ಅಮರಾವತಿ: ಇತ್ತೀಚೆಗೆ ನಡೆದ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜನಸೇನಾ ಮುಖ್ಯಸ್ಥ, ನಟ ಪವನ್ ಕಲ್ಯಾಣ್ ಅವರನ್ನು ಸೋಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಪ್ರತಿಸ್ಪರ್ಧಿ ವೈಎಸ್ ಆರ್ ಸಿಪಿ ಮುಖಂಡ ಮುದ್ರಗಡ ಪದ್ಮನಾಭಂ ಅಧಿಕೃತವಾಗಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Restaurant Sealed: ಸಾಂಬಾರ್ ನಲ್ಲಿ ಸತ್ತ ಇಲಿ, ಗ್ರಾಹಕ ಶಾಕ್..! ರೆಸ್ಟೋರೆಂಟ್ ಗೆ ಸೀಲ್
ಚುನಾವಣಾ ಪ್ರಚಾರದ ವೇಳೆ ಸವಾಲು ಹಾಕಿದಂತೆ ಇದೀಗ ಪದ್ಮನಾಭಂ ಅವರು ತಮ್ಮ ಹೆಸರನ್ನು ಪದ್ಮನಾಭ ರೆಡ್ಡಿ ಎಂದು ಬದಲಾಯಿಸಿಕೊಂಡಿದ್ದಾರೆ.
ಪಿತಾಪುರಂ ವಿಧಾನಸಭಾ ಕ್ಷೇತ್ರದಲ್ಲಿ ಪವನ್ ಕಲ್ಯಾಣ್ ಭರ್ಜರಿ ಗೆಲುವು ಸಾಧಿಸಿದ ನಂತರ ಪದ್ಮನಾಭಂ ತನ್ನ ಹೆಸರನ್ನು ಅಧಿಕೃತವಾಗಿ ಬದಲಾಯಿಸಿಕೊಂಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಅವರನ್ನು ಸೋಲಿಸುವುದಾಗಿ ಸವಾಲು ಹಾಕಿದ್ದರು.
ನನ್ನ ಹೆಸರು ಬದಲಾಯಿಸಲು ಯಾರೂ ಕೂಡಾ ಬಲವಂತ ಮಾಡಿಲ್ಲ, ನನ್ನ ಸ್ವ ಇಚ್ಛೆಯಿಂದ ಹೆಸರು ಬದಲಿಸಿಕೊಂಡಿರುವುದಾಗಿ ರೆಡ್ಡಿ ಸುದ್ದಿಗಾರರ ಜತೆ ಮಾತನಾಡುತ್ತ ಪ್ರತಿಕ್ರಿಯೆ ನೀಡಿದ್ದಾರೆ.
ಆದರೆ ಜನಸೇನಾ ಮುಖ್ಯಸ್ಥ, ನಟ ಪವನ್ ಕಲ್ಯಾಣ್ ಅವರ ಅಭಿಮಾನಿಗಳು ಮತ್ತು ಹಿಂಬಾಲಕರು ಕೆಟ್ಟದಾಗಿ ಕಮೆಂಟ್ಸ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪವನ್ ಕಲ್ಯಾಣ್ ಅವರ ಅಭಿಮಾನಿಗಳು ಅಶ್ಲೀಲ ಕಮೆಂಟ್ಸ್ ಹಾಕುತ್ತಿದ್ದು, ಇದು ಒಳ್ಳೆಯದಲ್ಲ ಎಂದು ರೆಡ್ಡಿ ಹೇಳಿದರು.