Advertisement

ಸ್ಪೂಫಿಂಗ್‌ ಜಾಲಕ್ಕೆ ಸಿಕ್ಕಿಬಿದ್ದ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫ‌ರ್ನಾಂಡೀಸ್‌

07:54 PM Dec 14, 2021 | Team Udayavani |

ಮುಂಬೈ: ಇತ್ತೀಚೆಗೆ ಕಾಡಲಾರಂಭಿಸಿರುವ ಸ್ಪೂಫಿಂಗ್‌ ಸಮಸ್ಯೆಗೆ ಅನೇಕ ಸೆಲೆಬ್ರಿಟಿಗಳು ಸಿಕ್ಕಿಬೀಳಲಾರಂಭಿಸಿದ್ದು, ಬಾಲಿವುಡ್‌ ನಟಿ ಜಾಕ್ವೆಲಿನ್‌ ಫ‌ರ್ನಾಂಡೀಸ್‌ ಕೂಡ ಅದರಲ್ಲಿ ಒಬ್ಬರು.

Advertisement

ಕ್ರಮ ಹಣ ವರ್ಗಾವಣೆ ಪ್ರಕರಣದ ಕುರಿತಾಗಿ ಜಾರ್ಚ್‌ಶೀಟ್‌ ಸಲ್ಲಿಸಿರುವ ಜಾರಿ ನಿರ್ದೇಶನಾಲಯ(ಇಡಿ) ಈ ವಿಚಾರವನ್ನು ಬಹಿರಂಗಪಡಿಸಿದೆ. ನೂರಾರು ಜನರಿಗೆ ಹಣ ವಂಚಿಸಿರುವ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿತನಾಗಿರುವ ಸುಖೇಶ್‌ ಚಂದ್ರಶೇಖರ್‌ ನಟಿಗೆ ಸ್ಫೂಫಿಂಗ್‌ ಮಾಡಿದ್ದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕಚೇರಿಯಿಂದ ಮಾತನಾಡುತ್ತಿರುವುದಾಗಿ ನಂಬಿಸಿದ್ದ ಎಂದು ತಿಳಿಸಲಾಗಿದೆ.

ಇಡಿ ವಿಚಾರಣೆಗೆ ಒಳಗಾಗಿರುವ ಜಾಕ್ವೆಲಿನ್‌ ಮತ್ತು ನೋರಾ ಫ‌ತೇಹಿ ಇಬ್ಬರೂ ಸುಖೇಶ್‌ನಿಂದ ಕೋಟ್ಯಾಂತರ ರೂ. ಮೌಲ್ಯದ ಉಡುಗೊರೆ ಸ್ವೀಕರಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಜಾಕ್ವೆಲಿನ್‌ 1.5 ಲಕ್ಷ ಡಾಲರ್‌ ಸಾಲ, 52 ಲಕ್ಷ ರೂ. ಬೆಲೆಯ ಕುದುರೆ, 9 ಲಕ್ಷ ರೂ. ಬೆಲೆಯ ಪರ್ಷಿಯನ್‌ ಕ್ಯಾಟ್‌, ಹರ್ಮೆಸ್‌ ಬ್ರ್ಯಾಸ್ಲೇಟ್‌ ಮತ್ತು ಮಲ್ಟಿಸ್ಟೋನ್‌ ಇಯರಿಂಗ್‌ನ್ನು ಉಡುಗೊರೆಯಾಗಿ ಪಡೆದಿದ್ದಾರೆ. ನೋರಾ ಅವರು ಬಿಎಂಡಬ್ಲ್ಯೂ ಸೆಡಾನ್‌, ಗುಸ್ಸಿ ಬ್ಯಾಗ್‌ ಮತ್ತು ಐಫೋನ್‌ ಅನ್ನು ಉಡುಗೊರೆಯಾಗಿ ಸ್ವೀಕರಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.

ಸ್ಪೂಫಿಂಗ್‌ ಎಂದರೇನು?
ಸಾಮಾನ್ಯವಾಗಿ ನಿಮ್ಮ ಮೊಬೈಲ್‌ನಲ್ಲಿ ಸೇವ್‌ ಆಗಿರದ ನಂಬರ್‌ ಇಂದ ಕರೆ ಬಂದರೆ ಅದನ್ನು ಸ್ವೀಕರಿಸಬೇಡಿ ಎಂದು ಎಚ್ಚರಿಕೆ ನೀಡಲಾಗುತ್ತಿರುತ್ತದೆ. ಅದಕ್ಕೆ ಕಾರಣ ಈ ಸ್ಪೂಫಿಂಗ್‌. ಹ್ಯಾಕರ್‌ಗಳು ತಮ್ಮ ಕಾಲರ್‌ ಐಡಿ ಬದಲಾಯಿಸಿಕೊಂಡು ಸ್ಪೂಫಿಂಗ್‌ಗೆ ಒಳಗಾಗುವವರ ಪರಿಚಯದವರು, ಅಥವಾ ಯಾವುದೇ ಸಂಸ್ಥೆ ಹೆಸರನ್ನು ಆ ಕಾಲರ್‌ ಐಡಿಯಾಗಿ ಮಾಡಿಬಿಡುತ್ತಾರೆ. ನಂತರ ಕರೆ ಮಾಡಿ, ತಾವೊಂದು ಸಂಸ್ಥೆ/ಕಚೇರಿಯ ಸಿಬ್ಬಂದಿ/ಅಧಿಕಾರಿ ಎಂದು ನಂಬಿಸಿ ನಿಮ್ಮ ವೈಯಕ್ತಿಕ ಮಾಹಿತಿ ಪಡೆಯುತ್ತಾರೆ. ಇಲ್ಲಿ ನಿಜವಾಗಿಯೂ ಫೋನ್‌ ಮಾಡಿದ್ದು ಒಬ್ಬ ಹ್ಯಾಕರ್‌ ಎನ್ನುವುದು ನಿಮಗೆ ಗೊತ್ತೇ ಆಗದಂತೆ ಮಾಡಲಾಗುವುದು. ಆ ಮೂಲಕ ವಂಚನೆ ಮಾಡುವುದನ್ನೇ ಸ್ಪೂಫಿಂಗ್‌ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ:ಲಖೀಂಪುರ ಹಿಂಸಾಚಾರ ಯೋಜಿತ ಸಂಚು: ಎಸ್‌ಐಟಿ

Advertisement

ಯಾವ ರೀತಿಯಲ್ಲಿ ಮೋಸ?
ವೈಯಕ್ತಿಯ ಮಾಹಿತಿ ಪಡೆಯುವುದಕ್ಕೆ, ಬೆದರಿಕೆಗೆ ಸೇರಿ ಅನೇಕ ರೀತಿಯ ಅಕ್ರಮಗಳಿಗೆ ಈ ಸ್ಪೂಫಿಂಗ್‌ ಬಳಕೆಯಾಗುತ್ತಿದೆ. ಅಪಹರಣ ಪ್ರಕರಣಗಳಲ್ಲೂ ಇದರ ಬಳಕೆಯಿದೆ. ಸರ್ಕಾರವು ಈ ವಿಧಾನವನ್ನು ಅಪರಾಧಿಗಳನ್ನು ಪತ್ತೆಹಚ್ಚುವುದಕ್ಕೂ ಬಳಸುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next