Advertisement

ಈ ವರ್ಷದ ಆದಾಯ ತೆರಿಗೆ ಹೊಸ ಫಾರಂ ಬಿಡುಗಡೆ

07:34 PM Apr 01, 2022 | Team Udayavani |

ನವದೆಹಲಿ: ಆದಾಯ ತೆರಿಗೆ ಇಲಾಖೆ 2021-22ನೇ ಸಾಲಿನ ವಿತ್ತೀಯ ವರ್ಷಕ್ಕೆ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವ ನಿಟ್ಟಿನಲ್ಲಿ ಫಾರಂಗಳನ್ನು ಶುಕ್ರವಾರ ಬಿಡುಗಡೆ ಮಾಡಿದೆ.

Advertisement

ಪ್ರಸಕ್ತ ಸಾಲಿನಲ್ಲಿ ಸೇರ್ಪಡೆ ಮಾಡಲಾಗಿರುವ ಹೊಸ ಅಂಶವೆಂದರೆ ತೆರಿಗೆ ಪಾವತಿ ಮಾಡುವವರು ಸಾಗರೋತ್ತರ ಮೂಲಗಳಿಂದ ನಿವೃತ್ತಿಯ ಸಂದರ್ಭಗಳಲ್ಲಿ ಪಡೆಯುವ ಆದಾಯ ವಿವರಗಳನ್ನು ನಮೂದಿಸಬೇಕು ಎಂದು ಸೂಚನೆ ನೀಡಿದೆ.

ಇದನ್ನೂ ಓದಿ:ಸಹಕಾರ ಸಮ್ಮೇಳನ: ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಉದ್ಘಾಟನೆ

ಐಟಿಆರ್‌ ಫಾರಂ 1(ಸಹಜ್‌), ಐಟಿಆರ್‌ ಫಾರಂ 4 (ಸುಗಮ್‌) ಹೆಚ್ಚಿನ ಸಣ್ಣ ಮತ್ತು ಮಧ್ಯಮ ತೆರಿಗೆ ಪಾವತಿದಾರರಿಗೆ ಅನ್ವಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next