ಶಿವಮೊಗ್ಗ: ಮುಚ್ಚಿರುವ ವಿಐಎಸ್ ಎಲ್ ಕಾರ್ಖಾನೆಯಲ್ಲಿ ಆಕ್ಸಿಜನ್ ಉತ್ಪಾದನೆ ಮಾಡುವ ಕುರಿತಂತೆ ಚರ್ಚೆ ನಡೆಸಸಲು ಸಚಿವ ಜಗದೀಶ್ ಶೆಟ್ಟರ್ ಇಂದು ಶಿವಮೊಗ್ಗ ಜಿಲ್ಲೆ ಭದ್ರಾವತಿಯ ವಿಐಎಸ್ ಎಲ್ ಕಾರ್ಖಾನೆಗೆ ಭೇಟಿ ನೀಡಿದರು.
ಜಗದೀಶ್ ಶೆಟ್ಟರ್ ಅವರೊಂದಿಗೆ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ಸಂಗಮೇಶ್ವರ್ ಭಾಗಿಯಾಗಿದ್ದರು.
ವಿಐಎಸ್ ಎಲ್ ಕಾರ್ಖಾನೆಯ ಆಕ್ಸಿಜನ್ ಉತ್ಪಾದನಾ ಘಟಕ ಪರಿಶೀಲನೆ ನಡೆಸಿದ ಜಗದೀಶ್ ಶೆಟ್ಟರ್, ಎಷ್ಟು ಆಕ್ಸಿಜನ್ ಉತ್ಪಾದಿಸಬಹುದು ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಇದನ್ನೂ ಓದಿ:ಸರ್ಕಾರವೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ,ಜನರೂ ನಿಯಂತ್ರಣ ಮಾಡಿಕೊಳ್ಳಬೇಕು: ಜಗದೀಶ್ ಶೆಟ್ಟರ್
ಬಳಿಕ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ವಿಐಎಸ್ ಎಲ್ ನಲ್ಲಿನ ಆಕ್ಸಿಜನ್ ಪ್ಲಾಂಟ್ ಪರಿಶೀಲನೆ ನಡೆಸಿದ್ದೇವೆ. ಜಗದೀಶ್ ಶೆಟ್ಟರ್ ಅವರು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. 150 ಸಿಲಿಂಡರ್ ಒಂದು ದಿನಕ್ಕೆ ಸಿಗುತ್ತವೆ. ಹೆಚ್ಚಿನ ಆಕ್ಸಿಜನ್ ಉತ್ಪಾದಿಸಲು ಕಂಪ್ರಷರ್ ಅಗತ್ಯವಿದೆ. ಆಗ 400 ಸಿಲಿಂಡರ್ ಆಕ್ಸಿಜನ್ ಉತ್ಪಾದಿಸಲು ಸಾಧ್ಯ. ಇದರೊಂದಿಗೆ ಜಗದೀಶ್ ಶೆಟ್ಟರ್ ಅವರಿಗೆ ಜಿಲ್ಲೆಗೆ ಹೆಚ್ಚಿನ ಆಕ್ಸಿಜನ್ ಕೊಡಲು ಮನವಿ ಮಾಡಿದ್ದೇವೆ ಎಂದರು.
ಕಂಪ್ರಶರ್ ಶೀಘ್ರವೇ ಬರಲಿದ್ದು, ಹೀಗಾಗಿ ಹೆಚ್ಚಿನ ಆಕ್ಸಿಜನ್ ಉತ್ಪಾದನೆಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಬಹುದು. ಕಂಟೈನರ್ ಹೊಸದನ್ನು ನೀಡುವಂತೆ ಜಗದೀಶ್ ಶೆಟ್ಟರ್ ಅವರ ಬಳಿ ಮನವಿ ಮಾಡಿದ್ದೇವೆ ಎಂದು ಈಶ್ವರಪ್ಪ ಹೇಳಿದರು.