Advertisement

ಟೊಯೋಟಾದಿಂದ ಇಟಿಯೋಸ್‌ ಸುರಕ್ಷತಾ ಡ್ರೈವ್‌

11:29 AM Aug 30, 2017 | |

ಬೆಂಗಳೂರು: ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಸಂಸ್ಥೆ ಮಹದೇವಪುರದ ಇ-ಜೋನ್‌ ಕ್ಲಬ್‌ನಲ್ಲಿ ಇತೀ¤ಚೆಗೆ ಗ್ರಾಹಕರಿಗಾಗಿ ಟೋಯೊಟಾ ಇಟಿಯೋಸ್‌ ಸೇಫ್ಟಿ ಎಕ್ಸ್‌ಪಿರಿಯೆನ್ಷಿಯಲ್‌ ಡ್ರೈವ್‌ (ಸುರಕ್ಷತಾ ಅನುಭವ ಡ್ರೈವ್‌) ನಡೆಸಿತು.

Advertisement

ಸತತ ಒಂಬತ್ತು ದಿನ ನಡೆದ ಸುರಕ್ಷತಾ ಕಾರ್ಯಕ್ರಮದಲ್ಲಿ ಗ್ರಾಹಕರು ಮತ್ತು ಅವರ ಕುಟುಂಬದವರಿಗೆ ಇಟಿಯೋಸ್‌ ಕಾರು ಚಾಲನೆಯ ಸುರಕ್ಷತಾ ಲಕ್ಷಣಗಳು, ಸುರಕ್ಷತೆ ಮನಸ್ಸು, ಪಾದಚಾರಿ ಸುರಕ್ಷತೆ, ರಸ್ತೆ ಸುರಕ್ಷತೆ, ಚಾಲಕನ ಸುರಕ್ಷತೆ ಹಾಗೂ ವಾಹನ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕಾರ್ಯ ಇದಾಗಿತ್ತು.

ಕಾರ್ಯಕ್ರಮವನ್ನು ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಪ್ರೈ.ಲಿ.,ನ ಹಿರಿಯ ಉಪಾಧ್ಯಕ್ಷ ಅಟಿಟೋಶಿ ಟಕೆಮುರಾ ಅವರು ಉದ್ಘಾಟಿಸಿ ಮಾತನಾಡಿದರು. ಇಟಿಯೋಸ್‌ ಸರಣಿ ಕಾರುಗಳನ್ನು ಬಳಸುತ್ತಿರುವ ಗ್ರಾಹಕರ ಹಾಗೂ ಕುಟುಂಬದ ಸುರಕ್ಷತೆ ನಮಗೆ ಮುಖ್ಯವಾಗಿದೆ. ಇಟಿಯೋಸ್‌ ಗ್ರಾಹಕರು ಭಾರತದ ಸೇಫೆಸ್ಟ್‌ ಡ್ರೈವರ್‌ಗಳಾಗಬೇಕು.

ಅಪಘಾತಗಳಿಂದ ಮುಕ್ತವಾಗಿರಬೇಕು ಎಂಬುದು ನಮ್ಮ ಇಚ್ಛೆ. ಆದ್ದರಿಂದ ಸುರಕ್ಷತಾ ಉಪಕ್ರಮಗಳನ್ನು ಮನವರಿಕೆ ಮಾಡುವ ಸಲುವಾಗಿ ಈ ಶಿಬಿರವನ್ನು ಹಮ್ಮಿಕೊಂಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಹಲವಾರು ಸುರಕ್ಷತಾ ಕ್ವಿಜ್‌ಗಳು, ಫ್ಯಾಮಿಲಿ ಗೇಮ್ಸ್‌, ಸೇಫ್ಟಿ ಸ್ಪರ್ಧೆಗಳು, ಕಿಡ್ಸ್‌ ಎಂಗೇಜ್‌ಮೆಂಟ್‌ ಹಾಗೂ ಸೇಫ್ಟಿ ಎಕ್ಸ್‌ಪೆರಿಮೆನ್ಷಿಯಲ್‌ ಡ್ರೈವ್‌ ಅನ್ನು ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next