ಐದನೇ ವರ್ಷದತ್ತ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ 4 ವರ್ಷಗಳಲ್ಲಿ ನರೇಂದ್ರ ಮೋದಿ ಸರಕಾರ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿಯ ನೋಟ ಇಲ್ಲಿದೆ.
Advertisement
ಜನಧನ ಯೋಜನೆ– ಪ್ರಧಾನಿ ಮೋದಿಯವರ ಕನಸಿನ ಯೋಜನೆೆ. ಬ್ಯಾಂಕಿಂಗ್ ವಹಿವಾಟಿಗೆ ಒಳಪಡದೇ ಇರುವವರನ್ನು ಸೇರ್ಪಡೆಗೊಳಿಸುವ ಯೋಜನೆ ಇದಾಗಿದೆ.
– 31.52 ಕೋಟಿ- ತೆರೆಯಲಾದ ಜನಧನ ಖಾತೆಗಳು
– ಶೇ.55- 2014-2017ರಲ್ಲಿ ವಿಶ್ವ ಬ್ಯಾಂ ಕ್‌ನ ವರದಿ ಪ್ರಕಾರ, ಜಾಗತಿಕ ಮಟ್ಟದಲ್ಲಿ ಹೊಸದಾಗಿ ತೆರೆಯಲಾಗಿರುವ ಖಾತೆಗಳ ಪೈಕಿ ಭಾರತದಲ್ಲಿನ ಪ್ರಮಾಣ
– ಅಂಚೆ ಪಾವತಿ ಬ್ಯಾಂಕ್- ಇದರಿಂದಾಗಿ ಬ್ಯಾಂಕಿಂಗ್ ವ್ಯವಸ್ಥೆ ಇರದ ಸ್ಥಳದಲ್ಲಿ ಬ್ಯಾಂಕಿಂಗ್ ಸೇವೆ ಸಿಗುವಂತಾಗಿದೆ
– ಬಡವರಿಗೆ ವಿಮೆ ಯೋಜನೆ.
– 13. 25 ಕೋಟಿ ಮಂದಿಗೆ ಪ್ರಯೋಜನ. ವರ್ಷಕ್ಕೆ 12 ರೂ. ವಿಮಾ ಕಂತು
– 330 ರೂ. ವಾರ್ಷಿಕ ಪ್ರೀಮಿಯಂ ಇರುವ ಪಿ.ಎಂ. ಜೀವನ್ ಜ್ಯೋತಿ ವಿಮಾ ಯೋಜನೆ. 5.22 ಕೋಟಿ ಮಂದಿಗೆ ಲಾಭ
– ಅಟಲ್ ಪಿಂಚಣಿ ಯೋಜನೆಯಿಂದ 1 ಕೋಟಿ ಮಂದಿಗೆ ಲಾಭ
– ಪಿ.ಎಂ.ವಯೋ ವಂದನಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆ. ಶೇ.8ರ ಬಡ್ಡಿ ದರದಲ್ಲಿ 10 ವರ್ಷಗಳ ಕಾಲ ಈ ಸೌಲಭ್ಯ. ಹೂಡಿಕೆ ಮಿತಿ 15 ಲಕ್ಷ ರೂ.ಗೆ ವಿಸ್ತರಣೆ. 2020ರ ವರೆಗೆ ಯೋಜನೆ ಲಭ್ಯ ಭಾರತವೇ ಎಂಜಿನ್
– ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಬೆಳವ ಣಿಗೆ ಸಾಧಿಸುತ್ತಿರುವ ಅರ್ಥ ವ್ಯವಸ್ಥೆ ಭಾರತ
– 2013-2017ನೇ ಸಾಲಿನಲ್ಲಿ ದೇಶದ ಜಿಡಿಪಿ ಶೇ.31ರಷ್ಟು ವೃದ್ಧಿ. ಜಾಗತಿಕವಾಗಿ ಹೋಲಿಕೆ ಮಾಡಿದರೆ ವೃದ್ಧಿಯಾದದ್ದು ಶೇ.4.
– ಎಲ್ಲ ರೀತಿಯ ಬಂಡವಾಳ ಹೂಡಿಕೆ ಮತ್ತು ಸಣ್ಣ ಪ್ರಮಾಣದ ಅರ್ಥ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಸಾಧನೆ
Related Articles
ಪ್ರತಿ ವರ್ಷ ಜೂ.21ರಂದು ವಿಶ್ವ ಯೋಗ ದಿನ. ವಿಶ್ವಸಂಸ್ಥೆಯಿಂದಲೇ ಇದಕ್ಕೆ ಮಾನ್ಯತೆ ಮತ್ತು ಯುನೆಸ್ಕೋ ವತಿಯಿಂದ ಅನುಮೋದನೆ
Advertisement
ನೇರ ನಗದು ವರ್ಗ– ಫಲಾನುಭವಿಗಳ ಖಾತೆಗೆ ಸಬ್ಸಿಡಿ ಮೊತ್ತ
– ಮಧ್ಯವರ್ತಿಗಳ ಕಾಟಕ್ಕೆ ತೆರೆ
– ಪಹಲ್ ಯೋಜನೆಯಲ್ಲಿ 20.14 ಕೋಟಿ ಭಾಗಿ. 69,815 ಕೋಟಿ ರೂ. ಫಲಾನುಭವಿಗಳಿಗೆ ವರ್ಗಾವಣೆ
– 431 ಯೋಜನೆಗಳ 3,65, 996 ಕೋಟಿ ರೂ. ಮೊತ್ತ ಖಾತೆಗಳಿಗೇ ಜಮೆ ಆಹಾರ ಭದ್ರತೆ
– 80 ಕೋಟಿಗಿಂತಲೂ ಅಧಿಕ ಜನರಿಗೆ ಆಹಾರ ಭದ್ರತೆ
– 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಜನರಿಗೆ ಯೋಜನೆ ವಿಸ್ತರಣೆ