Advertisement

#ShivSenaCheatsMaharashtra ಟ್ವೀಟರ್ ನಲ್ಲಿ ಟ್ರೆಂಡಿಂಗ್; ಹಿಂದುತ್ವ ಮರೆತ ಶಿವಸೇನಾ!

09:54 AM Nov 12, 2019 | Team Udayavani |

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಬಿಜೆಪಿ ನಿರಾಕರಿಸಿದ ನಂತರ ರಾಜ್ಯಪಾಲ ಭಗತ್ ಸಿಂಗ್ ಕೋಶಾರಿ ಅವರು ಭಾನುವಾರ ತಡರಾತ್ರಿ ಶಿವಸೇನಾಗೆ ಬಹುಮತ ಸಾಬೀತುಪಡಿಸುವಂತೆ ಆಹ್ವಾನ ನೀಡಿದ್ದರು. ರಾಜ್ಯದಲ್ಲಿ ಸರ್ಕಾರ ರಚನೆ ಬಗ್ಗೆ ಕುತೂಹಲ ಕೆರಳಿಸಿರುವ ನಡುವೆಯೇ ಟ್ವೀಟರ್ ನಲ್ಲಿ #ShivSenaCheatsMaharashtra ಟ್ರೆಂಡಿಂಗ್ ಆಗತೊಡಗಿದೆ.

Advertisement

ಬಿಜೆಪಿ ಜತೆ ಸರ್ಕಾರ ರಚಿಸದೇ ಎನ್ ಸಿಪಿ, ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಮುಂದಾಗಿರುವ ಶಿವಸೇನಾದ ನಡವಳಿಕೆ, ಬದ್ಧತೆ ಬಗ್ಗೆ ಟ್ವೀಟರ್ ನಲ್ಲಿ ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶಿವಸೇನಾ ಅಭ್ಯರ್ಥಿಗಳಿಗೆ ಮತ ಹಾಕಿದ ಬಿಜೆಪಿ ಮತದಾರರಿಗೆ ಶಿವಸೇನಾ ಮೋಸ ಮಾಡಿದೆ. ಸಿಎಂ ಹುದ್ದೆಗೆ ಬೇಡಿಕೆ ಇಡುವ ಮೂಲಕ ಜನಾದೇಶವನ್ನೇ ಶಿವಸೇನಾ ಕಿತ್ತೊಗೆದಿದೆ. ಅಧಿಕಾರಕ್ಕಾಗಿ ಶಿವಸೇನಾ ಹಿಂದುತ್ವವನ್ನೇ ಮರೆತು ಬಿಟ್ಟಿದೆ ಎಂದು (ಶಿವಸೇನಾ ಮಹಾರಾಷ್ಟ್ರಕ್ಕೆ ಮೋಸಮಾಡಿದೆ ಎಂಬ ಹ್ಯಾಶ್ ಟ್ಯಾಗ್ ಮೂಲಕ) ಕಿಡಿಕಾರಿದ್ದಾರೆ.

288 ಮಹಾರಾಷ್ಟ್ರ ವಿಧಾನಸಭಾ ಸದಸ್ಯಬಲದಲ್ಲಿ ಬಿಜೆಪಿ 105 ಸ್ಥಾನಗಳಲ್ಲಿ, ಶಿವಸೇನಾ 56 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಆದರೆ ಚುನಾವಣಾ ಪೂರ್ವ ಒಪ್ಪಂದದಂತೆ ತಮಗೆ ಎರಡೂವರೆ ವರ್ಷ ಸಿಎಂ ಸ್ಥಾನ ನೀಡಬೇಕೆಂದು ಶಿವಸೇನಾ ಒತ್ತಾಯಿಸಿತ್ತು. ಆದರೆ 50:50 ಸೂತ್ರದಡಿ ಒಪ್ಪಂದ ಆಗಿಲ್ಲ, ಬಿಜೆಪಿಯ ಫಡ್ನವೀಸ್ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ಸ್ಪಷ್ಟಪಡಿಸಿತ್ತು.

Advertisement

Advertisement

Udayavani is now on Telegram. Click here to join our channel and stay updated with the latest news.

Next