Advertisement

ಇಟಾಲಿಯನ್‌ ಓಪನ್‌ ವನಿತಾ ಸಿಂಗಲ್ಸ್‌ : ಐಗಾ ಸ್ವಿಯಾಟೆಕ್‌ ಸ್ವೀಟ್‌ ವಿಕ್ಟರಿ

02:30 AM May 17, 2021 | Team Udayavani |

ರೋಮ್‌: ಫ್ರೆಂಚ್‌ ಓಪನ್‌ ಚಾಂಪಿಯನ್‌, ಪೋಲೆಂಡಿನ ಟೀನೇಜರ್‌ ಆಟಗಾರ್ತಿ ಐಗಾ ಸ್ವಿಯಾಟೆಕ್‌ “ಇಟಾಲಿಯನ್‌ ಓಪನ್‌’ ಫೈನಲ್‌ನಲ್ಲಿ ಸ್ವೀಟ್‌ ವಿಕ್ಟರಿಯೊಂದಿಗೆ ಟ್ರೋಫಿಯನ್ನು ಹಿಡಿದೆತ್ತಿ ಸಂಭ್ರಮಿಸಿದ್ದಾರೆ.

Advertisement

ರವಿವಾರದ ಫೈನಲ್‌ನಲ್ಲಿ 19 ವರ್ಷದ ಸ್ವಿಯಾಟೆಕ್‌ 2019ರ ಚಾಂಪಿಯನ್‌, 9ನೇ ಶ್ರೇಯಾಂಕದ ಜೆಕ್‌ ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾಗೆ ಒಂದೂ ಅಂಕ ಬಿಟ್ಟುಕೊಡದೆ ಜಬರ್ದಸ್ತ್ ಪ್ರದರ್ಶನ ನೀಡಿದರು. ಗೆಲುವಿನ ಅಂತರ 6-0, 6-0. ಈ ಏಕಪಕ್ಷೀಯ ಪಂದ್ಯ ಕೇವಲ 46 ನಿಮಿಷಗಳಲ್ಲಿ ಕೊನೆಗೊಂಡಿತು. ಇದರೊಂದಿಗೆ ಇನ್ನೆರಡೇ ವಾರಗಳಲ್ಲಿ ಆರಂಭವಾಗಲಿರುವ ಫ್ರೆಂಚ್‌ ಓಪನ್‌ ಗ್ರಾÂನ್‌ಸ್ಲಾಮ್‌ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸ್ವಿಯಾಟೆಕ್‌ ದಿಟ್ಟ ಹೆಜ್ಜೆಯೊಂದನ್ನು ಇರಿಸಿದಂತಾಯಿತು.

ಆಕ್ರಮಣಕಾರಿ ಪ್ರದರ್ಶನ
ಆರಂಭದಿಂದಲೇ ಆಕ್ರಮಣಕಾರಿ ಪ್ರದರ್ಶನ ನೀಡಿದ ಸ್ವಿಯಾಟೆಕ್‌ ಮೊದಲ ಸೆಟ್‌ ಅನ್ನು ಕೇವಲ 20 ನಿಮಿಷಗಳಲ್ಲಿ ವಶಪಡಿಸಿಕೊಂಡರು. ದ್ವಿತೀಯ ಸೆಟ್‌ನಲ್ಲೂ ಇದೇ ಜೋಶ್‌ ತೋರಿದ ಪೋಲಿಶ್‌ ಆಟಗಾರ್ತಿ, ಪ್ಲಿಸ್ಕೋವಾ ಮೇಲೆ ಸವಾರಿ ಮುಂದುವರಿಸಿದರು.
“ಐಯಾಮ್‌ ರಿಯಲೀ ರಿಯಲೀ ಹ್ಯಾಪ್ಪಿ’ ಎಂದು ಐಗಾ ಸ್ವಿಯಾಟೆಕ್‌ ಪ್ರತಿಕ್ರಿಯಿಸಿದರೆ, “ಇದನ್ನು ನಾನು ಸಾಧ್ಯವಾದಷ್ಟು ಬೇಗ ಮರೆಯಲೆತ್ನಿಸುತ್ತೇನೆ’ ಎಂಬುದಾಗಿ ಪರಾಜಿತ ಪ್ಲಿಸ್ಕೋವಾ ಹೇಳಿದರು. ಇದು ರೋಮ್‌ನಲ್ಲಿ ಪ್ಲಿಸ್ಕೋವಾ ಕಂಡ ಹ್ಯಾಟ್ರಿಕ್‌ ಫೈನಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next