Advertisement

ಜೈಪುರ ಸಮೀಪ ಹಳಿ ತಪ್ಪಿದ ಜಬಲ್ಪುರ –ಅಜ್‌ಮೇರ್‌ ಎಕ್ಸ್‌ಪ್ರೆಸ್‌ ರೈಲು

10:37 AM Feb 01, 2019 | udayavani editorial |

ಜೈಪುರ : ಜೈಪುರ ಮತ್ತು ಅಜ್‌ಮೇರ್‌ ನಡುವಿನ ಸೂಪರ್‌ ಫಾಸ್ಟ್‌  ರೈಲು ಇಂದು ಶುಕ್ರವಾರ ಹಳಿ ತಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಜೈಪುರದಿಂದ ಸುಮಾರು 15 ಕಿ.ಮೀ.ದೂರದ ಸಂಗನೇರ್‌ ರೈಲು ನಿಲ್ದಾಣಕ್ಕೆ ಸಮೀಪ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ದಯೋದಯ ಎಕ್ಸ್‌ಪ್ರೆಸ್‌ನ ಇಂಜಿನ್‌ ಮಗುಚಿಕೊಂಡಿತು. ಆ ಕೂಡಲೇ ಇಂಜಿನ್‌ ಬೆನ್ನಿಗಿದ್ದ ಕೋಚ್‌ ಹಳಿ ತಪ್ಪಿತು ಎಂದು ಉತ್ತರ ರೈಲ್ವೆ ವಕ್ತಾರ ತಿಳಿಸಿದರು. 

ರೈಲಿನ ಡ್ರೈವರ್‌ಗೆ ಗಾಯಗಳಾದವು; ಆದರೆ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

ದಯೋದಯ ಎಕ್ಸ್‌ಪ್ರೆಸ್‌ ಮಧ್ಯಪ್ರದೇಶದ ಜಬಲ್ಪುರ ಮತ್ತು ರಾಜಸ್ಥಾನದ ಅಜ್‌ಮೇರ್‌ ನಡುವೆ ಸಂಚರಿಸುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next