Advertisement
ಶಿವಮೊಗ್ಗ, ಶಿಕಾರಿಪುರ, ಸಾಗರ, ಶಿರಸಿ ಕಡೆ ಇದನ್ನು ಬೆಳೆಯುತ್ತಿದ್ದು,ಅಲ್ಲಿಯ ಬೆಳೆಗಾರರು ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಇದನ್ನು ಮಾರಾಟ ಮಾಡುತ್ತಾರೆ. ಪಟ್ಟಣದ ಮಾರಾಟಗಾರರು ಅಲ್ಲಿಂದ ತಂದು ಗಾತ್ರಕ್ಕೆ ತಕ್ಕಂತೆ ಮಾರುತ್ತಾರೆ. ಸಣ್ಣ ಗಾತ್ರದ ಹಣ್ಣಿಗೆ 150 ರೂ, ದೊಡ್ಡ ಗಾತ್ರ 300 ರಿಂದ 500ರ ವರೆಗೆ ಮಾರಾಟ ಆಗುತ್ತವೆ. ಆದರೆ ಇಲ್ಲಿ ಪೂರ್ಣ ಹಣ್ಣುಗಳನ್ನು ಖರೀದಿಸದೇ ಇರುವುದರಿಂದ ಒಂದು ಪೀಸ್ ಹಲಸಿನ ಹಣ್ಣಿಗೆ 5 ರೂ.ನಂತೆ ಮಾರುತ್ತಾರೆ. ಹಲಸು ಹಣ್ಣಿನ ಪೀಸ್ ಕೆಜಿಗೆ 100 ರಿಂದ 120ರ ವರೆಗೆ ಮಾರಾಟ ಮಾಡುತ್ತಿದ್ದಾರೆ.
Related Articles
Advertisement
ನಿಜವಾದ ಹಣ್ಣುಗಳ ರಾಜ: ಹಣ್ಣುಗಳ ರಾಜ ಮಾವು ಎಂಬುದು ಸಾರ್ವತ್ರಿಕ. ಆದರೆ ನಿಜವಾಗಿ ಗಾತ್ರ, ವಿನ್ಯಾಸ, ಮರ, ರುಚಿ, ಅಡುಗೆ ಹೀಗೆ ಒಂದಿಲ್ಲೊಂದು ಬಳಕೆಗೆ ಸಿಗುವ ಹಲಸು ನಿಜವಾದ ಮಹಾರಾಜ. ಈ ಹಣ್ಣು ಗಾತ್ರದಲ್ಲಿ ಹೇಗೆ ದೊಡ್ಡ ಸ್ಥಾನ ಪಡೆದಿದೆಯೋ ಹಾಗೆಯೇ ಆರೋಗ್ಯದ ವಿಚಾರದಲ್ಲೂ ಬಹು ಮಹತ್ತರವಾದ ಪ್ರಯೋಜನಗಳನ್ನು ಒಳಗೊಂಡಿದೆ.
ಈ ಭಾಗದಲ್ಲಿ ಹಲಸು ಹಣ್ಣಿನ ಕಂಡು ಬರುವುದು ಕಡಿಮೆ. ಹೀಗಾಗಿ ಪ್ರತಿ ವರ್ಷ ಬೇರೆ ಊರುಗಳಿಂದ ಹಲಸಿನ ಹಣ್ಣು ತಂದು ಇಲ್ಲಿ ಮಾರಾಟ ಮಾಡುತ್ತಿದ್ದೇವೆ. ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಇಲ್ಲಿನ ಗ್ರಾಹಕರು ಹಲಸಿನ ಹಣ್ಣಿನ ಸವಿ ಸವಿಯುತ್ತಿದ್ದಾರೆ. –ಶಂಕ್ರಪ್ಪ ಪಾತ್ರೋಟಿ, ಹಲಸಿನ ಹಣ್ಣು ವ್ಯಾಪಾರಿ