Advertisement

ಆಹಾರದೊಂದಿಗೆ ಔಷಧೀಯ ಗುಣದ ಹಲಸು

06:00 AM Jun 24, 2018 | Team Udayavani |

ಉಡುಪಿ: ಒಂದೊಮ್ಮೆ ನಿರ್ಲಕ್ಷ್ಯಕ್ಕೊಳಗಾಗಿದ್ದ ಹಲಸಿಗೆ ಮತ್ತೆ ಬೇಡಿಕೆ ಬರುತ್ತಿದೆ. ಹಲಸು ಮೇಳ, ಪ್ರದರ್ಶನಗಳ ಪರಿಣಾಮದಿಂದ ಹಲಸಿಗೆ ಮಾರುಕಟ್ಟೆ ದೊರೆಯುತ್ತಿದೆ. ಇತರ ದೇಶಗಳಂತೆ ನಮ್ಮಲ್ಲಿಯೂ ಹಲಸನ್ನು ಪ್ರಮುಖ ಬೆಳೆಯಂತೆ ಬೆಳೆಸಲು ಇದು ಸಕಾಲ ಎಂದು ಶಾಸಕ ಕೆ. ರಘುಪತಿ ಭಟ್‌ ಹೇಳಿದರು.

Advertisement

ದೊಡ್ಡಣಗುಡ್ಡೆ ಪುಷ್ಪ ಹರಾಜು ಕೇಂದ್ರದ (ರೈತ ಸೇವಾ ಕೇಂದ್ರ) ಆವರಣದಲ್ಲಿ ಜಿಲ್ಲಾಡಳಿತ, ಜಿ.ಪಂ., ತೋಟಗಾರಿಕಾ ಇಲಾಖೆ ಹಾಗೂ ಶ್ರೀ ಕ್ಷೇ.ಧ.ಗ್ರಾ.ಯೋ. ಸಹಯೋಗದಲ್ಲಿ ಆಯೋಜಿಸಲಾದ ಎರಡು ದಿನಗಳ ಉಡುಪಿ ಜಿಲ್ಲಾ ಮಟ್ಟದ “ಹಲಸು ಮೇಳ – 2018’ನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಹಲಸು ಆಹಾರ ಮಾತ್ರವಲ್ಲದೆ ಅದರಲ್ಲಿ ಔಷಧೀಯ ಗುಣಗಳೂ ಇವೆ. ಖಾಲಿ ಪ್ರದೇಶಗಳಲ್ಲಿ ಹಲಸನ್ನು ಬೆಳೆಸಬಹುದು. ಹಲಸಿನ ಉತ್ಪನ್ನ ಒದಗಿಸಿ ಮಾಹಿತಿ ನೀಡುವ ಮತ್ತು ರೈತರನ್ನು ಪ್ರೋತ್ಸಾಹಿಸುವ ಹಲಸು ಮೇಳ ಶ್ಲಾಘನೀಯ ಕಾರ್ಯಕ್ರಮ ಎಂದು ರಘುಪತಿ ಭಟ್‌ ಹೇಳಿದರು.

ಜಿ.ಪಂ. ಅಧ್ಯಕ್ಷ ದಿನಕರ ಬಾಬು ದೀಪ ಬೆಳಗಿಸಿ ಮಾತನಾಡಿ, ಮಾಹಿತಿ ಕಾರ್ಯಾಗಾರಗಳನ್ನು ಏರ್ಪಡಿಸಿ ಯುವಜನತೆಗೆ ಹಲಸಿನ ಬಗ್ಗೆ ಮಾಹಿತಿ ನೀಡಬೇಕು ಎಂದರು. ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಹಲಸು ಮೇಳಗಳಿಂದ ಜಾಗೃತಿ ಸಾಧ್ಯ ಎಂದರು.

ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿ.ಪಂ. ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕ ಕುಮಾರ್‌ ಕೊಡ್ಗಿ, ಬ್ರಹ್ಮಾವರ ವಲಯ ಕೃಷಿ ಹಾಗೂ ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ| ಎಸ್‌.ಯು. ಪಾಟೀಲ್‌, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ| ಬಿ. ಧನಂಜಯ, ಶ್ರೀ ಕ್ಷೇ.ಧ.ಗ್ರಾ. ಯೋಜನೆ ಉಡುಪಿ ಜಿಲ್ಲಾ ನಿರ್ದೇಶಕ ಪುರುಷೋತ್ತಮ ಪಿ.ಕೆ. ಉಪಸ್ಥಿತರಿದ್ದರು. ತೋಟಗಾರಿಕಾ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ ಸ್ವಾಗತಿಸಿ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ ಬಿ.ವಿ. ವಂದಿಸಿದರು. ಕುಂದಾಪುರ ತಾಲೂಕು ಹಿರಿಯ ಸಹಾಯಕ ನಿರ್ದೇಶಕ ಸಂಜೀವ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. 

ಭವಿಷ್ಯದ ಅಮರ ಫ‌ಲ ಹಲಸು!
ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಮಾತನಾಡಿ, ಹವಾಮಾನ ಬದಲಾವಣೆಯ ದುಷ್ಪರಿಣಾಮದಿಂದ ಇತರ ಹಣ್ಣುಗಳು ನಾಶವಾದರೂ ಹಲಸು ಮಾತ್ರ ಹಾಗೆಯೇ ಉಳಿಯುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಹಾಗಾಗಿ ಹಲಸು ಮಾತ್ರ ಭವಿಷ್ಯದ ಹಣ್ಣಾಗಿ (ಫ್ಯೂಚರ್‌ ಫ್ರುಟ್‌) ಉಳಿಯಬಹುದು. ಅದನ್ನು ಬೆಳೆಸಲು ಮುಂದಾಗಬೇಕೆಂದರು. 

Advertisement

ಸುಮಾರು 70 ಕೆ.ಜಿ. ತೂಕದ ಹಲಸು ವೇದಿಕೆಯಲ್ಲಿ ಗಮನ ಸೆಳೆಯಿತು.
ವಿವಿಧ ಜಾತಿಯ  ಹಲಸಿನ ಹಣ್ಣು, ಸಸಿಗಳು ಸಾರ್ವಜನಿಕರಿಗೆ ಲಭ್ಯವಾದವು.
ಸಾಂಪ್ರದಾಯಿಕ ತಿನಿಸುಗಳ ಜತೆಗೆ ಹಲಸಿನ ಹಣ್ಣಿನ ಐಸ್‌ಕ್ರೀಂ ಕೂಡ ಆಕರ್ಷಿಸಿತು.
ಹಲಸನ್ನು ತುಂಡು ಮಾಡುವ ಮೂಲಕ ಹಲಸಿನ ಮೇಳಕ್ಕೆ ಚಾಲನೆ.
ದೊಡ್ಡಬಳ್ಳಾಪುರ ತೂಬೆಗೆರೆ ಹಲಸು ಬೆಳೆಗಾರರು ಕೂಡ ಭಾಗಿ.

Advertisement

Udayavani is now on Telegram. Click here to join our channel and stay updated with the latest news.

Next