Advertisement

ಟ್ರಂಪ್‌ ಪುತ್ರಿ ಜತೆ ಸುಷ್ಮಾ ಮಾತುಕತೆ

11:19 AM Sep 20, 2017 | Team Udayavani |

ನ್ಯೂಯಾರ್ಕ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಲಹೆಗಾರ್ತಿ, ಪುತ್ರಿ ಇವಾಂಕಾ ಟ್ರಂಪ್‌ ಅವರು ಮಂಗಳವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಮಹಿಳಾ ಉದ್ಯಮಶೀಲತೆ ಹಾಗೂ ಕಾರ್ಯಪಡೆ ರಚನೆಗೆ ಸಂಬಂಧಿಸಿದಂತೆ ಚರ್ಚಿಸಿದ್ದಾರೆ.

Advertisement

ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನಕ್ಕೆಂದು ಅಮೆರಿಕಕ್ಕೆ ತೆರಳಿರುವ ಸುಷ್ಮಾ ಅವರು ತಮ್ಮ ಬಿಡುವಿನ ವೇಳೆ ಇವಾಂಕಾ ಅವರನ್ನು ಭೇಟಿಯಾಗಿದ್ದಾರೆ. ಜಾಗತಿಕ ವಾಣಿಜ್ಯೋದ್ಯಮಿಗಳ ಸಮ್ಮೇಳನ (ಜಿಇಎಸ್‌) ನವೆಂಬರ್‌ನಲ್ಲಿ ಭಾರತದಲ್ಲೇ ನಡೆಯಲಿದ್ದು, ಅದಕ್ಕೆ ಇವಾಂಕಾ ನೇತೃತ್ವದ ನಿಯೋಗ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಇವಾಂಕಾ ಟ್ರಂಪ್‌, “”ಮಹಿಳಾ ಉದ್ಯಮಶೀಲತೆಗೆ ಸಂಬಂಧಿಸಿ ಸುಷ್ಮಾ ಸ್ವರಾಜ್‌ ಅವರೊಂ ದಿಗಿನ ಮಾತುಕತೆ ಧನಾತ್ಮಕವಾಗಿತ್ತು. ಅಲ್ಲದೆ, ಭಾರತ ಹಾಗೂ ಅಮೆರಿಕದಲ್ಲಿ ಕಾರ್ಯಪಡೆ ರಚನೆ ಬಗ್ಗೆಯೂ ಚರ್ಚಿಸ ಲಾಗಿದೆ” ಎಂದು ಟ್ವೀಟ್‌ ಮಾಡಿದ್ದಾರೆ. ಅಮೆರಿಕ ಹಾಗೂ ಭಾರತದ ಜಂಟಿ ಸಂಯೋಜನೆಯಲ್ಲಿ ಜಿಇಎಸ್‌ ನ.28 ರಿಂದ 30ರ ತನಕ ಹೈದರಾಬಾದ್‌ನಲ್ಲಿ ನಡೆಯಲಿದೆ. ವಿಶ್ವದ ಎಲ್ಲಾ ದೇಶಗಳಿಂ ದಲೂ ಹೂಡಿಕೆದಾರರು, ಉದ್ಯಮಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸುಷ್ಮಾ  ಅವರು ಒಂದು ವಾರಗಳ ಕಾಲ ಇಲ್ಲೇ ಇರಲಿದ್ದು, ದ್ವಿಪ ಕ್ಷೀಯ ಹಾಗೂ ತ್ರಿಪಕ್ಷೀಯ ಮಾತು ಕತೆಗಳು ನಡೆಯಲಿವೆ. 20ಕ್ಕೂ ಹೆಚ್ಚು ಅಂಶಗಳನ್ನು ದ್ವಿಪಕ್ಷೀಯ ಮಾತುಕತೆ ವೇಳೆ ಚರ್ಚಿಸಲಿದ್ದಾರೆ. ಬಿಡುವಿನ ವೇಳೆಯಲ್ಲಿ ಟ್ಯುನೀಸಿಯಾ, ಬಹ್ರೈನ್‌, ಲ್ಯಾಟ್ವಿಯಾ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಹಾಗೂ ಡೆನ್ಮಾರ್ಕ್‌ ದೇಶಗಳ ಪ್ರತಿನಿಧಿ ಗಳೊಂದಿಗೆ ಮಾತುಕತೆ ನಡೆಸಿದ್ದಾರೆ.

ರೊಹಿಂಗ್ಯಾ ಬಗ್ಗೆ ಚರ್ಚಿಸಿಲ್ಲ: ಇದೇ ವೇಳೆ ಸುಷ್ಮಾ ಸ್ವರಾಜ್‌ ಅವರು ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಅವರೊಂದಿಗೂ ಮಾತುಕತೆ ನಡೆಸಿದ್ದಾರೆ. ಆದರೆ ರೊಹಿಂಗ್ಯಾ ಸಮಸ್ಯೆ ಕುರಿತು ಯಾವುದೇ ಚರ್ಚೆ ನಡೆಸಿಲ್ಲ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ತಿಳಿಸಿದೆ.

Advertisement

ಆಕರ್ಷಕ ವ್ಯಕ್ತಿತ್ವ ಎಂದು ಬಣ್ಣನೆ
ಟ್ವಿಟರ್‌ನಲ್ಲಿ ಸುಷ್ಮಾ ಸ್ವರಾಜ್‌ ಅವರ ಬಗ್ಗೆ ಗುಣಗಾನ ಮಾಡಿರುವ ಇವಾಂಕಾ “65ರ ಹರೆಯದ ಸುಷ್ಮಾ ಸ್ವರಾಜ್‌ ಅವರನ್ನು ತುಂಬಾ ಗೌರವಿಸುತ್ತೇನೆ. ಅವರು ಒಬ್ಬ ವರ್ಚಸ್ಸಿರುವ ವಿದೇಶಾಂಗ ಸಚಿವೆ. ಅವರದ್ದು ಆಕರ್ಷಕ ವ್ಯಕ್ತಿತ್ವ’ ಎಂದು ಬಣ್ಣಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next