Advertisement

ಪಠ್ಯಪುಸ್ತಕ ಕೊರತೆಯಾಗದಂತೆ ಕ್ರಮ

12:11 PM May 18, 2020 | Naveen |

ಜಗಳೂರು: ಒಂದರಿಂದ ಹತ್ತನೇ ತರಗತಿ ಮಕ್ಕಳಿಗೆ ಪಠ್ಯಪುಸ್ತಕದ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯುವರಾಜ್‌ ನಾಯ್ಕ ತಿಳಿಸಿದರು.

Advertisement

ಪಟ್ಟಣದ ಹೊರಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋದಾಮಿನಲ್ಲಿ ಇಡಲಾಗಿರುವ ಪಠ್ಯಪುಸ್ತಕಗಳನ್ನು ವೀಕ್ಷಿಸಿದ ನಂತರ ಅವರು ಮಾತನಾಡಿದರು. ಪ್ರತಿ ವರ್ಷದಂತೆ ಈ ವರ್ಷ ಕೂಡ ಒಂದರಿಂದ ಹತ್ತನೇ ತರಗತಿವರೆಗೆ ಪಠ್ಯಪುಸ್ತಕಗಳು ಸರಬರಾಜಾಗಿವೆ. ಒಂದರಿಂದ ಹತ್ತನೇ ತರಗತಿವರೆಗೆ 2.70 ಲಕ್ಷ ಪಠ್ಯಪುಸ್ತಕಗಳ ಅಗತ್ಯವಿದ್ದು, ಈಗಾಗಲೇ 1.20 ಲಕ್ಷ ಪಠ್ಯಪುಸ್ತಕಗಳು ಸರಬರಾಜಾಗಿವೆ. ಮಕ್ಕಳಿಗೆ ಪಠ್ಯಪುಸ್ತಕದ ಸಮಸ್ಯೆ ಆಗದಂತೆ ನಿಗಾ ವಹಿಸಲಾಗುವುದು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಮಂಜಣ್ಣ, ಬಾಬುರೆಡ್ಡಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next