Advertisement

ಆಯವ್ಯಯ ಶಾಸ್ತ್ರದ ಕಾರ್ಯಸಾಧನೆ ಕಷ್ಟಕರ: ಡಾ|ಹೆಗ್ಗಡೆ

05:17 PM Dec 31, 2020 | Team Udayavani |

ಮುಂಬಯಿ: ನಗರದ ಪ್ರತಿಷ್ಠಿತ ಚಾರ್ಟರ್ಡ್‌ ಅಕೌಂಟೆಂಟ್‌, ಶೆಟ್ಟಿ ನಾಯ್ಕ ಆ್ಯಂಡ್‌ ಅಸೋಸಿಯೇಟ್ಸ್‌ ಚಾರ್ಟರ್ಡ್‌ ಅಕೌಂಟೆಂಟ್ಸ್‌ನ ನಿರ್ದೇಶಕ ಸಿಎ ಜಗದೀಶ್‌ ಬಿ. ಶೆಟ್ಟಿ ಸುರತ್ಕಲ್‌ ಇವರ ಸಂಸ್ಥೆಯ 2021ನೇ ಸಾಲಿನ ವಾರ್ಷಿಕ “ಡೈರಿ-2021′ ಅನ್ನು ಮಂಗಳವಾರ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿದರು.

Advertisement

ತುಳುನಾಡ ಕುವರನಾಗಿ ಹುಟ್ಟಿ ಬೆಳೆದು, ಹಣಕಾಸು ವಲಯದಲ್ಲಿ ಹಲವಾರು ಪುರಸ್ಕಾರಗಳನ್ನು ಪಡೆದು, ಆರ್ಥಿಕ ಕ್ಷೇತ್ರದ ಅಪಾರ ಅನುಭವವುಳ್ಳವರಾಗಿ ದೇಶದ ವಾಣಿಜ್ಯ ನಗರಿ ಮುಂಬಯಿಯಲ್ಲಿ ಓರ್ವ ಸಾಧಕ ಯುವ ಲೆಕ್ಕಪರಿಶೋಧಕರಾಗಿ ಜಗದೀಶ್‌ ಶೆಟ್ಟಿ ಅವರು ಅಂತಾರಾಷ್ಟ್ರೀಯ ಹಿರಿಮೆಗೆ ಪಾತ್ರರಾಗಿರುವುದು ಅಭಿನಂದನೀಯ. ಇಂತಹ ಸಾಧನೆ ತುಳುನಾಡ ಮಣ್ಣಿನ ಗುಣವೇ ಸರಿ. ಆಧುನಿಕ ಯುಗದಲ್ಲಿ ಆಯವ್ಯಯ ಶಾಸ್ತ್ರದ ಸೇವೆಯಾಗಲಿ, ಹಣಕಾಸಿನ ಆಡಳಿತ, ವ್ಯಕ್ತಿ ಅಥವಾ ಸಂಸ್ಥೆಯ ವರಮಾನದ ಲೆಕ್ಕಾಚಾರ ಕಾನೂನಾತ್ಮಕವಾಗಿ ಸರಿದೂಗಿಸುವುದು ತುಂಬಾ ಕಷ್ಟದ ಕಾಯಕವಾಗಿದೆ. ಇಂತಹ ಸಮಯದಲ್ಲೂ ನಮ್ಮವರ ಕಾರ್ಯಕ್ಷಮತೆ ಸ್ತುತ್ಯರ್ಹ ಎಂದು ರಾಜರ್ಷಿ ಡಾ| ವೀರೇಂದ್ರ ಹೆಗ್ಗಡೆ ಅವರು ತಿಳಿಸಿ, ಸಿಎ ಜಗದೀಶ್‌ ಶೆಟ್ಟಿ ಅವರನ್ನು ಅಭಿನಂದಿಸಿ ಶುಭ ಹಾರೈಸಿದರು.

ಇದನ್ನೂ ಓದಿ:ಥಾಣೆಯ ಫ್ಲೈ ಓವರ್‌ ಬಂದ್‌

ಈ ಸಂದರ್ಭದಲ್ಲಿ ಡಾ| ವೀರೇಂದ್ರ ಹೆಗ್ಗಡೆ ಅವರ ಆಪ್ತ ಸಹಾಯಕ ಎ. ವಿ. ಶೆಟ್ಟಿ, ಶ್ರೀ ಮಂಜುನಾಥೇಶ್ವರ ಕಾಲೇಜು ಉಜಿರೆ ಇದರ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಎಂ. ಪಿ. ಶ್ರೀನಾಥ್‌ ಅರಸಿನಮಕ್ಕಿ, ಪತ್ರಕರ್ತ ಆರಿಫ್ ಕಲಕಟ್ಟಾ ಉಪಸ್ಥಿತರಿದ್ದರು.

ಅಪರಾಹ್ನ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನಮ್‌ ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠಕ್ಕೆ ತೆರಳಿದ ಸಿಎ ಜಗದೀಶ್‌ ಶೆಟ್ಟಿ ಅವರು ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಭೇಟಿಯಾಗಿ ತಮ್ಮ ವಾರ್ಷಿಕ “ಡೈರಿ-2021′ ಅನ್ನು ಶ್ರೀಪಾದರಿಗೆ ನೀಡಿ ಅನುಗ್ರಹ ಪಡೆದರು.

Advertisement

ಇದನ್ನೂ ಓದಿ:ತ್ರಾಸಿ: ಮದುವೆ ಮಂಟಪದಲ್ಲಿ ಬಾಲ್ಯ ವಿವಾಹ ತಡೆದ ಅಧಿಕಾರಿಗಳು!

Advertisement

Udayavani is now on Telegram. Click here to join our channel and stay updated with the latest news.

Next