Advertisement

ಜಾಡಿ, ಹಟ್ಟಿಯಂಗಡಿ ರಸ್ತೆ : ಡಾಮರು ಕಾಮಗಾರಿಗೆ ಮಧ್ಯದಲ್ಲೊಂದು ತೊಡಕು

10:03 PM Mar 17, 2021 | Team Udayavani |

ವಂಡ್ಸೆ: ದೇವಲ್ಕುಂದದಿಂದ ಹಟ್ಟಿಯಂಗಡಿ ಕ್ರಾಸ್‌ವರೆಗಿನ ಸುಮಾರು 4 ಕೋಟಿ ರೂ. ವೆಚ್ಚದ ರಸ್ತೆ ಡಾಮರು ಕಾಮಗಾರಿ ಪೂರ್ಣಗೊಂಡಿದೆ. ಆದರೆ ಅಲ್ಲಿನ ಕಿರು ಸೇತುವೆಯ ಬಳಿ ಒಂದಿಷ್ಟು ವ್ಯಾಪ್ತಿಯ ರಸ್ತೆ ಡಾಮರು ಕಾಮಗಾರಿ ಬಾಕಿ ಉಳಿದಿರುವುದು ಸ್ಥಳೀಯರು ಹಾಗೂ ನಿತ್ಯ ಸಂಚಾರಿಗಳಿಗೆ ಕಿರಿಕಿರಿ ಉಂಟು ಮಾಡಿದೆ.

Advertisement

ಶಾಸಕರ ಪ್ರಯತ್ನದ ಫಲ
ಗ್ರಾಮಸ್ಥರ ಬಹಳಷ್ಟು ವರ್ಷಗಳ ಬೇಡಿಕೆಗೆ ಸ್ಪಂದಿಸಿದ ಬೈಂದೂರು ಶಾಸಕ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಅನುದಾನವನ್ನು ಒದಗಿಸಿದ್ದರು. ಈ ನಡುವೆ ರಸ್ತೆ ವಿಸ್ತ ರ ಣೆ ಸಂದರ್ಭದಲ್ಲಿ ಎದುರಾದ ತಕರಾರು ಕೂಡ ಇತ್ಯರ್ಥಗೊಳಿಸಿ ಕಾಮಗಾರಿ ಮುಂದುವರಿಸಲಾಗಿತ್ತು.

ಅವೈಜ್ಞಾನಿಕ ಕಿರು ಸೇತುವೆ
ನಿರ್ಮಿಸಲಾಗಿರುವ ಕಿರು ಸೇತುವೆ ಅವೈಜ್ಞಾನಿಕವಾಗಿದ್ದು ಆ ಮಾರ್ಗವಾಗಿ ವಾಹನಗಳು ಸಾಗುವಾಗ ಭಯದ ವಾತಾವರಣದಲ್ಲಿ ಸಂಚರಿಸಬೇಕಾಗಿದೆ. ತಿರುವಿನ ನಡುವೆ ನಿರ್ಮಿಸಲಾಗಿರುವ ಸೇತುವೆ ಅಪಘಾತ ಆಹ್ವಾನಿಸುವಂತಿದೆ.

ಪೂರ್ಣಗೊಳ್ಳದ ಕಾಮಗಾರಿ
ಸೇತುವೆ ಸನಿಹದ ಮುಖ್ಯ ರಸ್ತೆಯ ಡಾಮರು ಕಾಮಗಾರಿ ಆರಂಭಗೊಳ್ಳದಿರುವುದು ವಾಹನ ಚಾಲಕರಿಗೆ ಹೊಂಡಮಯ ರಸ್ತೆಯಲ್ಲಿ ಸಾಗಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಹಟ್ಟಿಯಂಗಡಿ ಕ್ರಾಸ್‌ನಿಂದ ದೇವಲ್ಕುಂದದವರೆಗಿನ ಜಾಡಿ ರಸ್ತೆಯ ಅಪೂರ್ಣಗೊಂಡ ಕಾಮಗಾರಿ ಕೂಡಲೇ ಆರಂಭಗೊಳ್ಳದಿದ್ದಲ್ಲಿ ಮಳೆಗಾಲದಲ್ಲಿ ಈ ಮಾರ್ಗವಾಗಿ ಸಂಚರಿಸುವ ದ್ವಿಚಕ್ರ ವಾಹನ ಸಹಿತ ಇನ್ನಿತರ ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗಲಿದೆ. ಅವೈಜ್ಞಾನಿಕ ಕಿರುಸೇತುವೆಯ ಬದಲು ನೇರ ಮಾರ್ಗದ ಕಿರುಸೇತುವೆಯ ನಿರ್ಮಾಣದೊಡನೆ ಉಳಿದ ಭಾಗದ ರಸ್ತೆಯ ಕಾಮಗಾರಿ ಪೂರ್ಣಗೊಂಡಲ್ಲಿ ತಲ್ಲೂರು ಮಾರ್ಗವಾಗಿ ಕೊಲ್ಲೂರಿಗೆ ಸಾಗುವ ನಿತ್ಯ ಪ್ರಯಾಣಿಕರಿಗೆ ಸುಮಾರು 5 ಕಿ.ಮೀ. ದೂರ ವ್ಯಾಪ್ತಿ ಅಂತರ ಉಳಿತಾಯವಾಗಲಿದ್ದು, ಸುಗಮ ವಾಹನ ಸಂಚಾರಕ್ಕೆ ಹತ್ತಿರದ ಮಾರ್ಗ ವಾಗಿ ರೂಪುಗೊಳ್ಳಲಿದೆ. ಹಟ್ಟಿಯಂಗಡಿ- ಕೊಲ್ಲೂರು ಕ್ಷೇತ್ರ ಯಾತ್ರಾರ್ಥಿಗಳಿಗೆ ಸನಿಹದ ಮಾರ್ಗವಾಗಲಿದೆ.

ಶೀಘ್ರದಲ್ಲಿ ಪೂರ್ಣ
ಮಿಕ್ಕುಳಿದ ರಸ್ತೆ ನಿರ್ಮಾಣ ಕಾಮಗಾರಿ ಅತಿ ಶೀಘ್ರದಲ್ಲಿ ಪೂರ್ಣ ಗೊಳಿಸಲಾಗುವುದು.ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆಯಾಗ ದಂತೆ ಕ್ರಮ ಕೈಗೊಳ್ಳಲಾಗುವುದು.
-ಬಿ.ಎಂ. ಸುಕುಮಾರ್‌ ಶೆಟ್ಟಿ, ಶಾಸಕರು ಬೈಂದೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next