ಬೆಂಗಳೂರು : ರಾಜ್ಯಸಭೆಗೆ ಬಿಜೆಪಿ ಸಿಕ್ಕ ಖುಷಿಯಲ್ಲಿ ನವರಸ ನಾಯಕ, ಮಾಜಿ ಶಾಸಕ ಜಗ್ಗೇಶ್ ಅವರು ಟ್ವೀಟ್ ಮೂಲಕ ರಾಯರ ಕೃಪೆ ಅವರ ಪವಾಡಕ್ಕೆ ಧನ್ಯ ಎಂದು ಹೇಳಿದ್ದಾರೆ.
ಆತ್ಮೀಯ ಕನ್ನಡದ ಬಂಧುಗಳೆ, 42ವರ್ಷ ತಪಸ್ಸಿನಂತೆ ಕಲಾರಂಗದಲ್ಲಿ ಸೇವೆಮಾಡಿ, ಕಾಯವಾಚಮನ ಸತ್ಯಮಾರ್ಗದಲ್ಲಿ ಬದುಕಿದ್ದೇನೆ.ನನ್ನ ನೆಚ್ಚಿನ ಭಾಜಪ ರಾಜ್ಯದ ಮುಖ್ಯ ಮಂತ್ತಿಗಳು, ಮಂತ್ರಿಗಳು,ಶಾಸಕಮಿತ್ರರು,ರಾಜ್ಯ ರಾಷ್ಟ್ರದ ಸಂಘದ ಹಿರಿಯರ ಆಶೀರ್ವಾದದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವೆ ತಮಗೆ ಶಿರಬಾಗಿ ವಂದಿಸುವೆ..ರಾಯರ ಕೃಪೆ ಅವರ ಪವಾಡಕ್ಕೆ ಧನ್ಯ ಎಂದು ಶ್ರೀ ರಾಘವೇಂದ್ರ ಸ್ವಾಮಿಗಳ ಭಾವಚಿತ್ರದೊಂದಿಗೆ ಟ್ವೀಟ್ ಮಾಡಿದ್ದಾರೆ.
ಇದನ್ನೂ: ನಟ ಜಗ್ಗೇಶ್ ಗೆ ಬಿಜೆಪಿ ರಾಜ್ಯಸಭೆ ಟಿಕೆಟ್ : ಸಚಿವೆ ನಿರ್ಮಲಾಗೆ ಮತ್ತೆ ಪ್ರಾಶಸ್ತ್ಯ
59 ರ ಹರೆಯದ ಜಗ್ಗೇಶ್ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಜಡೆಯ ಮಾಯಸಂದ್ರದವರು. ಅವರ ರಾಜಕೀಯ ಜೀವನ ಕಾಂಗ್ರೆಸ್ ಪಕ್ಷದೊಂದಿಗೆ ಆರಂಭವಾಗಿತ್ತು. ತುರುವೇಕೆರೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಶಾಸಕರಾಗಿದ್ದರು ಆದರೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಪರಿಷತ್ ಸದಸ್ಯರಾಗಿದ್ದರು.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (K.S.R.T.C.) ಉಪಾಧ್ಯಕ್ಷರಾಗಿ ಕ್ಯಾಬಿನೆಟ್ ದರ್ಜೆಯನ್ನು ಹೊಂದಿದ್ದರು. ಪ್ರಸ್ತುತ ಅವರು ಕರ್ನಾಟಕ ಭಾರತೀಯ ಜನತಾ ಪಕ್ಷದ ವಿಶೇಷ ಆಹ್ವಾನಿತ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ.