Advertisement

ಜಗತ್‌ ಕಿಲಾಡಿಗೆ ಹಣವೇ ಎಲ್ಲ …ಕಿಲಾಡಿ ಹುಡುಗಿಗೆ ಪ್ರೀತಿಯೇ ಎಲ್ಲ .

01:38 PM Jun 08, 2018 | |

“ಜಗತ್‌ ಕಿಲಾಡಿ’ ಅಂದಾಕ್ಷಣ, ಥಟ್ಟನೆ ನೆನಪಾಗೋದೇ ಜಗ್ಗೇಶ್‌. ಯಾಕೆಂದರೆ, ಈ ಹಿಂದೆ ಜಗ್ಗೇಶ್‌ “ಜಗತ್‌ ಕಿಲಾಡಿ’ ಚಿತ್ರದಲ್ಲಿ ನಟಿಸಿದ್ದರು. ಚಾರುಲತಾ ಇತರರು ಅಭಿನಯಿಸಿದ್ದ ಈ ಚಿತ್ರವು ಯಶಸ್ವಿಯಾಗಿತ್ತು. ಈಗ ಅದೇ ಶೀರ್ಷಿಕೆ ಇಟ್ಟುಕೊಂಡು ಸದ್ದಿಲ್ಲದೆ ಸಿನಿಮಾ ಮುಗಿಸಿದೆ ಹೊಸಬರ ತಂಡ. ಈ “ಜಗತ್‌ ಕಿಲಾಡಿ’ ಚಿತ್ರಕ್ಕೆ ನಿರಂಜನ್‌ಶೆಟ್ಟಿ ಹೀರೋ. ಹಾಗಂತ ಇದು ಸ್ವಮೇಕ್‌ ಚಿತ್ರವಲ್ಲ.

Advertisement

ತಮಿಳಿನ “ಸತುರಂಗ ವೆಟ್ಟೈ’ ಚಿತ್ರದ ಅವತರಣಿಕೆ. ಆದರೂ, ಕನ್ನಡತನಕ್ಕೆ ಮೋಸ ಆಗದಂತೆ ಚಿತ್ರ ಮಾಡಿದ್ದಾರೆ ನಿರ್ದೇಶಕ ಆರವ್‌ ಬಿ.ಧೀರೇಂದ್ರ. ಇವರಿಗಿದು ಮೊದಲ ಚಿತ್ರ. ಇನ್ನು, ಈ ಹಿಂದೆ “ಧ್ವನಿ’ ಚಿತ್ರ ನಿರ್ಮಿಸಿದ್ದ ಲಯನ್‌. ಆರ್‌.ರಮೇಶ್‌ ಬಾಬು ಅವರಿಗೆ ಇದು ಎರಡನೇ ನಿರ್ಮಾಣದ ಚಿತ್ರ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಿದೆ.

 ಒಂದು ಹಾಡನ್ನು ಮಾತ್ರ ಬಾಕಿ ಉಳಿಸಿಕೊಂಡಿರುವ ಚಿತ್ರತಂಡ, ಈಗಾಗಲೇ ಬೆಂಗಳೂರು, ಬಳ್ಳಾರಿ, ಕೊಳ್ಳೆಗಾಲ ಸೇರಿದಂತೆ ಇತರೆಡೆ ಚಿತ್ರೀಕರಣ ಮುಗಿಸಿದೆ ಇದೊಂದು ಮನರಂಜನೆಯ ಚಿತ್ರ. ಜೊತೆಗೆ ಸೆಂಟಿಮೆಂಟ್‌ಗೆ ಹೆಚ್ಚು ಜಾಗ ಕಲ್ಪಿಸಲಾಗಿದೆ. ತಾಯಿ ಹಾರೈಕೆಗೆ ಹಣವಿಲ್ಲದೆ ಅಮ್ಮನನ್ನು ಕೆಳದುಕೊಂಡಾಗ, ನಾಯಕ ಬದುಕು ಹೇಗಿರುತ್ತೆ ಎಂಬುದನ್ನು ಅರ್ಥ ಮಾಡಿಕೊಂಡು,

ಕಷ್ಟಪಟ್ಟು ದುಡಿದ ಹಣಕ್ಕಿಂತ ಶ್ರೀಮಂತರ ಹಣ ಕದ್ದು, ಹೇಗೆ ತನ್ನ ಬದುಕಿನ ಶೈಲಿ ಬದಲಿಸಿಕೊಳ್ಳುತ್ತಾನೆ ಅನೋ°ದು ಕಥೆ. ಆ ಬಳಿಕ ಅವನ ಲೈಫ‌ಲ್ಲಿ ಎಂಟ್ರಿಯಾಗುವ ಹುಡುಗಿ, ಜೀವನದಲ್ಲಿ ಹಣಕ್ಕಿಂತ ಪ್ರೀತಿ, ಸಂಬಂಧ, ಬಾಂಧವ್ಯ ಮುಖ್ಯ ಎಂಬುದನ್ನು ತಿಳಿಹೇಳಿ ಹೇಗೆ ಅವನನ್ನು ಅಡ್ಡದಾರಿಯಿಂದ ಸರಿದಾರಿಗೆ ತರುತ್ತಾಳೆಂಬುದನ್ನು ಕುತೂಹಲವಾಗಿ ತೋರಿಸುವ ಪ್ರಯತ್ನ ಮಾಡಿದ್ದಾಗಿ ಹೇಳುತ್ತಾರೆ ನಿರ್ದೇಶಕರು.

ನಾಯಕ ನಿರಂಜನ್‌ ಶೆಟ್ಟಿ ಅವರಿಗೆ ಇಲ್ಲಿ ಸಾಕಷ್ಟು ಚಾಲೆಂಜಿಂಗ್‌ ಪಾತ್ರ ಸಿಕ್ಕಿದೆಯಂತೆ. ಹಿಂದಿನ ಚಿತ್ರಗಳಿಗೆ ಹೋಲಿಸಿದರೆ, ಇಲ್ಲಿ ಹೊಸತನ್ನು ಕಲಿತು, ಒಂದಷ್ಟು ಹೊಸ ಅನುಭವವೂ ಆಗಿದೆ ಎಂಬುದು ಅವರ ಮಾತು. ಅವರಿಲ್ಲಿ ಹದಿಮೂರು ಗೆಟಪ್‌ಗ್ಳಲ್ಲಿ ಕಾಣಿಸಿಕೊಂಡಿರುವುದು ವಿಶೇಷವಂತೆ. ಇಲ್ಲಿ ಗೆಳೆತನಕ್ಕೆ ಒಂದು ವಿಶೇಷ ಸ್ಥಾನ ಕಲ್ಪಿಸಲಾಗಿದೆ. ಅದು ಹೇಗೆ ಎಂಬುದನ್ನು ಚಿತ್ರದಲ್ಲೇ ಕಾಣಬೇಕೆಂಬುದು ಅವರ ಮಾತು.

Advertisement

ಅಮಿತಾ ಕುಲಾಲ್‌ ಇಲ್ಲಿ ಮುಗ್ಧ ಹುಡುಗಿಯಾಗಿ, ಅಡ್ಡದಾರಿಯಲ್ಲಿ ಸಾಗುವ ನಾಯಕನಿಗೆ ಬುದ್ಧಿ ಮಾತು ಹೇಳಿ, ಸರಿಪಡಿಸುವಂತಹ ಹುಡುಗಿಯಾಗಿ ನಟಿಸಿದ್ದಾರಂತೆ. ಉಳಿದಂತೆ ಇಲ್ಲಿ ಮೈತ್ರಿ ಜಗದೀಶ್‌, ಮಹೇಶ್‌, ಸುಚೇಂದ್ರ ಪ್ರಸಾದ್‌, ರಂಗಾಯಣ ರಘು, ಜೈ ಜಗದೀಶ್‌, ಮೈಕೋ ನಾಗರಾಜ್‌, ಕಡ್ಡಿ ವಿಶ್ವ, ಪವನ್‌ಕುಮಾರ್‌, ಸುನೇತ್ರಾ ಪಂಡಿತ್‌, ವಿಜಯ್‌ ಕೌಂಡಿನ್ಯ ಇತರರು ನಟಿಸಿದ್ದಾರೆ.

ಗಿರಿಧರ್‌ ದಿವಾನ್‌ ಇಲ್ಲಿ ಐದು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಅವರಿಗೆ ಇದು 13 ನೇ ಚಿತ್ರ ಎಂಬುದು ವಿಶೇಷ. ಸಿನಿಟೆಕ್‌ ಸೂರಿ ಛಾಯಾಗ್ರಹಣವಿದೆ. ವಿನಾಯಕರಾಮ್‌ ಕಲಗಾರು ಹಾಗು ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ತ್ರಿಭುವನ್‌ ನೃತ್ಯ ಸಂಯೋಜಿಸಿದ್ದಾರೆ.  ಶ್ಯಾಡ್ರಕ್‌ ಸಾಲೋಮನ್‌ ಹಿನ್ನೆಲೆ ಸಂಗೀತವಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್‌ನಲ್ಲಿ “ಜಗತ್‌ ಕಿಲಾಡಿ’ ದರ್ಶನ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next