Advertisement

Ayodhya: ಜ. 22ರ ಅನಂತರ ಅಯೋಧ್ಯೆಗೆ ಭೇಟಿ ನೀಡಿ ಪೂಜೆ ಸಲ್ಲಿಸುವೆ: ಸಿಎಂ ಸಿದ್ದರಾಮಯ್ಯ

12:59 AM Jan 13, 2024 | Team Udayavani |

ಶಿವಮೊಗ್ಗ: “ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣ ಮಾಡಿ ಬಿಜೆಪಿ ರಾಜಕೀಯ ಮಾಡಲು ಹೊರಟಿದೆ. ದೇವರನ್ನು ರಾಜಕೀಯವಾಗಿ ಬಳಸಿಕೊಳ್ಳುವುದಕ್ಕೆ ನಮ್ಮ ವಿರೋಧವೇ ವಿನಾ ಶ್ರೀರಾಮ ಚಂದ್ರನಿಗೆ ಅಲ್ಲ. ಜ. 22ರ ಬಳಿಕ ಅಯೋಧ್ಯೆಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್‌ ಕಾರ್ಯಕರ್ತರು ಕೂಡ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುತ್ತಾರೆ. ನಾನೂ ರಾಮಮಂದಿರಕ್ಕೆ ಹೋಗುತ್ತೇನೆ. ಆದರೆ ಜ. 22ರಂದು ಅಲ್ಲ. ಮುಂದೆ ಎಂದಾದರೂ ಹೋಗಿ ಮಂದಿರವನ್ನು ನೋಡಿ ಬರುತ್ತೇನೆ. ಜ. 22ರಂದು ನಾವೂ ಶ್ರೀರಾಮ ಪೂಜೆ ಮಾಡುತ್ತೇವೆ ಎಂದರು.

ಯಾವಾಗ ಬೇಕಿದ್ದರೂ ಹೋಗಬಹುದು: ಖರ್ಗೆ
ಶ್ರೀರಾಮನ ಮೇಲೆ ನಂಬಿಕೆ ಇರುವವರು ಯಾವಾಗ ಬೇಕಿದ್ದರೂ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಬಹುದು. ನಾನು ಇದನ್ನು ಈ ಹಿಂದೆಯೇ ಸ್ಪಷ್ಟಪಡಿಸಿದ್ದೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಜ. 22ರ ಕಾರ್ಯಕ್ರಮದ ಆಹ್ವಾನ ತಿರಸ್ಕರಿಸಿದ್ದನ್ನು ಟೀಕಿಸುತ್ತಿರುವುದು ಬಿಜೆಪಿಯ ಸಂಚಿನ ಒಂದು ಭಾಗ ಎಂದಿದ್ದಾರೆ. ನಾವು ಯಾರನ್ನೂ ನೋಯಿಸಲು ಇಷ್ಟಪಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next