ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ ಬುಧವಾರ(ಜುಲೈ 14) ಭರ್ಜರಿ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ. ಇದರಿಂದಾಗಿ ಐಟಿ ಕ್ಷೇತ್ರದ ಷೇರುಗಳು ಮತ್ತೆ ಲಾಭಗಳಿಸುವಲ್ಲಿ ನೆರವಾಗಿದೆ.
ಇದನ್ನೂ ಓದಿ:ಓಲಂಪಿಕ್‌ಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ವಿತರಣೆ
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಶೇ.0.25ರಷ್ಟು ಏರಿಕೆಯೊಂದಿಗೆ 52,904.05 ಅಂಕದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಳಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 0.26ರಷ್ಟು ಏರಿಕೆಯೊಂದಿಗೆ 15,853.95ರ ಗಡಿ ದಾಟಿದೆ.
ಇಂದು ಬೆಳಗ್ಗೆ ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟು ಮಂದಗತಿಯಲ್ಲಿ ಸಾಗಿತ್ತು. ಆದರೆ ದೇಶೀಯ ಐಟಿ ಷೇರುಗಳು ಭರ್ಜರಿ ವಹಿವಾಟಿನ ಪರಿಣಾಮ ಆರಂಭಿಕ ವಹಿವಾಟಿನಲ್ಲಾದ ನಷ್ಟ ಸರಿದೂಗಿಸುವಲ್ಲಿ ನೆರವಾಗಿದೆ.
ಇನ್ಫೋಸಿಸ್ ನ ಮೊದಲ ತ್ರೈಮಾಸಿಕದಲ್ಲಿ ಲಾಭ ಗಳಿಸಿದ್ದು, 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕೇಂದ್ರ ಸರ್ಕಾರ ಇಂದು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇ.28ರಷ್ಟು ತುಟ್ಟಿಭತ್ಯೆ ಘೋಷಿಸಿದ್ದು, ಇದು ಷೇರುಪೇಟೆ ವಹಿವಾಟಿನ ಮೇಲೆ ಪರಿಣಾಮ ಬೀರಿರುವುದಾಗಿ ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.