Advertisement

ಹಲಸು ಕೇರಳದ ಅಧಿಕೃತ ಹಣ್ಣು : ಘೋಷಣೆ

09:50 AM Mar 24, 2018 | Team Udayavani |

ಕಾಸರಗೋಡು: ಕೇರಳ ಸರಕಾರವು ಹಲಸಿನ ಹಣ್ಣನ್ನು ರಾಜ್ಯದ ಅಧಿಕೃತ ಹಣ್ಣೆಂದು ಘೋಷಣೆ ಮಾಡಿದೆ. ಕೃಷಿ ಸಚಿವ ವಿ.ಎಸ್‌. ಸುನಿಲ್‌ ಕುಮಾರ್‌ ವಿಧಾನಸಭೆಯಲ್ಲಿ ಈ ಘೋಷಣೆಯನ್ನು ಮಾಡಿದ್ದಾರೆ. ಕೇರಳದ ಹಲಸಿಗೆ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಉತ್ತಮ ಮಾರುಕಟ್ಟೆ ಸೃಷ್ಟಿಸುವ ನಿಟ್ಟಿನಲ್ಲಿ, ಹಲಸಿನ ಸಾವಯವ ಮತ್ತು ಪೌಷ್ಟಿಕಾಂಶಯುಕ್ತ ಗುಣವನ್ನು ಸಾದರಪಡಿಸುವಲ್ಲಿ ಈ ಕ್ರಮ ಸಹಾಯಕವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ. ಹಲಸಿಗೆ ಉತ್ತಮ ಮಾರುಕಟ್ಟೆ, ಹೆಚ್ಚಿನ ಮೌಲ್ಯ ಸಹಿತ, ಮೌಲ್ಯವರ್ಧಿತ ಉತ್ಪನ್ನಗಳಿಗೆ ಬೇಡಿಕೆಯು ಹೆಚ್ಚಲಿದೆ. ಪ್ರತಿ ವರ್ಷ ಸುಮಾರು 32 ಕೋಟಿ ಹಲಸಿನ ಹಣ್ಣುಗಳು ರಾಜ್ಯದಲ್ಲಿ ಉತ್ಪಾದನೆಯಾಗುತ್ತಿವೆ. ಇದರಲ್ಲಿ 30 ಶೇಕಡಾ ಹಣ್ಣುಗಳು ನಷ್ಟವಾಗುತ್ತಿವೆ. ಹಲಸನ್ನು ಬ್ರಾಂಡ್‌ ಮಾಡುವ ಮೂಲಕ ಒಟ್ಟು 15,000 ಕೋಟಿ ರೂ.ಮೌಲ್ಯದ ಹಲಸು ಮತ್ತು ಹಲಸಿನ ಉತ್ಪನ್ನಗಳನ್ನು ಮಾರಾಟ ಮಾಡುವ ಗುರಿ ಸರಕಾರದ ಮುಂದಿದೆ ಎಂದು ಅವರು ತಿಳಿಸಿದ್ದಾರೆ. ಕೇರಳದ ಹಲಸು ಸಾವಯವ ರೀತಿಯಲ್ಲಿ ಬೆಳೆಸಲಾಗುತ್ತಿದೆ. 

Advertisement

ರಾಸಾಯನಿಕ ಮತ್ತು ಕ್ರಿಮಿನಾಶಕಗಳನ್ನು ಸಿಂಪಡಿಸದೆ ಬೆಳೆದ ನೈಸರ್ಗಿಕ ಹಲಸಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆಯು ಹೆಚ್ಚಿದೆ. ಹಲಸು ಬೆಳೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಸ್ತುತ ವರ್ಷ ಹಲಸಿನ ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸುವ ಯೋಜನೆಯು ರಾಜ್ಯ ಸರಕಾರದ ಮುಂದಿದೆ ಎಂದು ಸಚಿವರು ತಿಳಿಸಿದ್ದಾರೆ.
ವಯನಾಡು ಜಿಲ್ಲೆಯ ಅಂಬಲವಯಲಿನಲ್ಲಿ ಹಲಸು ಹಣ್ಣಿನ ಸಂಶೋಧನಾ ಕೇಂದ್ರ ಆರಂಭಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಆನೆಯು ಕೇರಳದ ರಾಜ್ಯ ಪ್ರಾಣಿಯಾಗಿದ್ದು, ಕರಿಮೀನು ರಾಜ್ಯದ ಅಧಿಕೃತ ಮೀನಾಗಿದೆ. ಹಾರ್ನ್ ಬಿಲ್‌ (ಮಂಗಟ್ಟೆ) ಕೇರಳದ ಅಧಿಕೃತ ರಾಜ್ಯ ಪಕ್ಷಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next