ರೋಮ್: ಅಮೆರಿಕದ ಟಾಮಿ ಪೌಲ್ ಅವರನ್ನು ಪರಾಭವಗೊಳಿಸಿದ ಚಿಲಿಯ ನಿಕೋಲಸ್ ಜರ್ರಿ “ಇಟಾಲಿಯನ್ ಓಪನ್’ ಟೆನಿಸ್ ಪಂದ್ಯಾವಳಿಯ ಫೈನಲ್ ತಲುಪಿದ್ದಾರೆ. ರವಿವಾರದ ಫೈನಲ್‌ನಲ್ಲಿ ಮಾಜಿ ಚಾಂಪಿಯನ್, ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಅವರನ್ನು ಎದುರಿಸುವರು.
21ನೇ ಶ್ರೇಯಾಂಕದ ನಿಕೋಲಸ್ ಜರ್ರಿ 6-3, 6-7 (3), 6-3 ಅಂತರದಿಂದ ಟಾಮಿ ಪೌಲ್ ಆಟ ಮುಗಿಸಿದರು. ಇವರ ಆಟ 2 ಗಂಟೆ, 44 ನಿಮಿಷಗಳ ತನಕ ಸಾಗಿತು. ಇದು ಜರ್ರಿ ಕಾಣುತ್ತಿರುವ ಮೊದಲ “ಎಟಿಪಿ ಮಾಸ್ಟರ್ 1000′ ಫೈನಲ್.
ಜ್ವೆರೇವ್ ಚಿಲಿಯ ಮತ್ತೋರ್ವ ಆಟಗಾರ ಅಲೆಕ್ಸಾಂಡ್ರೊ ಟ್ಯಾಬಿಲೊ ವಿರುದ್ಧ 1-6, 7-6 (4), 6-2 ಅಂತರದಿಂದ ಗೆದ್ದು ಬಂದರು. ಹೀಗಾಗಿ “ಆಲ್ ಚಿಲಿಯನ್ ಫೈನಲ್’ ತಪ್ಪಿಹೋಯಿತು. ಟ್ಯಾಬಿಲೊ 3ನೇ ಸುತ್ತಿನಲ್ಲಿ ಜೊಕೋವಿಕ್ ಅವರನ್ನು ಮಣಿಸಿ ಸುದ್ದಿಯಾಗಿದ್ದರು.
ಜೊಕೋವಿಕ್‌ಗೆ ವೈಲ್ಡ್‌ಕಾರ್ಡ್
ಜಿನೇವಾ (ಸ್ವಿಜರ್ಲೆಂಡ್), ಮೇ 18: ಜೊಕೋವಿಕ್ ಅಚ್ಚರಿಯ ರೀತಿಯಲ್ಲಿ ಜಿನೇವಾ ಓಪನ್ ಟೆನಿಸ್‌ಗೆ ಪ್ರವೇಶ ಪಡೆದಿದ್ದಾರೆ. ಅವರಿಗೆ ಕೊನೆಯ ವೈಲ್ಡ್‌ಕಾರ್ಡ್ ಲಭಿಸಿತು.