Advertisement

ಮಾರುವೇಷದಲ್ಲಿ ಕೆಜಿಎಫ್ ಕಣ್ತುಂಬಿಕೊಂಡ ಜಗ್ಗೇಶ್‌ 

03:36 PM Dec 27, 2018 | Sharanya Alva |

ಚಿತ್ರತಾರೆಯರು ಚಿತ್ರಮಂದಿರಗಳಿಗೆ ಜನರ ಜೊತೆ ಕೂತು ಚಿತ್ರ ನೋಡಲು ಬರುತ್ತಾರೆ ಎಂದರೆ ಅಲ್ಲಿ ಜನ ಜಂಗುಳಿ ಬಗ್ಗೆ ಹೇಳಬೇಕೆ? ಇನ್ನು ತಮ್ಮ ನೆಚ್ಚಿನ ನಟ ಕಣ್ಣಳತೆ ದೂರದಲ್ಲಿದ್ದಾರೆ ಎಂದರೆ, ಅಭಿಮಾನಿಗಳು, ಪರಿಚಿತರು ಬಂದು ಮಾತನಾಡಿಸುವುದು, ಜೊತೆಗೊಂದು ಸೆಲ್ಫಿ
ಕ್ಲಿಕ್ಕಿಸಿಕೊಂಡು ಸೋಷಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಮಾಡುವುದು ಸರ್ವೇ ಸಾಮಾನ್ಯ. ಇವೆಲ್ಲ ಅಭಿಮಾನ ಪ್ರದರ್ಶಿಸುವ ರೀತಿಯಾದರೂ, ಇದರಿಂದ ನಿಜವಾಗಿಯೂ ಕಿರಿಕಿರಿ ಅನುಭವಿಸುವುದು ಸ್ವಾರ್‌ ಎನಿಸಿಕೊಂಡವರು.

Advertisement

ಈಗ ಯಾಕೆ ಈ ವಿಷಯ ಅಂತೀರಾ? ಅದಕ್ಕೊಂದು ಕಾರಣವಿದೆ. ಇತ್ತೀಚೆಗೆ ತೆರೆಕಂಡ “ಕೆಜಿಎಫ್’ ಚಿತ್ರವನ್ನು ಪ್ರೇಕ್ಷಕರ ಜೊತೆ ಕೂತು ಕಣ್ತುಂಬಿಕೊಳ್ಳಬೇಕೆಂಬ ಆಸೆಯಿಂದ ನಟ ಜಗ್ಗೇಶ್‌ ಮಾರುವೇಷದಲ್ಲಿ ಚಿತ್ರಮಂದಿರಕ್ಕೆ ಹೋಗಿ ಚಿತ್ರವನ್ನು ವೀಕ್ಷಿಸಿಕೊಂಡು ಬಂದಿದ್ದಾರೆ. ತಮ್ಮನ್ನು ಯಾರಾದರೂ ಗುರುತು ಹಿಡಿದರೆ, ಜನ ಜಂಗುಳಿ ಆಗಬಹುದು. ಚಿತ್ರ ನೋಡಲು ಬಂದ ಸಹಪ್ರೇಕ್ಷಕರಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಜಗ್ಗೇಶ್‌ ಈ ಹೊಸತಂತ್ರದ ಮೊರೆ ಹೋಗಿದ್ದರು.

“ಕೆಜಿಎಫ್’ ಚಿತ್ರವನ್ನು ಪ್ರೇಕ್ಷಕರ ಜೊತೆ ಕೂತು ನೋಡಿದ ಅನುಭವವನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಶೇರ್‌ ಮಾಡಿದ್ದಾರೆ. ಲುಂಗಿ ಉಟ್ಟು, ಕಾಲಿಗೆ ಹವಾಯ್‌ ಚಪ್ಪಲಿ ಹಾಗೂ ತಲೆಗೆ ಮಂಕಿ ಟೋಪಿ ಧರಿಸಿ, ಬಹಳ ದಿನದ ನಂತರ ಒಬ್ಬನೆ ಮುಂದಿನ ಕ್ಲಾಸ್‌ಗೆ ಹೋಗಿ ಕೆಜಿಎಫ್ ನೋಡಿದೆ. 38ವರ್ಷದ ಹಿಂದೆ ನಾನು ಹೀಗೆ ಸಿನಿಮಾಗೆ ಹೋಗುತ್ತಿದ್ದದ್ದು! ಹಾಗೆ ಹೋದದ್ದು ಸಾಮಾನ್ಯ ಜೀವನ ಎಂಜಾಯ್‌ ಮಾಡಲು. ಖಾರಾಪುರಿ, ಟೀ ಇಂಟರ್‌ವಲ್‌ನಲ್ಲಿ ಮಜಾ ನೀಡಿತು. ಯಾರು ಗುರುತು ಹಿಡಿಯದಂತೆ ಜಾಗ್ರತೆ ವಹಿಸಿದೆ. ಕಾರಣ ಏಕಾಂತ
ಎಂಜಾಯ್ಮೆಂಟ್ ಎಂದು ತಮ್ಮ ಅನುಭವ ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next