Advertisement
ನಾನಿರುವ ಡಲ್ಲಾಸ್ ನಗರದ ಒಟ್ಟು ಜನಸಂಖ್ಯೆ 26 ಲಕ್ಷ. ಬುಧವಾರ ಸೋಂಕಿತ ಸಂಖ್ಯೆ 4,000 ಗಡಿದಾಟಿದೆ. 13 ಮಂದಿ ಮೃತಪಟ್ಟಿದ್ದಾರೆ. ದಿನದಿಂದ ದಿನಕ್ಕೆ ಆ ಸಂಖ್ಯೆ ವೃದ್ಧಿಸುತ್ತಿದೆ. ನನ್ನ ತಾಯ್ನಾಡಿಗೆ ಅಂತಹ ದಿನಗಳು ಬರಲೇಬಾರದು. ಅದಕ್ಕಾಗಿ ದೇಶವಾಸಿಗಳೆಲ್ಲರೂ ಸರ ಕಾರಗಳ ಆದೇಶವನ್ನು ಚಾಚೂತಪ್ಪದೆ ಪಾಲಿಸಿ ದೇಶವನ್ನು ಕೋವಿಡ್ 19 ಮಹಾಮಾರಿಯಿಂದ ರಕ್ಷಿಸಿ ಎಂದು ಭಾರತೀಯರಲ್ಲಿ ಮನವಿ ಮಾಡಿದ್ದಾರೆ.
ಎಸ್. ದುಗೇìಕರ್ ನಾಲ್ಕು ವರ್ಷ ಗಳಿಂದ ಡಲ್ಲಾಸ್ ನಗರದ ಸಿಗ್ನೇಟಿ ಟೆಕ್ನಾಲಯಲ್ಲಿ ಉದ್ಯೋಗದಲ್ಲಿದ್ದಾರೆ. ತಂದೆಯ ಮನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ತಾಯಿ ಮನೆ ಮಲ್ಪೆ. ಅವರ ಜತೆಯಲ್ಲಿದ್ದ ಪತ್ನಿ ಮಗು ಮೂರು ತಿಂಗಳ ಹಿಂದೆಯೇ ಊರಿಗೆ ಬಂದಿದ್ದಾರೆ. ಸ್ಟೇ ಎಟ್ ಹೋಂ
ಆಮೆರಿಕದಲ್ಲಿ ಲಾಕ್‌ಡೌನ್ ಇಲ್ಲ. ಸ್ಟೇ ಎಟ್ ಹೋಂ ಆದೇಶ ನೀಡಿದ್ದಾರೆ. ಯಾವುದೇ ಕಟ್ಟು ನಿಟ್ಟಿನ ಕ್ರಮ ಇಲ್ಲದಿದ್ದರೂ ಎಲ್ಲರೂ ಸ್ವ ಪ್ರೇರಣೆ ಯಿಂದ ಆದೇಶ ಪಾಲನೆ ಮಾಡುತ್ತಾರೆ. ರಸ್ತೆಗೆ ಯಾರೂ ಇಳಿಯದ ಕಾರಣ ರಸ್ತೆಗಳಲ್ಲಿ ಪೊಲೀಸರು ಇಲ್ಲ; ಲಾಠಿ ಗಳ ಸದ್ದೂ ಇಲ್ಲ. ಎಲ್ಲ ರಸ್ತೆಗಳು ಶ್ಮಶಾನಮೌನವಾಗಿವೆ. ನಿಯಮ ಪಾಲಿಸದವನು ಇಲ್ಲವೇ ಇಲ್ಲ ಎಂದಲ್ಲ; ಅಂಥವರ ಸಂಖ್ಯೆ ಶೇ. 2ರಷ್ಟು ಮಾತ್ರ.
Related Articles
Advertisement
ಇಂಡಿಯನ್ ಶಾಪ್‌ಗ್ಳು ಬಂದ್ಗುರುವಾರದಿಂದ 12 ದಿನಗಳ ಕಾಲ ಭಾರತೀಯರ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚಿಸಲಾ ಗಿದೆ. ಅಂಗಡಿಗಳಲ್ಲಿರುವ ಜಾಗ ಕಿರಿದಾಗಿದ್ದು, ಜನ ಸಂದಣಿ ಆದಾಗ ಅಂತರ ಕಾಯ್ದುಕೊಳ್ಳಲು ಕಷ್ಟವಾಗುತ್ತಿದೆ ಎಂಬುದೇ ಇದಕ್ಕೆ ಕಾರಣ. ದೊಡ್ಡ ಮಾಲ್‌ಗಳು ತೆರೆದಿ ರುತ್ತವೆ. ಭಾರತೀಯರ ಅಂಗಡಿಗಳಲ್ಲಿ ದೊರೆಯುತ್ತಿದ್ದ ಭಾರತದ ಕರಾವಳಿಯ ಮೀನು ಮಾಂಸಗಳು ಒಂದು ತಿಂಗಳ ಹಿಂದೆಯೇ ಸ್ಥಗಿತವಾಗಿವೆ. ಸ್ವರ್ಗಸದೃಶ ಭಾರತ
ಭಾರತದಲ್ಲಿ ಲಾಕ್‌ಡೌನ್ ಆಗಿರುವುದು ಅನಿವಾರ್ಯ. ನೀವೆಲ್ಲರೂ ಮನೆಯೊಳಗೇ ಇರಿ; ನೇರವಾಗಿ ಯಾರನ್ನೂ ಭೇಟಿ ಮಾಡಬೇಡಿ, ಸ್ನೇಹಿತರೊಂದಿಗೆ ಮಾತನಾಡಬೇಕಿದ್ದರೆ ವೀಡಿಯೋ ಕಾಲ್ ಮಾಡಿ. ಸ್ವರ್ಗಸದೃಶ ಭಾರತವನ್ನು ಇಲ್ಲಿನ ಹಾಗೆ ನರಕ ಮಾಡಬೇಡಿ, ಕೋವಿಡ್ 19
ದಿಂದ ರಕ್ಷಿಸಿ.
– ಆಕರ್ಷ್ ಎಸ್. ದುರ್ಗೆಕರ್ – ನಟರಾಜ್ ಮಲ್ಪೆ