Advertisement
ಈ ಸುದ್ದಿ ಓದಿದಾಗ, ಹೆಮ್ಮೆ, ಆಶ್ಚರ್ಯ ಮತ್ತು ಕುತೂಹಲ ಒಟ್ಟೊಟ್ಟಿಗೇ ಆಯಿತು. ಒಂದು ಕಾಲಕ್ಕೆ ವೇಶ್ಯೆ ಅನ್ನಿಸಿ ಕೊಂಡಿದ್ದಾಕೆ, ಅಲ್ಲಿಂದ ಎದ್ದು ಬಂದು ರಾಷ್ಟ್ರಪ್ರಶಸ್ತಿ ಪಡೆಯುವ ಮಟ್ಟಕ್ಕೆ ಬೆಳೆದರಲ್ಲ: ಆ ವಿವರಗಳನ್ನು ಅವರಿಂದಲೇ ಕೇಳಬೇಕು ಅನ್ನಿಸಿತು. ಒಂದಿಡೀ ವಾರದ ಸತತ ಪ್ರಯತ್ನದ ನಂತರ, ಕಡೆಗೂ ಮಾತಿಗೆ ಸಿಕ್ಕಿದ ಜಯಮ್ಮ ಭಂಡಾರಿ, ತಮ್ಮ ಬದುಕಿನ ಕಥೆ- ವ್ಯಥೆಯನ್ನು ಮುಚ್ಚುಮರೆಯಿಲ್ಲದೆ ಹೇಳಿಕೊಂಡರು. ಅದು ಹೀಗೆ…
Related Articles
Advertisement
ದಿನಗಳು ಕಳೆದಂತೆಲ್ಲ, ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ನನಗೇ ವಾಕರಿಕೆ ಬರತೊಡಗಿತು. ಎಲ್ಲಾದ್ರೂ ಭಿಕ್ಷೆ ಬೇಡಿಕೊಂಡು ಬದುಕೋದೇ ವಾಸಿ ಅನ್ನಿಸ್ತು. ಕಡೆಗೊಮ್ಮೆ ಗಟ್ಟಿ ನಿರ್ಧಾರ ಮಾಡಿ, ಗಂಡನಿಗೆ ಗುಡ್‌ಬೈ ಹೇಳಿ, ಮಗಳನ್ನು ಎತ್ತಿಕೊಂಡು ಬಂದುಬಿಟ್ಟೆ. ಒಂದು ಎನ್‌ಜಿಓದಲ್ಲಿ ಆಶ್ರಯ ಪಡೆದೆ. ಅಲ್ಲಿಯೇ ಜೈ ಸಿಂಗ್ ಥಾಮಸ್ ಎಂಬ, ದೇವರಂಥ ವ್ಯಕ್ತಿಯೊಬ್ಬರ ಪರಿಚಯವಾಯಿತು. ಅದೇ ನನ್ನ ಬದುಕಿನ ಟರ್ನಿಂಗ್ ಪಾಯಿಂಟ್. ಅವರು, ನನ್ನ ಬದುಕಿನ ಕಥೆ ಕೇಳಿ ಮರುಗಿದರು. ಆ ಎನ್‌ಜಿಓದಲ್ಲೇ ಕೆಲಸ ಕೊಡಿಸಿದರು. ಅಷ್ಟೇ ಅಲ್ಲ; ನಿನ್ನಂತೆಯೇ ನೋವು ತಿನ್ನುತ್ತಿರುವ ಸಾವಿರಾರು ಹೆಂಗಸರಿದ್ದಾರಲ್ಲ; ಅವರ ಏಳಿಗೆಗಾಗಿ ನೀನೇ ಒಂದು ಎನ್‌ಜಿಓ ಆರಂಭಿಸಬಾರದೇಕೆ ಎಂಬ ಸಲಹೆಯನ್ನೂ ಕೊಟ್ಟರು. ಅವರ ಮಾರ್ಗದರ್ಶನದಲ್ಲಿಯೇ ಕೆಲಸ ಕಲಿತೆ. ನಂತರ ವೇಶ್ಯೆಯರಿಗೆ, ಅವರ ಮಕ್ಕಳಿಗೆ, ನಿರ್ಗತಿಕರಿಗೆ ಆಶ್ರಯ ನೀಡುವ ಉದ್ದೇಶದಿಂದ- ಚೈತನ್ಯ ಮಹಿಳಾ ಮಂಡಳಿ ಎಂಬ ಎನ್‌ಜಿಓ ಆರಂಭಿಸಿದೆ. ಇದಾಗಿದ್ದು 1998ರಲ್ಲಿ.
ಹಿತೈಷಿಗಳು ಉದಾರವಾಗಿ ನೀಡಿದ ಹಣ, ನಾನು ಆಪದ್ಧನದ ರೂಪದಲ್ಲಿ ಉಳಿಸಿದ್ದ ಹಣ- ಇದಿಷ್ಟೇ ಅಲ್ಪ ಬಂಡವಾಳದಲ್ಲಿಎನ್ಜಿಓ ಶುರುವಾಯಿತು. ಮೊದಲು ಆಶ್ರಯ ನೀಡುವುದು, ನಂತರ ಕೌನ್ಸೆಲಿಂಗ್ ಕೊಡಿಸಿ, ಕೆಲಸಕ್ಕೆ ಸೇರಿಸುವುದು ನನ್ನ ಉದ್ದೇಶವಾಗಿತ್ತು. ಆದರೆ, ದಿಢೀರನೆ ಕಸುಬು ಬಿಡಲಿಕ್ಕೆ ವೇಶ್ಯೆಯರು ರೆಡಿ ಇರ್ತಿರಲಿಲ್ಲ. ವೇಶ್ಯೆಯರ ಮನೆಗೆ ಬಂದು ಅವರನ್ನು ಕನ್ವಿನ್ಸ್ ಮಾಡೋಕೆ ನನ್ನ ಜೊತೆಗಿದ್ದವರೂ ಒಪ್ತಾ ಇರಲಿಲ್ಲ. ಕೆಲವರಂತೂ -ಮೊನ್ನೆ ಮೊನ್ನೆತನಕ ನೀನೂ ಇದೇ ಕಸುಬು ಮಾಡ್ತಿದ್ದೆ ಅಲ್ವ? ಈಗೇನು ಇದ್ದಕ್ಕಿದ್ದಂತೆ ಜ್ಞಾನೋದಯ ಆಗಿದೆಯಲ್ಲ… ಎಂದು ವ್ಯಂಗ್ಯವಾಗಿ ಕೇಳುತ್ತಿದ್ದರು. 2006ರಲ್ಲಿ, ಜೈಲಿನಲ್ಲಿ ನಡೆದ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಏಡ್ಸ್ ಜಾಗೃತಿ ತಂಡದ ನಿರ್ದೇಶಕ, ನನ್ನನು ಕಂಡಾಕ್ಷಣ- ಈ ಮೊದುÉ ನೀನು ಬಸ್‌ಸ್ಟಾಂಡ್‌ನಲ್ಲಿ ಗಿರಾಕಿಗೆ ಕಾಯ್ತಾ ಇರಿ¤ದ್ದೆ ಅಲ್ವ ಎಂದು ಎಲ್ಲರ ಎದುರೇ ಜೋರಾಗಿ ಕೇಳಿಬಿಟ್ಟಿದ್ದ! “ಈ ಕೆಲಸ ಬಿಟ್ಟು ನನ್ನ ಜೊತೆ ಬನ್ನಿ’ ಎಂದು ಮನವಿ ಮಾಡಿದರೆ- ‘ನೋಡೂ, ಈಗ ನಮಗೆ ದಿನಾಲೂ ದುಡ್ಡು ಸಿಗುತ್ತೆ, ಡ್ರಿಂಕ್ಸ್ ಸಿಗುತ್ತೆ. ನಾನ್‌ವೆಜ್ ಊಟ ಸಿಗುತ್ತೆ. ನೀನೂ ಅದನ್ನೆಲ್ಲಾ ಕೊಡೋದಾದ್ರೆ ಖಂಡಿತಾ ಬರಿ¤àವಿ..’ ಎಂಬ ಉತ್ತರ ಹೆಂಗಸರಿಂದ ಬರುತ್ತಿತ್ತು. ವೇಶ್ಯೆಯಾಗಿಯೇ ಬದುಕಿದ್ರೆ ಐದೇ ವರ್ಷದಲ್ಲಿ ಏಡ್ಸ್ ಬರುತ್ತೆ. ಆಮೇಲೆ ನಿಮ್ಮನ್ನು ಈ ಸಮಾಜ ಬೀದಿನಾಯಿಗಿಂತ ಕಡೆಯಾಗಿ ನೋಡುತ್ತೆ. ಹಾಗಾಗೋದು ಬೇಡ. ನಿಮ್ಮಿಂದ ಆಗುವಂಥ ಕೆಲಸ ಮಾಡಿ. ಇರುವುದನ್ನೇ ಹಂಚಿಕೊಂಡು ತಿನ್ನೋಣ. ನಿಮಗೆ ಮಾತ್ರವಲ್ಲ; ನಿಮ್ಮ ಮಕ್ಕಳಿಗೂ ಆಶ್ರಯ ಕೊಡ್ತೀನಿ. ಅವರನ್ನು ಸತøಜೆಗಳನ್ನಾಗಿ ರೂಪಿಸೋಣ. ನನ್ನೊಂದಿಗೆ ಬನ್ನಿ’ ಎಂದು ಬೇಡಿಕೊಂಡೆ. ನನ್ನ ಈ ಪರಿಶ್ರಮಕ್ಕೆ ತುಂಬಾ ನಿಧಾನವಾಗಿ ಆದ್ರೂ ಪ್ರತಿಫಲ ದೊರೆಯಿತು. ಈಗ, ನನ್ನ ಸುಪರ್ದಿಯಲ್ಲಿ 45 ಹೆಣ್ಣು ಮಕ್ಕಳಿವೆ. (ಅವರೊಂದಿಗೇ ನನ್ನ ಮಗಳೂ ಇದ್ದಾಳೆ) ಇವರೆಲ್ಲಾ ವೇಶ್ಯೆಯರ ಮಕ್ಕಳೇ. ಎಲ್ಲರೂ ನನ್ನನ್ನು ಪ್ರೀತಿಯಿಂದ “ಅಮ್ಮಾ’ ಅನ್ನುತ್ತವೆ. ಸ್ವಂತ ತಾಯಿಯನ್ನು ಕಾಣದೇ ಬೆಳೆದವಳು ನಾನು. ಅಂಥವಳು ಈಗ 45 ಮಕ್ಕಳಿಗೆ ಅಮ್ಮನಾಗಿ ಪ್ರೀತಿ ಹಂಚಾ¤ ಇದೀನಿ. ಇಷ್ಟಲ್ಲದೆ, 3000ಕ್ಕೂ ಹೆಚ್ಚು ಅನಾಥ ಮಕ್ಕಳಿಗೆ, ವೇಶ್ಯಾವೃತ್ತಿ ಯಲ್ಲಿರುವ ತಮ್ಮ ಅಮ್ಮಂದಿರೊಂದಿಗೇ ಬದುಕುತ್ತಿರುವ 600 ಹೆಣ್ಣು ಮಕ್ಕಳಿಗೆ ಊಟ, ಬಟ್ಟೆ, ಪಠ್ಯಪುಸ್ತಕದ ಖರ್ಚುಗಳನ್ನು ನಾವು ಕೊಡ್ತಿದೀವಿ. ಎನ್‌ಜಿಓ ಅಂದ್ರೆ ತುಂಬಾ ಫಂಡ್ ಸಿಗುತ್ತೆ ಎಂಬ ಭಾವನೆ ಹಲವರಿಗಿದೆ. ಸತ್ಯ ಏನೆಂದ್ರೆ, ದೊಡ್ಡ ದೊಡ್ಡ ಎನ್‌ಜಿಓಗಳಿಗೆ, ನಯವಾಗಿ ವ್ಯವಹಾರ ಮಾಡುವವರಿಗೆ ಜಾಸ್ತಿ ದುಡ್ಡು ಸಿಗುತ್ತೆ. ನಾನು ಹೆಚ್ಚು ಓದಿದವಳಲ್ಲ. ಹಾಗಾಗಿ, ಜಾಸ್ತಿ ಹಣ ಪಡೆಯುವ “ಮಾರ್ಗ’ ನನಗೆ ಗೊತ್ತಿಲ್ಲ. ಈಗಲೂ ಪರಿಚಿತರು, ಹಿತೈಷಿಗಳು ಉದಾರವಾಗಿ ನೀಡುವ ಹಣದ ಬಲದಿಂದಲೇ ನಮ್ಮ ಸಂಸ್ಥೆ ನಡೀತಾ ಇದೆ. ಒಂದು ಮಾತು ಕೇಳಿ: ಅವಳು ವೇಶ್ಯೆಯೇ ಆಗಿರಬಹುದು. ಅಂಥವಳು ಕೂಡ ಪ್ರತಿಯೊಬ್ಬ ಗಂಡಿನಲ್ಲೂ ಒಬ್ಬ ಪ್ರೇಮಿಯನ್ನು ಹುಡುಕ್ತಾಳೆ. ಆದ್ರೆ, ಗಂಡಸರು, ಹದ್ದಿನಂತೆ ಮೇಲೆರಗಿ ಬರ್ತಾರೆ. ಒರಟಾಗಿ, ವಿಕೃತವಾಗಿ ವರ್ತಿಸ್ತಾರೆ. ಈ ಆಘಾತದಿಂದ, ನೋವಿನಿಂದ ಪಾರಾಗಲಿಕ್ಕೆ ವೇಶ್ಯೆಯರು ಕುಡಿತ ಕಲಿತಾರೆ. ಅವರ ಮಕ್ಕಳು ಕೂಡ ಅಮ್ಮಂದಿರೊಂದಿಗೆ ಕುಳಿತು ಕುಡಿಯೋದನ್ನು ಕಲಿತುಬಿಡ್ತಾರೆ. ಅಮ್ಮಂದಿರ ಜೊತೆಗೇ ಇರುವ ಮಕ್ಕಳ ಮೇಲೂ ಕೆಲವೊಮ್ಮೆ ಲೈಂಗಿಕ ದೌರ್ಜನ್ಯಗಳು ಆಗಿಬಿಡ್ತವೆ. ನನ್ನ ಆಶ್ರಯದಲ್ಲಿರುವ ಎಷ್ಟೋ ಮಕ್ಕಳು- “ನಮ್ಮಮ್ಮ ದಿನಾಲೂ ಕುಡೀತಾರೆ. ಡೈಲಿ ತಪ್ಪದೇ ಬಿರಿಯಾನಿ ಕೊಡಿಸ್ತಾಳೆ. ನೀವ್ಯಾಕೆ ಹಾಗೆ ಮಾಡಲ್ಲ?’ ಅಂತ ಕೇಳ್ತವೆ. ಅವರಿಗೆ ಸಾವಧಾನದಿಂದ ಉತ್ತರ ಹೇಳಿ, ಶಾಲೆಗೆ ಕಳಿಸ್ತೇನೆ. ಸೆಕ್ಸ್ ವರ್ಕರ್ ,ಅಮ್ಮಮ್ಮಾ ಅಂದ್ರೆ 45 ವರ್ಷದತನಕ ಆ ವೃತ್ತೀಲಿ ಇರ್ತಾರೆ. ಆನಂತರ ಅವರನ್ನು ಮಾತಾಡಿಸೋರೂ ಗತಿಯಿರಲ್ಲ. ಹೊಟ್ಟೆ ತುಂಬಿಸ್ಕೋಬೇಕಲ್ವ? ಅದಕ್ಕೆ ಅವರೇನು ಮಾಡ್ತಾರೆ ಅಂದ್ರೆ- ಐದಾರು ಹುಡುಗೀರನ್ನ ಇಟ್ಕೊಂಡು ತಾವೇ ಒಂದು ವೇಶ್ಯಾವಾಟಿಕೆ ಅಡ್ಡೆ ಆರಂಭಿಸಿಬಿಡ್ತಾರೆ. ಆಮೇಲೆ, ಈ ವಿಷಚಕ್ರ ಮುಂದುವರಿತಾನೇ ಹೋಗುತ್ತೆ. ಬೇರೇನೂ ಅಲ್ಲ, ಈ ವಯಸ್ಸಾದವರಿಗೆ ಮೂರು ಹೊತ್ತಿನ ಊಟಕ್ಕೆ ವ್ಯವಸ್ಥೆ ಆಗಿಬಿಟ್ಟರೆ ಹೊಸಬರು ವೇಶ್ಯಾವಾಟಿಕೆಗೆ ಬರೋದು ನಿಲ್ಲುತ್ತೆ. ವೇಶ್ಯೆಯರ ಮಕ್ಕಳಿಗೆ ಶಿಕ್ಷಣ ದೊರಕಿದ್ರೆ ಸಮಾಜದ ಬದಲಾವಣೆಗೂ ಅವಕಾಶ ಇರುತ್ತೆ ಅಂದೊRಂಡೇ ಕೆಲಸ ಮಾಡಿದೆ. 18 ವರ್ಷಗಳ ನನ್ನ ಪರಿಶ್ರಮದ ಕೆಲಸವನ್ನು ಸರ್ಕಾರ ಗುರುತಿಸಿದ್ದು, ಕಡೆಗೊಮ್ಮೆ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆಯುವಂತಾದದ್ದು ನನ್ನ ಬದುಕಿನ ಸುವರ್ಣಘಳಿಗೆ. ಪ್ರಶಸ್ತಿ ಪಡೆದೆನಲ್ಲ; ಆಗ ನನ್ನ ಬದುಕಿನ ಕಥೆಯೆಲ್ಲಾ ಒಂದು ಸಿನಿಮಾದ ಥರಾ ಕಣ್ಮುಂದೆ ತೇಲಿಹೋಯ್ತು. ಹೊಸ ಹುಮ್ಮಸ್ಸು, ಜವಾಬ್ದಾರಿಯೊಂದಿಗೆ ಸೇವೆ ಮುಂದುವರಿಸ್ತೀನಿ. ನಾಲ್ಕು ಮಂದಿಗೆ ನೆರಳು ನೀಡುವ ಶಕ್ತಿ ಕೊಡು ದೇವರೇ ಎಂದು ಪ್ರಾರ್ಥಿಸ್ತೀನಿ’ ಅನ್ನುತ್ತಾ ಭಾವುಕರಾಗಿ, ಮಾತು ಮುಗಿಸಿದರು ಜಯಮ್ಮ ಭಂಡಾರಿ. chaithanyamahilamandali.jimdo.comಲ್ಲಿ ಜಯಮ್ಮನವರ ಹೋರಾಟದ ಬದುಕಿನ ವಿವರಗಳಿವೆ. ಒಮ್ಮೆ ನೋಡಿ. ಸಾಧ್ಯವಾದ್ರೆ ಸಹಾಯ ಮಾಡಿ. ಎ.ಆರ್. ಮಣಿಕಾಂತ್