Advertisement

ಸರಕಾರದಿಂದ ಬೃಹತ್‌ ಉದ್ಯೋಗ ಮೇಳ: ಇಂದು, ನಾಳೆ ಬೆಂಗಳೂರಿನಲ್ಲಿ ಕಾರ್ಯಕ್ರಮ

01:01 AM Feb 26, 2024 | Team Udayavani |

ಬೆಂಗಳೂರು: ರಾಜ್ಯದ ನಿರುದ್ಯೋಗಿ ಯುವಜನತೆಗೆ ಸೂಕ್ತ ಕೌಶಲಾಧಾರಿತ ತರಬೇತಿ ನೀಡಿ, ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಫೆ. 26 ಮತ್ತು 27ರಂದು ಕೌಶಲಾಭಿವೃದ್ಧಿ ಇಲಾಖೆ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಯುವ ಸಮೃದ್ಧಿ ಸಮ್ಮೇಳನ-2024 ಆಯೋಜಿಸಲಾಗಿದೆ.

Advertisement

ಇಲಾಖೆಯ ವೆಬ್‌ಸೈಟ್‌ ಮೂಲಕ 60 ಸಾವಿರಕ್ಕೂ ಅಧಿಕ ಉದ್ಯೋಗಾರ್ಥಿಗಳು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. 1.10 ಲಕ್ಷಕ್ಕೂ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವಷ್ಟು ಕಂಪೆನಿಗಳು ಪಾಲ್ಗೊಳ್ಳಲಿವೆ. ಇದರಲ್ಲಿ ಎಸೆಸೆಲ್ಸಿ, ಪಿಯುಸಿ, ಡಿಪ್ಲೋಮಾ, ಐಟಿಐ, ಪದವಿ, ಸ್ನಾತಕೋತ್ತರ ಪದವೀಧರರ ಸಹಿತ ಎಲ್ಲ ಶೈಕ್ಷಣಿಕ ಹಂತಗಳ ಶಿಕ್ಷಣ ಪಡೆದ ಅಭ್ಯರ್ಥಿಗಳು ಇದ್ದಾರೆ. ಅನುತ್ತೀರ್ಣಗೊಂಡವರಿಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಅವರವರ ಶೈಕ್ಷಣಿಕ ಅರ್ಹತೆ ಆಧರಿಸಿ ಕೌಶಲ ತರಬೇತಿ ಕೊಡಲಾಗುತ್ತದೆ. ಕನಿಷ್ಠ 50 ಸಾವಿರ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸುವ ಗುರಿ ಇದೆ. ನೋಂದಣಿ ಮಾಡಿದವರಲ್ಲದೆ 2 ದಿನಗಳ ಕಾಲ ಉದ್ಯೋಗಾಕಾಂಕ್ಷಿಗಳು ನೇರ ವಾಗಿಯೇ ಬಂದು ಭಾಗವಹಿಸಲು ರಾಜ್ಯ ಸರಕಾರ ಅವಕಾಶ ಕಲ್ಪಿಸಿದೆ.

ಇ-ಕೌಶಲ ಕಲಿಕೆ ವ್ಯವಸ್ಥೆ
ಒಂದೇ ಸೂರಿನಡಿಯಲ್ಲಿ ವೃತ್ತಿಪರ ಕೌಶಲಕ್ಕೆ ಅನುಗುಣವಾಗಿ ಉದ್ಯೋಗಾವಕಾಶ ಕಲ್ಪಿಸುವುದು ಸಮ್ಮೇಳನದ ಉದ್ದೇಶವಾಗಿದ್ದು, ಪ್ರಸ್ತುತ ಕೈಗಾರಿಕಾ ಅಗತ್ಯಗಳಿಗೆ ಅನುಗುಣವಾಗಿ ತರಬೇತಿ ನೀಡಿ ಮಾನವ ಸಂಪನ್ಮೂಲ ದೊರಕಿಸಲು ಆದ್ಯತೆ ನೀಡಲಾಗಿದೆ. ಇಂಟರ್ನ್ಶಿಪ್‌, ಅಂಪ್ರಂಟಿಸ್‌ಶಿಪ್‌, ಲೈವ್‌ ಪ್ರಾಜೆಕ್ಟ್, ಗಿಗ್‌ ವರ್ಕ್‌ ಮತ್ತು ಕಲಿಯುವಿಕೆಯನ್ನು ಪ್ರೋತ್ಸಾಹಿಸಲಾಗುತ್ತದೆ. ಭವಿಷ್ಯದ ಕೌಶಲಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ 30ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಪ್ರವೇಶಿಸಲು ಕೌಶಲ ಆಕಾಂಕ್ಷಿಗಳಿಗೆ ಇ-ಕೌಶಲ ಲರ್ನಿಂಗ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ ಎಂಬ ಆನ್‌ಲೈನ್‌ ವೇದಿಕೆ ಕಲ್ಪಿಸಲಾಗಿದೆ.

ಇನ್‌ಫೋಸಿಸ್‌ ಸ್ಪ್ರಿಂಗ್‌ ಬೋರ್ಡ್‌, ಆರ್‌ವಿ ಸ್ಕಿಲ್ಸ್‌ ಇನ್‌ಸ್ಟಿಟ್ಯೂಟ್‌, ಕೆರಿಯರ್‌ ಪ್ರಪ್‌, ಐಬಿಎಂ ಸ್ಕಿಲ್ಸ್‌ ಬಿಲ್ಡ್‌, ಅಮೆರಿಕನ್‌ ಇಂಡಿಯನ್‌ ಫೌಂಡೇಶನ್‌, ಕ್ವೆಸ್ಟ್‌ ಅಲಯನ್ಸ್‌ ಸಂಸ್ಥೆಗಳ ಮೂಲಕ 10 ಸಾವಿರಕ್ಕೂ ಅಧಿಕ ವೀಡಿಯೋ ಕೋರ್ಸ್‌ ಮೂಲಕ ಕಲಿಕೆ ಮಾಡಬಹುದು.

ಮುಖ್ಯಮಂತ್ರಿ ಉದ್ಘಾಟನೆ
ಸೋಮವಾರ ಬೆಳಗ್ಗೆ 11 ಗಂಟೆಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದು, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ರಾಜೀವ್‌ ಚಂದ್ರಶೇಖರ್‌ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮೇಳದ ಲಾಂಛನ ಅನಾವರಣಗೊಳಿಸಲಿದ್ದಾರೆ. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌, ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಕೌಶಲಾಭಿವೃದ್ಧಿ ಸಚಿವ ಡಾಣ ಶರಣಪ್ರಕಾಶ್‌ ಪಾಟೀಲ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

Advertisement

ರಾಜ್ಯದ ಯುವಜನತೆಗೆ ಭವಿಷ್ಯದ ಬೇಡಿಕೆಯನ್ನು ಗಮನದಲ್ಲಿಟ್ಟು ಕೊಂಡು ಕೌಶಲಾಭಿವೃದ್ಧಿ ಮಾಡುವುದರ ಜತೆಗೆ ಉದ್ಯೋಗಾವಕಾಶವನ್ನು ಕಲ್ಪಿಸುವ ಸಲು ವಾಗಿ ಎರಡು ದಿನಗಳ ಕಾಲ ಬೆಂಗ  ಳೂರಿ ನಲ್ಲಿ ಯುವ ಸಮೃದ್ಧಿ ಸಮ್ಮೇಳನ ಉದ್ಯೋಗ ಮೇಳವನ್ನು ಆಯೋಜಿಸ ಲಾಗಿದೆ.
– ಡಾ| ಶರಣಪ್ರಕಾಶ್‌ ಪಾಟೀಲ್‌, ಕೌಶಲಾಭಿವೃದ್ಧಿ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next