Advertisement

ನಡೆಯಲಿದೆ ಜಗತ್ಪ್ರಸಿದ್ಧ ಜಗನ್ನಾಥ ರಥ ಯಾತ್ರೆ

01:56 AM Jun 23, 2020 | Sriram |

ಹೊಸದಿಲ್ಲಿ: ಪುರಿ ಜಗನ್ನಾಥನ ರಥಯಾತ್ರೆ ರದ್ದು ತೀರ್ಪನ್ನು ಪುನರ್‌ಪರಿಶೀಲಿಸಿರುವ ಸುಪ್ರೀಂ ಕೋರ್ಟ್‌ ಸೋಮವಾರ ಷರತ್ತುಬದ್ಧ ಅನುಮತಿ ನೀಡಿದೆ.

Advertisement

ಸಾರ್ವಜನಿಕರ ಉಪಸ್ಥಿತಿ ಇಲ್ಲದೆ ಈ ರಥಯಾತ್ರೆ ಮಾಡಬಹ ದಾಗಿದೆ. ಹೀಗಾಗಿ ಸೋಮವಾರ ರಾತ್ರಿಯಿಂದಲೇ ಪುರಿ ಯಲ್ಲಿ ಕರ್ಫ್ಯೂ ಜಾರಿಯಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ಈ ಮೊದಲು ಸುಪ್ರೀಂ ಕೋರ್ಟ್‌ ರಥಯಾತ್ರೆಗೆ ತಡೆ ನೀಡಿತ್ತು. ಕೇಂದ್ರ ಸರಕಾರ, ಒಡಿಶಾ ರಾಜ್ಯ ಸರಕಾರಗಳ ಮೇಲ್ಮನವಿ ಪರಿಶೀಲಿಸಿದ ಮುಖ್ಯ ನ್ಯಾ| ಎಸ್‌.ಎ. ಬೋಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ರಥಯಾತ್ರೆಗೆ ಷರತ್ತುಬದ್ಧ ಅನುಮತಿ ನೀಡಿದೆ. “ಇದು ಕೋಟ್ಯಂತರ ಜನರ ನಂಬಿಕೆಯ ವಿಷಯ. ಜಗನ್ನಾಥ ಮೂರ್ತಿ ಮಂದಿರದಿಂದ ಹೊರಬಂದು ರಥ ಎಳೆಯ ದಿದ್ದರೆ ಸಂಪ್ರದಾಯದ ಪ್ರಕಾರ ಮತ್ತೆ 12 ವರ್ಷ ಹೊರಬರುವಂತಿಲ್ಲ’ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದಿಸಿದ್ದರು.

ಷರತ್ತುಗಳೇನು?
ಭಕ್ತರ ಉಪಸ್ಥಿತಿ ಇಲ್ಲದೆ ರಥಯಾತ್ರೆ ನಡೆಸ ಬೇಕು. ಟಿವಿ ಮೂಲಕ ಭಕ್ತರಿಗೆ ರಥಯಾತ್ರೆಯ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಅರ್ಚಕರು, ರಥ ಎಳೆಯುವವರು ಸಹಿತ ಮೂರು ರಥಗಳ ಉತ್ಸವದಲ್ಲಿ ತಲಾ 500 ಮಂದಿಯಂತೆ 1,500 ಮಂದಿ ಮಾತ್ರ ಭಾಗವಹಿಸಬಹುದು. ಇವರೆಲ್ಲರ ಪರೀಕ್ಷೆ ನಡೆಸಿ ಕೊರೊನಾ ನೆಗೆಟಿವ್‌ ಎಂದು ದೃಢಪಟ್ಟವರು ಮಾತ್ರ ಪಾಲ್ಗೊಳ್ಳಬೇಕು ಎಂದು ತೀರ್ಪಿನಲ್ಲಿ ಸೂಚಿಸಲಾಗಿದೆ.

ಸಿದ್ಧತೆ ಬಗ್ಗೆ ಶಾ ಮಾತುಕತೆ
ರಥಯಾತ್ರೆ ಸಿದ್ಧತೆಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಶ್ರೀ ಜಗನ್ನಾಥ ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಜಪತಿ ಮಹಾರಾಜ ದಿವ್ಯಸಿಂಗ್‌ ದೇವ್‌ ಅವರೊಂದಿಗೆ ಸೋಮವಾರ ದೂರವಾಣಿ ಮೂಲಕ ಚರ್ಚಿಸಿದ್ದಾರೆ. ಜಗನ್ನಾಥನ ಮಹಾನ್‌ ಭಕ್ತ ಪ್ರಧಾನಿ ಮೋದಿ ಅವರ ನಿರ್ದೇಶನದಂತೆ ಶಾ ಕೆಲವು ಸಲಹೆಗಳನ್ನು ನೀಡಿದ್ದಾರೆ.

Advertisement

ಕಣ್ಣೀರು ಸುರಿಸಿದ್ದ ಕುಶಲಕರ್ಮಿಗಳು
ಈ ಹಿಂದೆ ರಥಯಾತ್ರೆಗೆ ಸು.ಕೋ. ತಡೆಯಾಜ್ಞೆ ನೀಡಿದ ಸುದ್ದಿ ಕೇಳಿ ರಥ ನಿರ್ಮಿಸಲು ಶ್ರಮಿಸಿದ್ದ ಕುಶಲಕರ್ಮಿಗಳು ಕಂಬನಿಗರೆದಿದ್ದರು. ರಥ ಸಿದ್ಧವಾದ ಬಳಿಕ ರಥಯಾತ್ರೆ ನಡೆಸಲಾಗದಂತಹ ಸ್ಥಿತಿ ನಾನು ಕಂಡಿಲ್ಲ, ಕೇಳಿಲ್ಲ. ನನ್ನ ತಂದೆ, ಅಜ್ಜ ಕೂಡ ಇದೇ ರಥ ನಿರ್ಮಾಣ ಮಾಡುತ್ತಿದ್ದರು ಎಂದು ಬಲಭದ್ರನ ರಥ ತಾಲಧ್ವಜದ ಮುಖ್ಯ ಬಡಗಿ ನರಸಿಂಗ ಮಹಾಪಾತ್ರ ಹೇಳಿದ್ದರು. ಸು.ಕೋರ್ಟ್‌ನ ಹೊಸ ಆದೇಶ ಅವರೆಲ್ಲರಿಗೆ ಸಂತಸ ತಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next