Advertisement

ಹಳಿ ತಪ್ಪಿದ ಹೀರಾಖಂಡ್‌ ಎಕ್ಸ್‌ಪ್ರೆಸ್‌ ರೈಲು:36 ಸಾವು,ಹಲವರಿಗೆ ಗಾಯ

09:29 AM Jan 22, 2017 | |

ಭುವನೇಶ್ವರ: ಆಂಧ್ರದ ವಿಜಿಯಾನಗರಂ ಎಂಬಲ್ಲಿ ಜಗದಲ್‌ಪುರ್‌-ಭುವನೇಶ್ವರ್‌ ನಡುವಿನ ಹೀರಾಖಂಡ್‌ ಎಕ್ಸ್‌ಪ್ರೆಸ್‌ ರೈಲು ಶನಿವಾರ ತಡರಾತ್ರಿ ಹಳಿತಪ್ಪಿ ದುರಂತ ಸಂಭವಿಸಿದ್ದು 36 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು 100ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

Advertisement

ಸ್ಥಳದಲ್ಲಿ ರಕ್ಷಣಾ ಕಾರ್ಯ ಬಿರುಸಿನಿಂದ ನಡೆಸಲಾಗಿದ್ದು, ಗಾಯಾಳುಗಳನ್ನು ರಾಯಘಡ ಜಿಲ್ಲಾ ಆಸ್ಪತ್ರೆ ಸೇರಿದಂತೆ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಪ್ರಯಾಣಿಕರನ್ನು ಮುಂದಿನ ಪ್ರಯಾಣಕ್ಕೆ 5 ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಅವಘಡದಿಂದ ರಾಯಘಡ ಮತ್ತು ವಿಜಯನಗರಂ ನಡುವಿನ ರೈಲು ಸಂಚಾರ ಸ್ಥಗಿತಗೊಂಡಿದೆ.

ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ, ಗಂಭೀರ ಗಾಯಾಳುಗಳಿಗೆ 50 ಸಾವಿರ ಮತ್ತು ಅಲ್ಪ ಪ್ರಮಾಣದ ಗಾಯಾಳುಗಳಿಗೆ ತಲಾ 25 ಸಾವಿರ ರೂಪಾಯಿ  ಪರಿಹಾರ ನೀಡುವುದಾಗಿ  ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಘೋಷಣೆ ಮಾಡಿದ್ದಾರೆ.
 
ಹೆಲ್ಪ್ ಲೈನ್‌ ನಂಬರ್‌ಗಳು ಇಂತಿವೆ

06856-223400, 06856-223500 BSNL MOBILES 09439741181, 09439741071, AIRTEL 07681878777. Help line nos at Vizianagaram , RLY NO. 83331, 83332, 83333, 83334 BSNL LAND LINE: 08922-221202, 08922-221206,

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next