Advertisement

ಪುರಿಯಲ್ಲಿ ರಥ ಸಂಭ್ರಮ

06:00 AM Jul 15, 2018 | Team Udayavani |

ಪುರಿ: ಬಿಗಿ ಭದ್ರತೆಯೊಂದಿಗೆ ಒಡಿಶಾದ ಪುರಿ ಜಗನ್ನಾಥ ದೇಗುಲದ ರಥಯಾತ್ರೆ ಆರಂಭವಾಗಿದ್ದು, ಲಕ್ಷಾಂತರ ಭಕ್ತರು ರಥಯಾತ್ರೆಯನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದಾರೆ. ಸುರಿಯುತ್ತಿರುವ ಮಳೆಯ ಮಧ್ಯೆಯೇ ದೇಶ ವಿದೇಶಗಳಿಂದ ಆಗಮಿಸಿದ ಭಕ್ತರು ಒಂಬತ್ತು ದಿನಗಳ ಈ ರಥಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. 12ನೇ ಶತಮಾನದ ಜಗನ್ನಾಥ, ಬಲಭದ್ರ ಹಾಗೂ ದೇವಿ ಸುಭದ್ರರ ರಥವು ಶನಿವಾರದಿಂದ ಒಂಬತ್ತು ದಿನಗಳಲ್ಲಿ ಗುಂಡಿಚಾ ದೇಗುಲಕ್ಕೆ ತೆರಳಿ ಅಲ್ಲಿಂದ ಸ್ವಸ್ಥಾನಕ್ಕೆ ಮರಳಲಿದೆ. ಶನಿವಾರ ಕೆಲವು ಅಡಿಗಳಷ್ಟು ದೂರ ರಥ ಎಳೆಯಲಾಯಿತು. ಭಾನುವಾರ ರಥ ಎಳೆಯುವ ಪ್ರಕ್ರಿಯೆ ಮುಂದುವರಿಯಲಿದೆ.

Advertisement

ಪ್ರಧಾನಿ ನರೇಂದ್ರ ಮೋದಿ, ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌, ಸಚಿವ ಧರ್ಮೇಂದ್ರ ಪ್ರಧಾನ್‌ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಜನರಿಗೆ ಶುಭ ಕೋರಿದ್ದಾರೆ. ಜೂನ್‌ 28ರಂದು ಸ್ನಾನ ಪೂರ್ಣಿಮೆ ಯಿಂದಲೇ ಭಕ್ತರ ಸಂಪ್ರದಾಯಗಳು ಆರಂಭವಾಗಿದ್ದು, ಶುಕ್ರವಾರ ದೇವರ ದರ್ಶನ ಮಾಡಿದರು.

ಬಿಗಿ ಭದ್ರತೆ: ರಥವನ್ನು ಹತ್ತುವುದು ಹಾಗೂ ಮುಟ್ಟುವುದನ್ನು ಶ್ರೀ ಜಗನ್ನಾಥ ದೇಗುಲ ಆಡಳಿತ ನಿರ್ಬಂಧಿಸಿದೆ. ರಥವನ್ನು ಮುಟ್ಟುವುದು ಅಪರಾಧ ಎಂದು ಪರಿಗಣಿಸಲಾಗಿದೆ. ಆದರೆ ಹರಕೆ ಹೊತ್ತವರಿಗೆ ಮಾತ್ರವೇ ಇದರಿಂದ ವಿನಾಯಿತಿ ಇದೆ ಎಂದು ಆಡಳಿತ ಮಂಡಳಿಯ ಮುಖ್ಯಸ್ಥ ಪಿ.ಕೆ.ಮಹಾಪಾತ್ರ ಹೇಳಿದ್ದಾರೆ.

140 ಪೊಲೀಸ್‌ ಪಡೆಗಳು ಅಂದರೆ 4200 ಪೊಲೀಸರು ಹಾಗೂ 1 ಸಾವಿರ ಅಧಿಕಾರಿಗಳನ್ನು ಭದ್ರತಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಇದರ ಜೊತೆಗೆ ಕರಾವಳಿ ಹಾಗೂ ನೌಕಾ ನಿಗಾವನ್ನೂ ವಹಿಸಲಾಗಿದೆ. ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಿಸಿಟಿವಿ ಅಳವಡಿಸಲಾಗಿದೆ. 

ದೇಗುಲದ ಹೊರಭಾಗ, ರಥಗಳ ಸುತ್ತ ಮತ್ತು ಗ್ರಾಂಡ್‌ ರಸ್ತೆ, ಸಮುದ್ರ ತೀರ, ರೈಲ್ವೆ ಹಾಗೂ ಬಸ್‌ ನಿಲ್ದಾಣಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಕಾಲು¤ಳಿ ದಂತಹ ಸನ್ನಿವೇಶವನ್ನು ನಿರ್ವಹಿಸಲೂ ನಾವು ಸಿದ್ಧವಾಗಿದ್ದೇವೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

Advertisement

ಪುರಿ ಜಗನ್ನಾಥ ಯಾತ್ರೆಗೆ ಚಾಲನೆ
ಹಲವೆಡೆ ಸಿಸಿಟಿವಿ ಅಳವಡಿಕೆ
ಕಾಲು¤ಳಿತ ಉಂಟಾದರೂ ನಿರ್ವಹಿಸಲು ಪೊಲೀಸರು ಸಿದ್ಧ

Advertisement

Udayavani is now on Telegram. Click here to join our channel and stay updated with the latest news.

Next