ್ಯ ಎಂದ ಜಗ್ಗೇಶ್

11:57 AM Sep 30, 2022 | Team Udayavani |

“ನಗಿಸುತ್ತಲೇ ಜನರಿಗೆ ಒಂದೊಳ್ಳೆಯ ಸಂದೇಶ ಕೊಡಬೇಕು….’ – ಹೀಗೆ ಹೇಳಿ ಸಣ್ಣದೊಂದು ನಗೆ ಬೀರಿದರು ನವರಸ ನಾಯಕ ಜಗ್ಗೇಶ್‌. ಅವರು ಹೇಳಿದ್ದು “ತೋತಾಪುರಿ’ ಚಿತ್ರದ ಬಗ್ಗೆ. ಈ ಚಿತ್ರ ಇಂದು ವಿಶ್ವಾದ್ಯಂತ ತೆರೆಕಾಣುತ್ತಿದೆ. ಸಹಜವಾಗಿಯೇ ಈ ಚಿತ್ರದ ಮೇಲೆ ಜಗ್ಗೇಶ್‌ ಅವರಿಗೆ ನಿರೀಕ್ಷೆ ಇದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌, ಹಾಡು ಹಿಟ್‌ಲಿಸ್ಟ್‌ ಸೇರಿದೆ. ಜಗ್ಗೇಶ್‌ ಸಿನಿಮಾದಲ್ಲಿರಬೇಕಾದ ಹಾಸ್ಯ ಇಲ್ಲಿ ಡಬಲ್‌ ಆಗಿದೆ. ಇದೇ ಕಾರಣದಿಂದ ಜಗ್ಗೇಶ್‌ ಕೂಡಾ ಈ ಸಿನಿಮಾ ಬಗ್ಗೆ ಖುಷಿಯಿಂದ ಮಾತನಾಡುತ್ತಾರೆ.

Advertisement

“ನನ್ನ ಪ್ರಕಾರ ಯಾವುದೇ ಒಂದು ಸೀರಿಯಸ್‌ ವಿಚಾರವನ್ನು ಅಷ್ಟೇ ಸೀರಿಯಸ್‌ ಆಗಿ ಹೇಳುವ ಬದಲು, ಅದನ್ನು ಹ್ಯೂಮರಸ್‌ ಆಗಿ ಹೇಳಬೇಕು. ಆಗ ಅದು ಜನರಿಗೆ ಬೇಗನೇ ಕನೆಕ್ಟ್ ಆಗುತ್ತದೆ. ಇದನ್ನು ನಾನು ನನ್ನ ಶಾಲಾ ದಿನಗಳಲ್ಲೇ ಕಲಿತುಕೊಂಡೆ. ಅದೇ ಕಾರಣದಿಂದ ನನ್ನ ಸಿನಿಮಾಗಳಲ್ಲಿ ಕಾಮಿಡಿ ಜೊತೆಗೆ ಒಂದು ಗಂಭೀರ, ಸಿನಿಮಾ ಮುಗಿದ ಮೇಲೂ ಕಾಡುವ ವಿಚಾರ ಇರುತ್ತದೆ. “ತೋತಾಪುರಿ’ ಕೂಡಾ ಅದೇ ತರಹದ ಸಿನಿಮಾ. ಈ ಸಿನಿಮಾ ನನಗೆ ಸಿಕ್ಕಿದ್ದು ನನ್ನ ಪುಣ್ಯ. ಏಕೆಂದರೆ ಇಲ್ಲಿ ನಿರ್ದೇಶಕ ವಿಜಯ ಪ್ರಸಾದ್‌ ಮಾಡಿರುವ ಕಥೆ ಇಂದಿನ ಸಮಾಜಕ್ಕೆ ತುಂಬಾ ಪ್ರಸ್ತುತವಾಗಿದೆ. ಕಾಮಿಡಿ, ಡಬಲ್‌ ಮೀನಿಂಗ್‌ … ಎಲ್ಲಾ ಇದ್ದರೂ ಅದಕ್ಕಿಂತ ಹೆಚ್ಚಾಗಿ ಸಂವಿಧಾನವನ್ನು ಎತ್ತಿಹಿಡಿಯುವ ಅಂಶ ಸಿನಿಮಾದ ಹೈಲೈಟ್‌’ ಎನ್ನುವುದು ಜಗ್ಗೇಶ್‌ ಮಾತು.

ಅದ್ಭುತವಾದ ಸ್ಕ್ರಿಪ್ಟ್ ಮೊದಲೇ ಹೇಳಿದಂತೆ ಜಗ್ಗೇಶ್‌ “ತೋತಾಪುರಿ’ ಮೇಲೆ ಅಪಾರ ನಿರೀಕ್ಷೆ ಇಟ್ಟಿದ್ದಾರೆ. ನಿರ್ದೇಶಕ ವಿಜಯ ಪ್ರಸಾದ್‌ ಈ ಜನ್ಮದಲ್ಲಿ ಮತ್ತೂಮ್ಮೆ ಈ ತರಹದ ಕಥೆ ಮಾಡಲು ಸಾಧ್ಯವಿಲ್ಲ ಎನ್ನುವ ಮಟ್ಟದ ವಿಶ್ವಾಸ ಜಗ್ಗೇಶ್‌ ಅವರದು.

ಇದನ್ನೂ ಓದಿ:ಆರ್ ಎಸ್ಎಸ್ ನಿಷೇಧ ಮಾಡಿ ಎನ್ನುವುದು ದುರ್ದೈವ: ಸಿಎಂ ಬಸವರಾಜ ಬೊಮ್ಮಾಯಿ

ಈ ಬಗ್ಗೆ ಮಾತನಾಡುವ ಅವರು, “ತೋತಾಪುರಿ ಒಂದು ಅದ್ಭುತವಾದ ಸ್ಕ್ರಿಪ್ಟ್. ಆ ನಿರ್ದೇಶಕರು ಇನ್ನು ಈ ಜನ್ಮದಲ್ಲಿ ಆ ತರಹದ ಕಥೆ ಮತ್ತೆ ಮಾಡುವುದಕ್ಕೆ ಸಾಧ್ಯವಿಲ್ಲ. ನನ್ನ ಪುಣ್ಯಕ್ಕೆ ಈ ಕಥೆ ನನಗೆ ಸಿಕ್ಕಿದೆ. ನಮ್ಮಲ್ಲಿ ಸಾಕಷ್ಟು ಗೊಂದಲ, ಸಮಸ್ಯೆಗಳಿವೆ. ನಾನು, ನೀನು, ತಾನು, ಜಾತಿ ಅಂತ. ಇದನ್ನು ಹೊರತುಪಡಿಸಿ ಪ್ರೀತಿ ಹುಡುಕೋಣ ಎಂಬ ತಾತ್ಪರ್ಯ ನಮ್ಮ ಸಿನಿಮಾದ್ದು. ಕಥೆಯಲ್ಲಿ ಎಲ್ಲ ಜಾತಿಯವರು ಸ್ನೇಹಿತರು. ಇದೊಂದು ಕಂಟೆಂಟ್‌ ಸಿನಿಮಾ. ಇವತ್ತು ಜನರ ಸಿನಿಮಾ ಅಭಿರುಚಿ ಬದಲಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಥೆ ಬೇಕು ಎನ್ನುತ್ತಿದ್ದಾರೆ. ಇವತ್ತು ಓಟಿಟಿಯಲ್ಲೂ ಇದಕ್ಕೆ ಮಾರ್ಕೆಟ್‌ ಜಾಸ್ತಿ. ಜನ ಸಹ ಇದು ನನ್ನ ಕಥೆ ಅಂತ ಬರುತ್ತಾರೆ. ಆ ತರಹ ಕಂಟೆಂಟ್‌ ಇರುವ ಸಿನಿಮಾ ಇದು. ನನ್ನ ಪಾತ್ರದ ಜೊತೆಗೆ ಶಕೀಲಾ ಬಾನು, ದೊನ್ನೆ ರಂಗಮ್ಮ, ನಂಜಮ್ಮ ಪಾತ್ರಗಳು ತುಂಬಾ ಗಟ್ಟಿತನದಿಂದ ಕೂಡಿವೆ. ಬಡತನದ ರೇಖೆಯ ಕೆಳಗಿರುವವರ ಮಾತಾಡಿಸಿ, ಅವರ ಭಾವನೆಗಳನ್ನು ಕೆದಕಿ ಒಂದೊಳ್ಳೆಯ ಕಥೆ ಮಾಡಿದ್ದಾರೆ. ತುಂಬಾ ಉದ್ದ ಇತ್ತು. ಕೊನೆಗೆ ಎರಡು ಭಾಗ ಆಯ್ತು’ ಎನ್ನುವುದು ಜಗ್ಗೇಶ್‌ ಅವರ ಮಾತು.

Advertisement

ಇನ್ನು, ಚಿತ್ರದ ಎರಡನೆಯ ಭಾಗದಲ್ಲಿ ಪುನೀತ್‌ ಇದ್ದರೆ ಚೆಂದ ಎನಿಸಿ, ಅವರನ್ನು ಭೇಟಿ ಕೂಡಾ ಮಾಡಿತ್ತಂತೆ ಚಿತ್ರತಂಡ. ಆದರೆ, ಕಾರಣಾಂತರಗಳಿಂದ ಆಗಲಿಲ್ಲ. ಆ ಜಾಗಕ್ಕೆ ಧನಂಜಯ್‌ ಬಂದಿದ್ದಾರೆ. ತೋತಾಪುರಿ ಎರಡು ಭಾಗಗಳಲ್ಲಿ ತಯಾರಾಗಿದ್ದು, ನೂರಾರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಕಾಮಿಡಿ ಸಿನಿಮಾವೊಂದಕ್ಕೆ ಈ ಪರಿ ಶೂಟಿಂಗ್‌ ಮಾಡಿರುವುದು ಒಂದೆಡೆಯಾದರೆ, ಜಗ್ಗೇಶ್‌ ನಟಿಸಿರುವ ಸಿನಿಮಾಗಳ ಪೈಕಿ ತೋತಾಪುರಿ ಬಿಗ್‌ ಬಜೆಟ್‌ ಸಿನಿಮಾ ಎಂಬುದು ಗಮನಾರ್ಹ. ಹಾಗೆಯೇ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ ಎಂಬುದು ಮತ್ತೂಂದು ಗಮನಾರ್ಹ ವಿಷಯ. ಡಾಲಿ ಧನಂಜಯ, ಅದಿತಿ ಪ್ರಭುದೇವ, ಸುಮನ್‌ ರಂಗನಾಥ್‌, ವೀಣಾ ಸುಂದರ್‌, ದತ್ತಣ್ಣ, ಹೇಮಾದತ್‌ ಸೇರಿದಂತೆ ಅನೇಕ ಕಲಾವಿದರು ತೋತಾಪುರಿ ತಾರಾಗಣದಲ್ಲಿದ್ದಾರೆ. ಈ ಚಿತ್ರವನ್ನು ಕೆ.ಎ.ಸುರೇಶ್‌ ನಿರ್ಮಿಸಿದ್ದಾರೆ.

 ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next