ಕೋವಿಡ್ ಸಂಕಷ್ಟ ಕಾಲದ ನಡುವೆ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿರುವ 2021 ಬಜೆಟ್ ಆತ್ಮನಿರ್ಭರ ಭಾರತದ ಹಾದಿಯಲ್ಲಿ ರೂಪಿತವಾಗಿದೆ. ಆರ್ಥಿಕತೆಯ ವಿ ಆಕಾರದ ಚೇತರಿಕೆ ಹಾಗೂ ವ್ಯಾಕ್ಸಿನ್ ಎಂಬ ವಿ ಇವೆರಡೂ ಅಂಶಗಳನ್ನು ಸರಿಯಾಗಿ ಜೋಡಿಸಿ ದರೆ ಭಾರತ ಎತ್ತರಕ್ಕೇರುತ್ತದೆ ಎಂದು ಎಫ್ಕೆಸಿಸಿಐ ಮಾಜಿ ಅಧ್ಯಕ್ಷ ಡಾ| ಜೆ. ಆರ್. ಬಂಗೇರ ಹೇಳಿದರು.
ಕೇಂದ್ರ ಬಜೆಟ್ ಬಗ್ಗೆ ಉದಯವಾಣಿ ಸಂವಾ ದ ದಲ್ಲಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ದೇಶದ ಆರ್ಥಿಕತೆ ಜರ್ಜರಿತ ವಾಗಿದ್ದಂಥ ವೇಳೆ ಮಂಡಿಸಲಾಗಿರುವ ಈ ಬಜೆಟ್ ಆಶಾದಾಯಕವಾಗಿದೆ ಎಂದರು.
ಕೊರೊನಾ ಬಂದ ನಂತರ ಕೇವ ಲ ಆರೇ ತಿಂಗಳಲ್ಲಿ ಕೊರೊನಾ ಲಸಿಕೆ ತಯಾರಿಸಿ ಜನರ ಆತಂಕವನ್ನು ದೂರ ಮಾಡಲಾಗಿದೆ. ಇದೇ ವೇಳೆಯಲ್ಲೇ ಕೊರೊನಾ ಲಸಿಕೆ ಗಾಗಿ ಬಜೆಟ್‌ನಲ್ಲಿ 35 ಸಾವಿರ ಕೋಟಿ ನೀಡಿದ್ದು ಉತ್ತಮವಾದ ಬೆಳವಣಿಗೆ ಎಂದು ಶ್ಲಾ ಸಿದರು.
ಬಜೆಟ್‌ನಲ್ಲಿ 2 ಸಾವಿರ ಕೋಟಿ ರೂ ಹೂಡಿ ಕೆಯ ಮೂಲಕ 7 ಬಂದರುಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಹೇಳ ಲಾಗಿದೆ. ಆದರೆ ಅದರಲ್ಲಿ ನಮ್ಮ ರಾಜ್ಯದ ಬಂದರಿನ ಹೆಸರೇ ಇಲ್ಲ. ಹೀಗಾಗಿ, ನಮ್ಮ ಜನಪ್ರತಿನಿಧಿಗಳು ಮಂಗಳೂರು ಬಂದರನ್ನು ಅಭಿವೃದ್ಧಿ ಮಾಡಬೇಕು ಎಂದು ಕೇಂದ್ರಕ್ಕೆ ಕೇಳಬೇಕು ಎಂದ ಡಾ. ಬಂಗೇರ, ಬ್ಯಾಡ್ ಬ್ಯಾಂಕ್ ಸ್ಥಾಪನೆಯ ವಿಚಾರದಲ್ಲೂ ಕೆಲವು ಪ್ರಶ್ನೆಗಳನ್ನು ಎದುರಿಟ್ಟರು. “”ಬ್ಯಾಡ್ ಬ್ಯಾಂಕ್ ಅಲ್ಲ, ಪುನಃಶ್ಚೇತನ ಬ್ಯಾಂಕ್ ಎಂದು ಅದನ್ನು ಕರೆಯಬೇಕು. ಅನುತ್ಪಾದಕ ಆಸ್ತಿಯನ್ನೆಲ್ಲ ಒಂದೆಡೆ ಹಾಕಿದರೆ, ಅಲ್ಲೂ ಎನ್‌ಪಿಎ ಸೃಷ್ಟಿಯಾಗುವುದಿಲ್ಲ ಎನ್ನುವುದಕ್ಕೆ ಏನು ಖಾತ್ರಿ? ಎನ್‌ಪಿಎ ಹೆಚ್ಚಾಗಿ ಸಣ್ಣ ಸಣ್ಣ ಉದ್ಯಮಿದಾರರ, ಕೈಗಾರಿಕೆಗಳ ಸಾಲವಲ್ಲ ಅದು ದೊಡ್ಡವವರಿಂದ ಸೃಷ್ಟಿಯಾದದ್ದು ” ಎಂದರು.
ಮುಂದುವರಿದು, “”ಕೋವಿಡ್ ಸಮಯದಲ್ಲಿ ಲಕ್ಷಾಂತರ ಜನ ನಿರುದ್ಯೋಗಿಗಳಾಗಿದ್ದಾರೆ. ಅಂಥವರಿಗಾಗಿಯೇ ವಿಶೇಷ ಅನುದಾನ ಘೋ ಷಣೆ ಮಾಡ ಬೇಕಿತ್ತು. ಅಂಥವರಿಗೆ ವಿಶೇಷ ಯೋಜ ನೆಯನ್ನು ರೂಪಿಸಿದ್ದರೆ ಅನುಕೂಲವಾಗುತ್ತಿತ್ತು.” ಎಂದರು. “”ಕೇಂದ್ರ ಸಣ್ಣ ಸಣ್ಣ ಕೈಗಾರಿಕೆಗಳನ್ನು ಮರೆ ಯುತ್ತಿದೆ. ದೊಡ್ಡ ಕೈಗಾರಿಕೆಗಳಿಗೆ ಮಾತ್ರ ಅನಿಲ ಸಂಪರ್ಕ ನೀಡುತ್ತಿರು ವುದರಿಂದ ಸಣ್ಣ ಕೈಗಾರಿಕೆ ಗಳಿಗೆ ಹೊಡೆತ ಬೀಳುತ್ತಿದೆ. ಹಾಗೆ ಮಾಡುವ ಬದಲು ಸಣ್ಣ ಕೈಗಾರಿಕೆಗಳಿಗೂ ಅನಿಲ ಸಂಪರ್ಕ ನೀಡಿದರೆ ಅವುಗಳು ಸಹ ಉಳಿದುಕೊಳ್ಳುತ್ತವೆ.
ಬಜೆಟ್‌ನಲ್ಲಿ ರೈಲು, ಮೆಟ್ರೋ, ರಸ್ತೆ, ಹೆದ್ದಾರಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ರಸ್ತೆಗಳ ಅಭಿವೃದ್ಧಿಗೆ ಸಾವಿರಾರೂ ಕೋಟಿ ರೂ. ಬಿಡುಗಡೆ ಮಾಡಿರುವ ಸರ್ಕಾರ ಆ ಯೋಜನೆಗಳನ್ನು ಶೀಘ್ರ ಮುಗಿಸ ಬೇಕು. ಆ ನಿಟ್ಟಿನಲ್ಲಿ ಹಣ ಬಿಡುಗಡೆ ಮಾಡಿದರೆ ಕಾಮಗಾರಿ ಮುಗಿಯುತ್ತದೆ. ಕೆಲವು ಯೋಜನೆ ಗಳು ಕುಂಟುತ್ತಾ ಸಾಗುತ್ತವೆ ಆ ರೀತಿಯಾಗದಂತೆ ಕೇಂದ್ರ ಸರ್ಕಾರ ಹೆಜ್ಜೆಯಿಟ್ಟರೆ ಜನ ಸರ್ಕಾರದ ಕೆಲಸಗಳನ್ನು ಪ್ರಶಂಸಿಸುತ್ತಾರೆ” ಎಂದು ಹೇಳಿದರು.