Advertisement

ITF-Dharwad ; ಪ್ರಜ್ವಲ್-ನಿತೀನ್ ಜೋಡಿಗೆ ಡಬಲ್ಸ್ ಪ್ರಶಸ್ತಿ

11:18 PM Oct 21, 2023 | |

ಧಾರವಾಡ : ಇಲ್ಲಿಯ ಜಿಲ್ಲಾ ಲಾನ್ ಟೆನಿಸ್ ಸಂಸ್ಥೆಯ ಅಂಗಣದಲ್ಲಿ ನಡೆದಿರುವ ಐಟಿಎಫ್-ಧಾರವಾಡ ಪುರುಷರ ವಿಶ್ವ ಟೆನಿಸ್ ಟೂರ್ ಪಂದ್ಯಾವಳಿ ಇದೀಗ ಅಂತಿಮ ಘಟ್ಟ ತಲುಪಿದ್ದು, ಡಬಲ್ಸ್ನಲ್ಲಿ ಪ್ರಜ್ವಲ್-ನಿತೀನ್ ಜೋಡಿ ಪ್ರಶಸ್ತಿ ಬಾಚಿಕೊಂಡಿದೆ.

Advertisement

ಧಾರವಾಡ ಜಿಲ್ಲಾ ಟೆನಿಸ್ ಸಂಸ್ಥೆ ರಾಜಾಧ್ಯಕ್ಷ ಪೆವಿಲಿಯನ್ ಕೋರ್ಟ್ ನಲ್ಲಿ ಶನಿವಾರ ನಡೆದ ಡಬಲ್ಸ್ ಅಂತಿಮ ಹಣಾಹಣಿಯ ಪಂದ್ಯಾವಳಿಯಲ್ಲಿ 3ನೇ ಶ್ರೇಯಾಂಕಿತ ಜೋಡಿ ಪ್ರಜ್ವಲ್ ದೇವ ಮತ್ತು ನಿತಿನಕುಮಾರ ಸಿನ್ಹಾ ಡಬಲ್ಸ್ ಜೋಡಿಯು ಶ್ರೇಯಾಂಕ ರಹಿತ ಜೋಡಿಯಾದ ಸಾಯಿ ಕಾರ್ತಿಕ ರೆಡ್ಡಿಗಂಟಾ ಮತ್ತು ಮನಿಷ್ ಸುರೇಶಕುಮಾರ ಅವರನ್ನು 6-4, 6-3 ರಿಂದ ನೇರ ಸೆಟ್‌ಗಳಲ್ಲಿ ಪರಾಭವಗೊಳಿಸಿತು.

ಈ ಮೂಲಕ 1500 ಅಮೇರಿಕನ್ ಡಾಲರ್ ನಗದು ಬಹುಮಾನವನ್ನು ಪ್ರಜ್ವಲ್-ನಿತೀನ ಜೋಡಿ ಪಡೆದರೆ, ರೆಡ್ಡಿ ಮತ್ತು ಮನಿಷ್ 900 ಅಮೆರಿಕನ್ ಡಾಲರ್‌ಗಳಿಂದ ತೃಪ್ತಿಪಡಬೇಕಾಯಿತು.ಏಷಿಯನ್ ಗೈಮ್ಸ್ ನಲ್ಲಿ ಭಾರತಕ್ಕೆ ರಜತ ಪದಕ ತಂದುಕೊಟ್ಟ 28ರ ಹರೆಯದ ರಾಮಕುಮಾರ ರಾಮನಾಥನ್ ಮತ್ತು ದಿಗ್ವಿಜಯ ಪ್ರತಾಪಸಿಂಗ್ ಐಟಿಎಫ್ ವಿಶ್ವ ಪುರುಷರ ಟೆನಿಸ್ ಟೂರ್ ಪಂದ್ಯಾವಳಿಯಲ್ಲಿ ಸಿಂಗಲ್ಸ್ ಪ್ರಶಸ್ತಿಗಾಗಿ ರವಿವಾರ ಹಣಾಹಣಿ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next